Subject: Second PUC Marks Card 2023
ದ್ವಿತೀಯ ಪಿಯುಸಿ ಉತ್ತೀರ್ಣ ವಿದ್ಯಾರ್ಥಿಗಳಿಗೆ ( Karnataka Second PU Exam Pass Students ) ಗುಡ್ ನ್ಯೂಸ್ ಎನ್ನುವಂತೆ, ಶಾಲಾ ಶಿಕ್ಷಣ ಇಲಾಖೆಯಿಂದ ಈಗ ಪ್ರಮುಖ ಪ್ರಮಾಣಪತ್ರಗಳನ್ನು ಡಿಜಿಲಾಕ್ ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಅಂಗೈನಲ್ಲೇ ಅಂಕಪಟ್ಟಿ ಸೇರಿದಂತೆ ಇತರೆ ಪ್ರಮಾಣ ಪತ್ರಗಳು ಸಿಗುವಂತೆ ಮಾಡಲಾಗಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಪರೀಕ್ಷೆಗೆ ನಿರ್ದೇಶಕರು, 2023ರ ದ್ವಿತೀಯ ಪಿಯು ಮುಖ್ಯ ಪರೀಕ್ಷೆಯಲ್ಲಿ ( Karnataka 2nd PU Main Exam 2023 ) ಉತ್ತೀರ್ಣರಾಗಿರುವ 5,24,128 ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು NAD Digilocker (National Academic Depository- Digilocker) ನಲ್ಲಿ ದಿನಾಂಕ: 26-06-2023ರಿಂದಲೇ ಅಪ್ಲೋಡ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
2023ರ ದ್ವಿತೀಯ ಪಿಯು ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು NAD Digilocker ವೆಬ್‌ಸೈಟ್ www.nad.digilocker.gov.in ಮೂಲಕ ಆಧಾರ್ ಸಂಖ್ಯೆಯನ್ನು ನಮೂದಿಸಿ ನೋಂದಾಯಿಸಿದ ಮೋಬೈಲ್‌ಗೆ ಬರುವ OTP ನಮೂದಿಸಿ ಲಾಗಿನ್ ಆದ ನಂತರ 2023ರ ಮುಖ್ಯ ಪರೀಕ್ಷೆಯ ನೋಂದಣಿ ಸಂಖ್ಯೆಯನ್ನು ಹಾಗೂ ಪರೀಕ್ಷೆ ಉತ್ತೀರ್ಣರಾದ ಅವಧಿಯನ್ನು ನಮೂದಿಸಿ ತಮ್ಮ ಅಂಕಪಟ್ಟಿಯನ್ನು ಡೌನ್ ಲೋಡ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದೇ ಮಾದರಿಯಲ್ಲಿ ತಮ್ಮ ಮೊಬೈಲ್ ನಲ್ಲಿಯು ಸಹ Digilocker App ಬಳಸಿ ಆಧಾರ್ ಸಂಖ್ಯೆ ಮೂಲಕ ನೋಂದಾಯಿಸಿಕೊಂಡು ತಮ್ಮ Digilocker Appನಲ್ಲಿ ಅಂಕಪಟ್ಟಿಯನ್ನು download ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.
2023ರ ಮುಖ್ಯ ಪರೀಕ್ಷೆಯ ಹಾಗೂ ಪೂರಕ ಪರೀಕ್ಷೆಯ ಭೌತಿಕ ಅಂಕಪಟ್ಟಿಗಳ ಮುದ್ರಣ ಕಾರ್ಯ ಪುಗತಿಯಲಿದ್ದು ತಮ್ಮ ವ್ಯಾಸಂಗ ಮಾಡಲಾಗಿದ್ದ ಕಾಲೇಜುಗಳಿಗೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
No comments:
Post a Comment
If You Have any Doubts, let me Comment Here