Subject: Simultaneous implementation of free five guarantee scheme
ಜುಲೈ ತಿಂಗಳಿನಿಂದ 200 ಯೂನಿಟ್ ವರೆಗೆ ವಿದ್ಯುತ್ ಉಚಿತ, ಆಗಸ್ಟ್ 15ರಂದು ಗೃಹ ಲಕ್ಷ್ಮೀ ಯೋಜನೆಯ ಅಡಿಯಲ್ಲಿ ಮನೆಯ ಒಡತಿಗೆ ಪ್ರತಿ ತಿಂಗಳು ರೂ.2,000 ಹಣ ಖಾತೆಗೆ ಜಮಾ. ಜುಲೈ.1ರಿಂದ ಬಿಪಿಎಲ್, ಎಪಿಎಲ್ ಕಾರ್ಡ್ ನ ಪ್ರತಿ ಕುಟುಂಬದ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡಲಾಗುತ್ತದೆ.
ಜೂನ್ 11ರಿಂದ ಎಸಿ, ಸ್ಲೀಪರ್ ಹಾಗೂ ಐಷಾರಾಮಿ ಬಸ್ಸುಗಳನ್ನು ಹೊರತುಪಡಿಸಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ. ಯುವನಿಧಿ ಯೋಜನೆಯ ಅಡಿಯಲ್ಲಿ ಪದವೀಧರರಿಗೆ ರೂ.3000, ಡಿಪ್ಲೋಮಾದವರಿಗೆ ರೂ.1,500 ಮುಂದಿನ 24 ತಿಂಗಳವರೆಗೆ ನೀಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಣೆ ಮಾಡಿದ್ದಾರೆ.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಡಿಸಿಎಂ ಡಿ.ಕೆ ಶಿವಕುಮಾರ್, ಇವತ್ತು ಇಡೀ ದೇಶಕ್ಕೆ ಜನರು ನಮ್ಮ ಮೇಲೆ ವಿಶ್ವಾಸವಿಟ್ಟು, ಈ ರಾಜ್ಯವನ್ನು, ಕರ್ನಾಟಕವನ್ನು ನಮಗೆ ಅಪಾರವಾದಂತ ನಂಬಿಕೆ ಇಟ್ಟು ಅವಕಾಶ ಕೊಟ್ಟಿದ್ದಾರೆ. ನುಡಿದಂತೆ ನಡೆಯುವವರು ನಾವು. ನಾವು ಅಧಿಕಾರ ತೆಗೆದುಕೊಂಡ ಮೊದಲ ದಿನದಿಂದ ಏನು ಮಾತನಾಡಿದ್ದೇವೆ ಆ ಮಾತಿಗೆ ಬದ್ಧರಾಗಿದ್ದೇವೆ ಎಂಬುದಾಗಿ ಹೇಳಿದರು.
ಈ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಸಿಎಂ ಸಿದ್ಧರಾಮಯ್ಯ ಅವರು, ನಾವು ವಿಧಾನಸಭಾ ಚುನಾವಣೆ ಸಂದರ್ಭಕ್ಕೂ ಮುಂಚೆ ನಮ್ಮ ಪಕ್ಷದ ವತಿಯಿಂದ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೆವು. ನಾನು ಮತ್ತು ನಮ್ಮ ಅಧ್ಯಕ್ಷರಾದಂತ ಡಿಕೆ ಶಿವಕುಮಾರ್ ಗ್ಯಾರಂಟಿ ಕಾರ್ಡ್ ಗಳಿಗೆ ನಮ್ಮ ಸಹಿ ಕೂಡ ಮಾಡಿದ್ದೆವು. ನಾವು ಗ್ಯಾರಂಟಿಯಾಗಿ, ಈ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಜನರಿಗೆ ತಲುಪಿಸುತ್ತೇವೆ ಅಂತ ಮಾತುಗಳನ್ನು ಗ್ಯಾರಂಟಿ ಕಾರ್ಡ್ ಗಳನ್ನು ನಮ್ಮ ಕಾರ್ಯಕರ್ತರ ಮೂಲಕ ಎಲ್ಲ ಮನೆಗಳಿಗೆ ಹಂಚಿಸಲಾಗಿತ್ತು ಎಂದರು.
ಈ ಮಧ್ಯೆ ವಿರೋಧ ಪಕ್ಷಗಳು ಟೀಕೆಗಳನ್ನು ಮಾಡಿದ್ದಾರೆ. ಮಾಧ್ಯಮಗಳು ನಿಮಗೆ ಏನು ಅನ್ನಿಸುತ್ತೋ ಹಾಗೆ ಬರೆದಿದ್ದೀರಿ. ಅದರ ಬಗ್ಗೆ ನಮ್ಮ ತಕರಾರಿಲ್ಲ. ನಿಮ್ಮ ಅಭಿಪ್ರಾಯ ಹೇಳುವ ಕೆಲಸ ಮಾಡಿದ್ದೀರಿ. ಆದರೆ ಕ್ಯಾಬಿನೆಟ್ ಏನೂ ತೀರ್ಮಾನ ಮಾಡುತ್ತದೆ ಅದನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ನಾವು ಸರ್ಕಾರ ರಚನೆಯಾದ ದಿನದಿಂದ ನಾನು ಸಿಎಂ, ಡಿಸಿಎಂ ಡಿಕೆಶಿವಕುಮಾರ್ ಜೊತೆಗೆ 8 ಜನ ಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದೆವು. ಅವತ್ತು ಸಂಪುಟ ಸಭೆಯನ್ನು ಮಾಡಿ ತೀರ್ಮಾನ ಮಾಡಿದೆವು. ಐದು ಗ್ಯಾರಂಟಿಗಳನ್ನು ಜಾರಿಗೆ ಕೊಡುತ್ತೇವೆ ಎಂದು ತೀರ್ಮಾನಿಸಲಾಗಿತ್ತು. ಅವತ್ತೇ ತಾತ್ವಿಕ ಆದೇಶವನ್ನು ನೀಡಲಾಗಿತ್ತು. ಅದು ಆದ ಮೇಲೆ ಇವತ್ತು ಸಚಿವ ಸಂಪುಟ ಸಭೆಯನ್ನು ನಡೆಸಲಾಯಿತು. ಇವತ್ತು ಕರೆದಿದ್ದು ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವ ಸಂಬಂಧದ ವಿಶೇಷವಾಗಿತ್ತು ಎಂದು ಹೇಳಿದರು.
ನಾವು ಬಹಳ ಸುಧೀರ್ಘವಾಗಿ ಐದು ಗ್ಯಾರಂಟಿಗಳನ್ನು ಚರ್ಚೆ ಮಾಡಿದ್ದೇವೆ. ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ ಐದು ಗ್ಯಾರಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿಗೆ ಕೊಡಬೇಕು ಎಂಬುದಾಗಿ ತೀರ್ಮಾನ ಮಾಡಿದ್ದೇವೆ. ಅದು ಯಾವುದೇ ಜಾತಿ, ಯಾವುದೇ ಧರ್ಮ, ಯಾವುದೇ ಭಾಷೆ ಇವು ಯಾವುದು ಇಲ್ಲದೆ ಎಲ್ಲಾ ಜಾತಿ, ಧರ್ಮ, ಭಾಷೆಯವರಿಗೆ ಕರ್ನಾಟಕದ ಜನರಿಗೆ, ಜನತೆಗೆ ಈ ಗ್ಯಾರಂಟಿಗಳನ್ನು ತಲುಪಿಸುತ್ತೇವೆ. ಜಾರಿಗೆ ಕೊಡುತ್ತೇವೆ ಎಂದರು.
ಗ್ಯಾರಂಟಿ ನಂ.1 ಗೃಹ ಜ್ಯೋತಿ ಯೋಜನೆ. ಇದನ್ನೆ ನಾವು ಮೊದಲೆ ಗ್ಯಾರಂಟಿಯಾಗಿ ಕೊಟ್ಟಿದ್ದು. ನಾವು 200 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ಕೊಡುತ್ತೇವೆ ಎಂದಿದ್ದೆವು. ಎಲ್ಲರಿಗೂ ಕೂಡ 200 ಯೂನಿಯ್ ವರೆಗೆ ಕೊಡುತ್ತೇವೆ ಅಂತಕಂತ ವಾಗ್ಧಾನವನ್ನು ಕೊಟ್ಟಿದ್ದೆವು ಎಂದರು.
ಈ ಗ್ಯಾರಂಟಿಯನ್ನು ಜಾರಿ ಮಾಡಬೇಕು ಅಂತ ತೀರ್ಮಾನ ಮಾಡಿದ್ದೇವೆ. ಯಾರು ಎಷ್ಟು ಬಳಸುತ್ತಾರೆ ವಿದ್ಯುತ್ ಅನ್ನು, ಸಂಮ್ ಎಕ್ಸ್ 70 ಯೂನಿಟ್ ಮಾಡಬಹುದು ಅವರಿಗೆ ಫ್ರೀ. ಎಕ್ಸ್ 12 ತಿಂಗಳಿನಲ್ಲಿ ವಿದ್ಯುತ್ ಅನ್ನು ಬಳಸಿದ್ದಾರೆ ಅದರ ಆವರೇಜ್ ತೆಗೆದುಕೊಳ್ಳುತ್ತೇವೆ. ಅದರ ಮೇಲೆ 10% ಹೆಚ್ಚು ಮಾಡುತ್ತೇವೆ. ಅವರು ಎಷ್ಟು ಎಷ್ಟು ಬಳಸಿದ್ದಾರೆ ವಿದ್ಯುತ್ ಅನ್ನು, ಅವರು ಇನ್ಮುಂದೆ ಬಿಲ್ ಕೊಡಬೇಕಾಗಿಲ್ಲ ಎಂದರು.
ನೀವು ಎಷ್ಟು ವಿದ್ಯುತ್ ಖರ್ಚು ಮಾಡಿದ್ದೀರಿ ಅದರ ಆಧಾರದ ಮೇಲೆ ಒಂದು ವರ್ಷದಲ್ಲಿ ಮಾಡಿರುವಂತ ವಿದ್ಯುತ್ ಖರ್ಚಿನ ಮೇಲೆ ಹಾಗೂ 200 ಯೂನಿಟ್ ಒಳಗಡೆ ಯಾರು ಯಾರು ಖರ್ಚು ಮಾಡಿದ್ದಾರೆ ಅವರಿಗೆ ಉಚಿತ ವಿದ್ಯುತ್ ಎಂಬುದಾಗಿ ತಿಳಿಸಿದರು.
ಈ ತಿಂಗಳು ಈಗಾಗಲೇ ಬಿಲ್ ತಯಾರಾಗಿದೆ. ಅದರಿಂದ ಜುಲೈ.1ನೇ ತಾರೀಕನಿಂದ ಆಗಸ್ಟ್ ತಿಂಗಳವರೆಗೆ ವಿದ್ಯುತ್ ಏನೂ ಖರ್ಚು ಮಾಡುತ್ತೀರಿ ಅದರ ಬಿಲ್ ಬಂದಾಗ ಫ್ರೀ. ಇಲ್ಲಿಯವರೆಗೆ ಬಾಕಿ ಉಳಿಸಿಕೊಂಡಿರುವಂತ ವಿದ್ಯುತ್ ಅನ್ನು ಜನರು ಕಟ್ಟಬೇಕು. ಜುಲೈ ತಿಂಗಳಿನಿಂದ ಉಚಿತ ವಿದ್ಯುತ್ ಜಾರಿಗೊಳಿಸಲಾಗುತ್ತಿದೆ. ಅಲ್ಲಿಂದ ಬಿಲ್ ಕಟ್ಟುವಂತಿಲ್ಲ ಎಂದರು.
ನಂ.2 ಗೃಹ ಲಕ್ಷ್ಮೀ ಇದನ್ನು ಜಾರಿಗೊಳಿಸಲು ತೀರ್ಮಾನಿಸಿದ್ದೇವೆ. ಇದಕ್ಕೆ ಬ್ಯಾಂಕ್ ಅಕೌಂಟ್ಸ್, ಆಧಾರ್ ಕಾರ್ಡ್ ಒದಗಿಸಬೇಕಾಗುತ್ತದೆ. ಯಾರು ಮನೆಯ ಯಜಮಾನಿ ಎಂಬುದು ತೀರ್ಮಾನಿಸಬೇಕಾಗಿದೆ. ನಾವು ಹೇಳಿರುವಂತದ್ದು ಮನೆಯ ಯಜಮಾನಿಗೆ ತಿಂಗಳಿಗೆ 2,000 ರೂ ಜಮಾ ಮಾಡುತ್ತೇವೆ ಎಂದಿದ್ದೆವು. ಆದ್ದರಿಂದ ಅಕೌಂಟ್ ಮಾಹಿತಿ, ಆಧಾರ್ ಕಾರ್ಡ್, ಅರ್ಜಿ ಸಲ್ಲಿಸಬೇಕು. ಜೂನ್ 15 ರಿಂದ ಜುಲೈ 15ರ ಒಳಗಾಗಿ ಮನೆ ಒಡತಿಯ ಮಾಹಿತಿ ನೀಡಬೇಕು. ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಇದು ಆದಮೇಲೆ ಜುಲೈ 15ರಿಂದ ಆಗಸ್ಟ್ 15ರ ಒಳಗಡೆ ಪ್ರೋಸಸ್ ಮಾಡಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಮನೆಯ ಯಜಮಾನಿ ಖಾತೆಗೆ 2000 ರೂ ಜಮಾ ಮಾಡುತ್ತೇವೆ ಎಂದರು.
ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ದಾರರ ಮನೆಯ ಒಡತಿಯ ಖಾತೆಗೆ ಗೃಹ ಲಕ್ಷ್ಮೀ ಯೋಜನೆ ಜಾರಿಗೊಳಿಸಲಾಗುತ್ತದೆ. ಮನೆಯ ಯಜಮಾನಿ ಯಾರು ಎನ್ನುವ ಬಗ್ಗೆ ಕುಟುಂಬಸ್ಥರೇ ಮಾಹಿತಿಯನ್ನು ನೀಡಬೇಕು. ಆ ಮಾಹಿತಿ ಆಧಾರದ ಮೇಲೆ ಪ್ರತಿ ತಿಂಗಳು 2000 ರೂ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಹೇಳಿದರು.
ಜೂನ್ ತಿಂಗಳಿನಿಂದಲೇ ಗೃಹ ಲಕ್ಷ್ಮೀ ಯೋಜನೆ ಹಣ ನೀಡಬೇಕು ಎಂಬುದಾಗಿ ತೀರ್ಮಾನಿಸಲಾಗಿತ್ತು. ಆದ್ರೇ ಕೆಲ ತಾಂತ್ರಿಕ ಮಾಹಿತಿಯ ಕಾರಣದಿಂದಾಗಿ ಬಿಪಿಎಲ್, ಎಪಿಎಲ್ ಕಾರ್ಡ್ ದಾರರಿಗೆ ಆಗಸ್ಟ್ 15ರಿಂದ ಅರ್ಜಿ ಸಲ್ಲಿಸಿದಂತ ಮಾಹಿತಿಯ ಆಧಾರದ ಮೇಲೆ ಹಣ ನೀಡಲಾಗುತ್ತದೆ. ಫೆನ್ಷನ್ ತೆಗೆದುಕೊಳ್ಳುತ್ತಿವವರಿಗೂ ಈ ಯೋಜನೆ ಅನ್ವಯವಾಗಲಿದೆ ಎಂದರು.
ನಂ.3 ಅನ್ನಭಾಗ್ಯ ಸ್ಕೀಮ್ ಅಡಿಯಲ್ಲಿ ಜುಲೈ 1ನೇ ತಾರೀಕಿನಿಂದ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ದಾರರಿಗೆ 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ. ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿಯನ್ನು ಮುಂದಿನ ತಾರೀಕು 10 ಕೆಜಿ ಅಕ್ಕಿಯನ್ನು ಪ್ರತಿ ಕುಟುಂಬದ ಸದಸ್ಯರಿಗೆ ನೀಡಲಾಗುತ್ತದೆ ಎಂದು ಘೋಷಿಸಿದರು.
ನಂ.4 ಶಕ್ತಿ ಗ್ಯಾರಂಟಿ ಯೋಜನೆ ಜಾರಿ ಮಾಡಲಾಗುತ್ತದೆ ಎಂಬುದಾಗಿ ತಿಳಿಸಲಾಗಿತ್ತು. ಸಮಾಜದಲ್ಲಿ ಶೇ.50ರಷ್ಟು ಮಹಿಳೆಯರು ಇದ್ದಾರೆ. ಎಲ್ಲ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ನಾವು ಅದನ್ನು ಜೂನ್ 11ರಿಂದ ಲಾಂಚ್ ಮಾಡಲಾಗುತ್ತಿದೆ. ಈ ಕಾರ್ಯಕ್ರಮ ಕರ್ನಾಟಕ ರಾಜ್ಯದ ಒಳಗೆ ಸೀಮಿತವಾಗಿರುವಂತದ್ದು. ಇಲ್ಲಿಂದ ಬೆಂಗಳೂರು, ಬೀದರ್, ಕಾರವಾರ, ಮಂಗಳೂರು, ರಾಯಚೂರಿಗಾದರೂ ಹೋಗಬಹುದು. ಎಲ್ಲಿಗೆ ಸಾರಿಗೆ ಬಸ್ ಗಳಲ್ಲಿ ತೆರಳಿದರೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ ಎಂದರು.
ಯಾವುದು ಎಸಿ ಬಸ್ ಗಳಿದ್ದಾವೆ ಅವುಗಳನ್ನು ಬಿಟ್ಟು, ರಾಜಹಂಸ ಇರಬಹುದು, ಬೇರೆ ಬಸ್ ಇರಬಹುದು ಆ ಎಲ್ಲಾ ಬಸ್ ಗಳಲ್ಲಿ ಫ್ರೀಯಾಗಿ ಪ್ರಯಾಣ ಮಾಡಬಹುದು. ಆದರೇ ಬೆಂಗಳೂರಿನಿಂದ ತಿರುಪತಿಗೆ, ಹೈದರಾಬಾದ್ ಗೆ ಹೋಗುತ್ತೇವೆ ಎಂದರೆ ಇಲ್ಲ. ರಾಜ್ಯದ ಒಳಗೆ ಮತ್ತು ಕರ್ನಾಟಕವರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಎಸಿ ಮತ್ತು ನಾನ್ ಎಸಿ ಸ್ಲೀಪರ್ ಗಳಲ್ಲಿ ಪ್ರಯಾಣಿಸಲು ಅವಕಾಶವಿಲ್ಲ ಎಂದು ತಿಳಿಸಿದರು.
ಎಸಿ ಮತ್ತು ಲಕ್ಸೂರಿ ಬಸ್ ಹೊರತುಪಡಿಸಿ ಮಾಡಿದರೆ ಶೇ.94ರಷ್ಟು ಕವರ್ ಆಗಲಿದೆ. ಇವತ್ತು ಜಾರಿಗೆ ಕೊಡಲು ತೀರ್ಮಾನ ಮಾಡಲಾಗಿದೆ. ಜೂನ್ 11ನೇ ತಾರೀಕು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳಿಸಲಾಗುತ್ತಿದೆ. ಜೂನ್ 11ರಿಂದ ಸಾರಿಗೆ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಬಿಎಂಟಿಸಿ, ಕೆಎಸ್‌ಆರ್ ಟಿಸಿ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಎಂದರು.
ನಂ.5 ಯುವನಿಧಿ ಯೋಜನೆಯಾಗಿದೆ. 2022-23ನೇ ವರ್ಷದಲ್ಲಿ ವ್ಯಾಸಂಗ ಮಾಡಿ, ಪಾಸ್ ಮಾಡಿರುವಂತ ನಿರುದ್ಯೋಗಿ ಯುವಕರಿಗೆ 24 ತಿಂಗಳವರೆಗೆ ಪ್ರತಿ ತಿಂಗಳಿಗೆ 3 ಸಾವಿರ ಪದವೀಧರರಿಗೆ ಡಿಪ್ಲೋಮಾ ಮಾಡಿದವರಿಗೆ 1,500 ನೀಡಲಾಗುತ್ತದೆ. ಇದಕ್ಕಾಗಿ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ಈ ಅರ್ಜಿಯ ಮಾಹಿತಿಯನ್ನು ಆಧರಿಸಿ ಯುವನಿಧಿ ಯೋಜನೆಯ ಅಡಿಯಲ್ಲಿ ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತದೆ ಎಂದು ಘೋಷಿಸಿದರು.
Source: Kannada News Now Via Daily Hunt
No comments:
Post a Comment
If You Have any Doubts, let me Comment Here