How To Download Mula Survey Tippani Book
ಹೌದು ರೈತರು ತಮ್ಮ ಜಮೀನಿನ ಈ ದಾಖಲೆ ಪಡೆಯಲು ಎಲ್ಲಿಯೂ ಹೋಗಬೇಕಿಲ್ಲ ಮನೆಯಲ್ಲಿಯೇ ಕುಳಿತು ಜಮೀನಿನ ಸರ್ವೆ ಟಿಪ್ಪಣಿ ಪುಸ್ತಕವನ್ನು ಮೊಬೈಲ್ ನಲ್ಲಿ ಚೆಕ್ ಮಾಡಿ ಪಡೆಯಬಹುದು ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಸಂಪೂರ್ಣ ಮಾಹಿತಿ
ಹೌ ಟು ಡೌನ್ಲೋಡ್ ಮೂಲ ಸರ್ವೆ ಟಿಪ್ಪಣಿ ಪುಸ್ತಕ
ರೈತರು ತಮ್ಮ ಬಳಿ ಇರುವ ಸ್ಮಾರ್ಟ್ ಫೋನ್ ನಲ್ಲಿ ಮೂಲ ಸರ್ವೆ ಟಿಪ್ಪಣಿ ಪುಸ್ತಕ ಚೆಕ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
Click Here To View
ಆಗ ಸರ್ವೆ ಡಾಕ್ಯುಮೆಂಟ್ ಪೇಜ್ ತೆರೆದುಕೊಳ್ಳುತ್ತದೆ ಅಲ್ಲಿ ಆಯ್ಕೆ ಮಾಡಿದ ಸರ್ವೆ ಸಂಖ್ಯೆಗೆ ದಾಖಲೆಗಳು ಲಭ್ಯವಿದೆ ಕೆಳಗಡೆ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಸರ್ವೇ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ಸರ್ನೋಕ್ ನಲ್ಲಿ ಸ್ಟಾರ್ ಹಾಗೂ ಹಿಸ್ಸಾ ಕಾಲಂನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಹುಡುಕು ಮೇಲೆ ಕ್ಲಿಕ್ ಮಾಡಬೇಕು ಆಗ ಮೂಲ ಸರ್ವೆ ಟಿಪ್ಪಣಿ ಪುಸ್ತಕ, ಹಿಸ್ಸಾ ಅಟ್ಲಾಸ್ , ಹಿಸ್ಸಾ ಸರ್ವೆ ಪೋಡಿ ಟಿಪ್ಪಣಿ ಪುಸ್ತಕ ಹೀಗೆ ನಿಮಗೆ ಕೆಲವು ಆಯ್ಕೆಗಳು ಕಾಣುತ್ತವೆ. ನೀವು ಮೂಲ ಸರ್ವೆ ಟಿಪ್ಪಣಿ ಪುಸ್ತಕ ಡೌನ್ಲೋಡ್ ಮಾಡಿಕೊಳ್ಳುತ್ತಿದ್ದರಿಂದ View Document ಕೆಳಗಡೆ ಕಾಣುವ ಪಿಡಿಎಫ್ ಪೈಲ್ ಮೇಲೆ ಕ್ಲಿಕ್ ಮಾಡಬೇಕು ಆಗ ಮೂಲ ಸರ್ವೆ ಟಿಪ್ಪಣಿ ಪುಸ್ತಕ ಓಪನ್ ಆಗುತ್ತದೆ.
ಮೂಲ ಸರ್ವೆ ಟಿಪ್ಪಣಿ ಪುಸ್ತಕದಲ್ಲಿ ಸರ್ವೆ ನಂಬರ್ ಕಾಣಿಸುತ್ತದೆ ಅದರ ಸುತ್ತ ಮುತ್ತಲಿರುವ ಸರ್ವೆ ನಂಬರ್ ಗಳ ಮ್ಯಾಪ್ ಕಾಣಿಸುತ್ತದೆ ಇದನ್ನು ರೈತರು ತಮ್ಮ ಮೊಬೈಲ್ ನಲ್ಲಿ ವೀಕ್ಷಿಸಬಹುದು ಇದೆ ವರ್ಜಿನಲ್ ಟಿಪ್ಪಣಿ ಡೌನ್ಲೋಡ್ ಮಾಡಿಕೊಳ್ಳಬೇಕಾದರೆ ಶುಲ್ಕ ಪಾವತಿಸಬೇಕಾಗುತ್ತದೆ.
ಆನ್ಲೈನ್ ನಲ್ಲಿಯೂ ಶುಲ್ಕ ಪಾವತಿಸಿ ಡೌನ್ಲೋಡ್ ಮಾಡಿಕೊಳ್ಳಬಹುದು. ಆನ್ಲೈನಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಸಮಸ್ಯೆಯಾಗುತ್ತಿದ್ದರೆ ಗ್ರಾಮ್ ಒನ್ ಬೆಂಗಳೂರು ಒನ್ ಸಿ ಎಸ ಸಿ ಕೇಂದ್ರಗಳಲ್ಲಿ ಶುಲ್ಕ ಪಾವತಿಸಿ ಒರಿಜಿನಲ್ ಮೂಲ ಸರ್ವೆ ಟಿಪ್ಪಣಿ ಪುಸ್ತಕ ಪಡೆದುಕೊಳ್ಳಬಹುದು
ಆಕಾರ್ ಬಂದ್ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.
ಮೇಲ್ಗಡೆ ತೋರಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿದ ಮೇಲೆ ಅಲ್ಲಿ ಓಪನ್ ಆಗುವ ಪೇಜ್ ನಲ್ಲಿ ಜಿಲ್ಲೆ ತಾಲೂಕು ಹೋಬಳಿ ಹಾಗೂ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ಯಾವ ಸರ್ವೆ ನಂಬರಿನ ಆಕಾರ್ ಬಂದ್ ಡೌನ್ಲೋಡ್ ಮಾಡಿಕೊಳ್ಳಬೇಕೆಂದು ಕೊಂಡಿದ್ದೀರಾ ಆ ಸರ್ವೆ ನಂಬರ್ ನಮೂದಿಸಬೇಕು ನಂತರ ಶರಣುಕ್ ನಲ್ಲಿ ಸ್ಟಾರ್ ಹಾಗೂ ಹೊಸ ನಲ್ಲಿ ಮಾಡಿಕೊಂಡು ಆಕಾರ್ ಬಂದ್ ವೀಕ್ಷಿಸಿ ಮೇಲೆ ಕ್ಲಿಕ್ ಮಾಡಬೇಕು ಆಗ ಆ ಕಾರ್ಬನ್ ದಾಖಲೆ ಅಲ್ಲಿ ನಿಮಗೆ 29 ಕಾಲಂಗಳ ಆಕಾರ ಬಂದ್ ಪೇಜ್ ಕಾಣಿಸುತ್ತದೆ. ಅಲ್ಲಿ ರೈತರು ನಮೂದಿಸಿದ ಸರ್ವೆ ನಂಬರಿನಲ್ಲಿ ಎಷ್ಟು ಎಕರೆ ಜಮೀನಿದೆ? ಖರಾಬು ಜಮೀನು ಎಷ್ಟು ಎಕರೆ, ಖುಷ್ಕಿ ಜಮೀನು ಎಷ್ಟಿದೆ? ಎಂಬ ಮಾಹಿತಿ ಕಾಣಿಸುತ್ತದೆ. ಇದನ್ನು ರೈತರು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಬಹುದು.
No comments:
Post a Comment
If You Have any Doubts, let me Comment Here