JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Saturday, February 25, 2023

Revised Circular by State Government Amendment of Student Name, Date Of Birth in School Enrollment

  Jnyanabhandar       Saturday, February 25, 2023
Subject: Other Amendments including Student Name, Date of Birth in School Enrollment : Revised Circular by State Govt


ಶಾಲಾ ದಾಖಲಾತಿಗಳಲ್ಲಿ ವಿದ್ಯಾರ್ಥಿ ಹೆಸರು/ಪೋಷಕರ ಹೆಸರು, ಜಾತಿ, ಜನ್ಮ ದಿನಾಂಕ ಇತ್ಯಾದಿ ತಿದ್ದುಪಡಿ ಮಾಡುವ ಸಂಬಂಧ, ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾರ್ಗದರ್ಶನವನ್ನು ನೀಡಿ ಅಧಿಕಾರವನ್ನು ಉಲ್ಲೇಖಿತ ಸುತ್ತೋಲೆಗಳಲ್ಲಿ ಜಿಲ್ಲಾ ಉಪನಿರ್ದೇಶಕರಿಗೆ ಪ್ರತ್ಯಾಯೋಜಿಸಿ ಅದರಂತೆ ಕ್ರಮವಹಿಸಲಾಗುತ್ತಿದೆ.



ಈ ಪ್ರಕ್ರಿಯೆಯು ವಿಳಂಬವಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಆಕ್ಷೇಪಣೆಗಳು ಬಂದಿರುತ್ತವೆ, ಅಲ್ಲದೇ ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿಧಾನ ಸಭೆ ಅರ್ಜಿ ಸಮಿತಿಯಲ್ಲಿ ಅರ್ಜಿ ದಾಖಲಾಗಿ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ:26/02/2015ರಂದು ನಡೆದ ಸಮಿತಿಯ ಸಭೆಯಲ್ಲಿ ತಿದ್ದುಪಡಿ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಪರಿಷ್ಕೃತ ಸುತ್ತೋಲೆಯನ್ನು ಹೊರಡಿಸುವಂತೆ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಅಸ್ತಿತ್ವದಲ್ಲಿರುವ ಸುತ್ತೋಲೆಗಳನ್ನು ರದ್ದುಪಡಿಸಿ ಈ ಕೆಳಕಂಡಂತೆ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ.

01 ಒಂದನೇ ತರಗತಿಯಿಂದ ಎಸ್.ಎಸ್.ಎಲ್.ಸಿ. ತರಗತಿಯವರೆಗೆ ಓದುತ್ತಿರುವ ವಿದ್ಯಾರ್ಥಿಗಳ ಜನ್ಮ ದಿನಾಂಕಗಳಲ್ಲಿ ಕ್ಯಾಲೆಂಡರ್ ತಿಂಗಳಲ್ಲಿ ಇಲ್ಲದ ದಿನಾಂಕಗಳು ಉದಾಹರಣೆಗೆ ಫೆಬ್ರವರಿ 30, ಏಪ್ರಿಲ್ 31, ಜೂನ್ 31 ಇತ್ಯಾದಿಗಳ ಬಗ್ಗೆ ತಿದ್ದುಪಡಿ ಕೋರಿ ಸಲ್ಲಿಸುವ ಅರ್ಜಿಗಳನ್ನು ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರ ಹಂತದಲ್ಲಿಯೇ ಪರಿಶೀಲಿಸಿ, ತಕ್ಷಣವೇ ಸಂಬಂಧಪಟ್ಟ ಬಿ.ಇ.ಒ ರವರಿಗೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆದು ನಂತರ ಸಂಬಂಧಪಟ್ಟ ಶಾಲಾ ಮುಖ್ಯಶಿಕ್ಷಕರು ತಿದ್ದುಪಡಿ ಮಾಡಲು ಕ್ರಮವಹಿಸುವುದು,


  1. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಹೆಸರು, ಪೋಷಕರ ಹೆಸರು, ಮತ್ತು ಜನ್ಮ ದಿನಾಂಕ ಮೊದಲಾದವುಗಳನ್ನು ಓ.ಎಂ.ಆರ್ ಶೀಟ್‌ನಲ್ಲಿ (ಶಾಲಾ ದಾಖಲಾತಿ ವಹಿಯಲ್ಲಿರುವಂತೆ) ಭರ್ತಿ ಮಾಡುವಾಗ ಎಚ್ಚರಿಕೆಯಿಂದ ದೋಷಗಳಿಗೆ ಅವಕಾಶ ನೀಡದಂತೆ ಭರ್ತಿ ಮಾಡಲು ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಲಾಗಿದೆ. ತಪ್ಪಾದಲ್ಲಿ ಆಯಾ ಶಾಲೆಯ ಮುಖ್ಯೋಪಾಧ್ಯಾಯರನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು.
  2. ಎಸ್.ಎಸ್.ಎಲ್.ಸಿ. ಅಂಕಪಟ್ಟಿಯಲ್ಲಿ ವಿದ್ಯಾರ್ಥಿಯ/ಪೋಷಕರ ಹೆಸರಿನಲ್ಲಿ spelling, Initial, ಹುಟ್ಟಿದ ದಿನಾಂಕ ತಿದ್ದುಪಡಿ, ಇದ್ದಲ್ಲಿ ಸಂಬಂಧಿಸಿದ ಶಾಲೆಯ ಮೂಲ ದಾಖಲಾತಿ ವಹಿ ಪರಿಶೀಲಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇರವಾಗಿ ಪ್ರಸ್ತಾವನೆಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಕಳುಹಿಸಿ ಕ್ರಮವಹಿಸುವುದು,

ಶಾಲಾ ವಿದ್ಯಾರ್ಥಿಗಳ ಶಾಲಾ ದಾಖಲಾತಿಗಳಲ್ಲಿ ಜಾತಿಯ ಬಗ್ಗೆ ನೇರವಾಗಿ ತಿದ್ದುಪಡಿ ಮಾಡಲು ಅವಕಾಶವಿಲ್ಲ. ಜಾತಿ ತಿದ್ದುಪಡಿ ಬಗ್ಗೆ ವಿಚಾರಣೆ ನಡೆಸಿ ನೀಡಲು ಕೋರ್ಟ್‌ ಗೆ ಅವಕಾಶವಿರುವುದಿಲ್ಲವೆಂದು ಕಾನೂನು ಇಲಾಖೆಯು (ಅಭಿಪ್ರಾಯ ಸಂಖ್ಯೆ:ಲಾ 677 ಅಭಿ 2016, ದಿನಾಂಕ:07-01- 2015) .ಅಭಿಪ್ರಾಯನೀಡಿರುತ್ತದೆ. ಜಾತಿ ಘೋಷಣೆಗೆ ಸಂಬಂಧಿಸಿದ ಪ್ರಕರಣವು ಅಧೀನ ನ್ಯಾಯಾಲಯದಲ್ಲಿ agatongd, The Hon'ble Supreme Court in the case of the State of Tamilnadu V/s A. Guruswamy has held that by necessary implication stands prohibited. Further the Hon'ble Suprem Court while allowing the appeal has held that the declaration issued by the Courts below is unconstitutional and without any jurisdiction, ಎಂದು ಅಪರ ಕಾನೂನು ಕಾರ್ಯದರ್ಶಿಗಳು- 1, ಕಾನೂನು, ನ್ಯಾಯ 
  1. ಮತ್ತು ಮಾನವ ಹಕ್ಕುಗಳ ಇಲಾಖೆ, ರವರು ಅಭಿಪ್ರಾಯಿಸಿರುವುದರಿಂದ ತಾಲಾ ದಾಖಲಾತಿಗಳಲ್ಲಿ ವಿದ್ಯಾರ್ಥಿ ಜಾತಿ, ತಿದ್ದುಪಡಿ ಮಾಡುವ ಪ್ರಸ್ತಾವನೆಯ ಬಗ್ಗೆ ಜಿಲ್ಲಾ ಮಟ್ಟದ ಜಾತಿ ಪರಿಶೀಲನಾ ಸಮಿತಿಯು ನೀಡುವ ಆದೇಶದಂತೆ ಶಾಲಾ ದಾಖಲೆಗಳಲ್ಲಿ ತಿದ್ದುಪಡಿ ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿಯೇ ಪರಿಶೀಲಿಸಿ ಕಮ್ರವಹಿಸುವುದು.

05, ಒಂದನೇ ತರಗತಿಯಿಂದ ಎಸ್‌.ಎಸ್.ಎಲ್.ಸಿ ತರಗತಿಯವರೆಗೆ ಓದುತ್ತಿರುವ ವಿದ್ಯಾರ್ಥಿಗಳ ದಾಖಲೆಗಳಲ್ಲಿ ಹೆಸರಿನಲ್ಲಿರುವ ಅಕ್ಷರಗಳು ತಪ್ಪಾದಲ್ಲಿ, ಹೆಸರಿನ ಜೊತೆ ತಂದೆಯ ಹೆಸರು, ಕುಟುಂಬದ ಹೆಸರು, ಅಡ್ಡ ಹೆಸರು ಮೊದಲಾದವುಗಳನ್ನು ಸೇರಿಸಲು, ಹೆಸರನ್ನು ಬದಲಾವಣೆ ಮಾಡಲು ಜನ್ಮ ದಿನಾಂಕಕ್ಕೆ ದಾಖಲೆಗಳು ಲಭ್ಯವಿದ್ದಾಗ್ಯೂ ಶಾಲಾ ದಾಖಲೆಗಳಲ್ಲಿ ನಮೂದಿಸುವಾಗ ಆಗಿರುವ ತಪ್ಪುಗಳನ್ನು ತಿದ್ದುಪಡಿ ಮಾಡುವಾಗ ಪಡಿತರ ಚೀಟಿ, ಆಧಾರ್ ಕಾರ್ಡುಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಪೋಷಕರಿಂದ ಸೆಲ್ಫ್ ಅಫಿಡವಿಟ್ ಪಡೆಯಬೇಕು. ಈ ಸೆಲ್ಸ್ ಅಫಿಡವಿಟ್‌ನಲ್ಲಿ ನೀಡಿರುವ ಮಾಹಿತಿಗಳು ಸುಳ್ಳೆಂದು ಕಂಡು ಬಂದಲ್ಲಿ ಅಂತಹ ಕ್ರಮ ಶಿಕ್ಷಾರ್ಹವಾಗುವುದರಿಂದ ಭಾರತೀಯ ದಂಡ ಸಂಹಿತ ಪ್ರಕಾರ ಶಿಕ್ಷೆಗೆ ಒಳಪಡಿಸಬಹುದೆಂದು ಸದರಿ ಅಫಿಡವಿಟ್‌ನಲ್ಲಿ ನಮೂದಿಸಿರಬೇಕು. ಇದರ ಆಧಾರದ ಮೇಲೆ ಶಾಲಾ ದಾಖಲಾತಿ ನಿಯಮಗಳ ಉಲ್ಲಂಘನೆಯಾಗದಂತೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ತಿದ್ದುಪಡಿ ಮಾಡಲು ಅಯಾ ವರ್ಷದ ಜೂನ್ 01ರಂದು ಕ್ರಮ ವಹಿಸುವುದು ಈ ರೀತಿ ಕ್ರಮವಹಿಸುವಾಗ ಕರ್ನಾಟಕ ಶಿಕ್ಷಣ ಕಾಯ್ದೆ 1983ರ ನಿಯಮ (1)ರಲ್ಲಿ 05 ವರ್ಷ ತುಂಬಿದ ಯಾವುದೇ ಮಗುವಿಗೆ ಶಾಲೆಗೆ ದಾಖಲು ಮಾಡಿಕೊಳ್ಳಲು ಕನಿಷ್ಠ 05 ವರ್ಷವಾಗಿರಬೇಕಾಗಿರುತ್ತದೆ. ಆದುದರಿಂದ ವಿದ್ಯಾರ್ಥಿಗಳ ಜನ್ಮ ದಿನಾಂಕದಲ್ಲಿ ತಿದ್ದುಪಡಿ ಮಾಡುವಾಗ ಈ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು, ಒಂದು ಪಕ್ಷ ಇದಕ್ಕಿಂತ ಕಡಿಮೆ ಜನ್ಮ ದಿನಾಂಕವನ್ನು ನಮೂದಿಸಿದ್ದಲ್ಲಿ ತಿದ್ದುಪಡಿ ಮಾಡಲು ಸಂಬಂಧಪಟ್ಟ ನ್ಯಾಯಲಯದ ಡಿಕ್ರಿ ತರುವುದು ಅವಶ್ಯಕ.

ಎಸ್.ಎಸ್.ಎಲ್.ಸಿ ಆದ ನಂತರದ ಅಭ್ಯರ್ಥಿಗಳ ಶಾಲಾ ದಾಖಲಾತಿ/ಅಂಕಪಟ್ಟಿಯಲ್ಲಿ ಹೆಸರು, ಅಡ್ಡ ಹೆಸರು, ಪೋಷಕರ ಹೆಸರು ಹಾಗೂ ಜನ್ಮ ದಿನಾಂಕ ಇತ್ಯಾದಿಗಳು ತಿದ್ದುಪಡಿಯಾಗಬೇಕಾಗಿದ್ದಲ್ಲಿ ನ್ಯಾಯಾಲಯದಿಂದ ಡಿಕ್ಕಿ ಪಡೆದು ಬಂದ ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಶಾಲಾದಾಖಲಾತಿ ನಿಯಮಗಳನ್ವಯ ಪರಿಶೀಲಿಸಿ ಜಿಲ್ಲಾ ಉಪನಿರ್ದೇಕರು ಪ್ರಸ್ತಾವನೆ ಸ್ವೀಕರಿಸಿದ 15 ದಿನದೊಳಗೆ ಸೂಕ್ತ ತಿದ್ದುಪಡಿ ಮಾಡಿ ಆದೇಶ ಹೊರಡಿಸುವುದು.


logoblog

Thanks for reading Revised Circular by State Government Amendment of Student Name, Date Of Birth in School Enrollment

Previous
« Prev Post

No comments:

Post a Comment

If You Have any Doubts, let me Comment Here