Karnataka Building and Other Construction Workers’ Welfare Board Benefits
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ನೋಂದಣಿಯಾಗುವ ವಿಧಾನ
ವಯೋಮಿತಿ: 18 ರಿಂದ 60 ವರ್ಷದೊಳಗಿರಬೇಕು
ನೋಂದಣಿ ಮಾಡುವ ಕಛೇರಿಗಳು: ಕಾರ್ಮಿಕ ಅಧಿಕಾರಿಗಳು/ಹಿರಿಯ ಕಾರ್ಮಿಕ ನಿರೀಕ್ಷಕರು/ಕಾರ್ಮಿಕ ನಿರೀಕ್ಷಕರು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ಮುಖ್ಯ ಅಭಿಯಂತರರು
ನೋಂದಣಿಗಾಗಿ ಸಲ್ಲಿಸಬೇಕಾದ ಅಗತ್ಯ ದಾಖಲೆಗಳು:
ಎ) ನಮೂನೆ-V-I ರಲ್ಲಿ ಅರ್ಜಿ
ಬಿ) ಕಾಮಗಾರಿ ನಡೆಯುವ ಕಟ್ಟಡದ ಮಾಲೀಕರು/ ಗುತ್ತಿಗೆದಾರರು, CREDAI (Confederation of Real Estate Developers Association of India), BAI (Builders Association of India) ಅಥವಾ ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟರ್ ಅಸೋಸಿಯೇಷನ್ ನವರು ನಮೂನೆ-V (A) ರಲ್ಲಿ ನೀಡುವಂತಹ ‘ಉದ್ಯೋಗದ ದೃಢೀಕರಣ ಪತ್ರ’ ಅಥವಾ ನೋಂದಾಯಿತ ಕಾರ್ಮಿಕ ಸಂಘಗಳು ನಮೂನೆ-V(B) ರಲ್ಲಿ ನೀಡುವಂತಹ ‘ಉದ್ಯೋಗದ ದೃಢೀಕರಣ ಪತ್ರ’ ಅಥವಾ ಕಾರ್ಮಿಕ ಅಧಿಕಾರಿ / ಹಿರಿಯ ಕಾರ್ಮಿಕ ನಿರೀಕ್ಷಕರು / ಕಾರ್ಮಿಕ ನಿರೀಕ್ಷಕರು ನಮೂನೆ-V (C) ರಲ್ಲಿ ನೀಡುವಂತಹ ‘ಉದ್ಯೋಗದ ದೃಢೀಕರಣ ಪತ್ರ’ ಅಥವಾ ಪಂಚಾಯತಿ ಅಭಿವೃದ್ಧಿ ಅಧಿಕಾರಿ / ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು ನಮೂನೆ- V (D)ರಲ್ಲಿ ನೀಡುವಂತಹ ‘ಉದ್ಯೋಗದ ದೃಢೀಕರಣ ಪತ್ರ’
ಸಿ) ಮೂರು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು
ಡಿ) ವಯಸ್ಸಿನ ದೃಢೀಕರಣ ಪತ್ರ: ಶಾಲಾ ದಾಖಲಾತಿ, ವಾಹನ ಚಾಲನಾ ಪರವಾನಗಿ, ಪಾಸ್‌ಪೋರ್ಟ್, ಎಪಿಕ್‌ಕಾರ್ಡ್, ಆಧಾರ್‌ಕಾರ್ಡ್, ಎಲ್‌ಐಸಿ ವಿಮೆ ಪಾಲಿಸಿ ಅಥವಾ ಗ್ರಾಮ ಲೆಕ್ಕಿಗರು ಅಥವಾ ಕಂದಾಯ ನಿರೀಕ್ಷಕರು ಅಥವಾ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಅಥವಾ ಜನನ ಮತ್ತು ಮರಣ ನೋಂದಣಾಧಿಕಾರಿಗಳಿಂದ ವಿತರಿಸಿದ ಪ್ರಮಾಣ ಪತ್ರ ಅಥವಾ ಸರ್ಕಾರಿ ಆಸ್ಪತ್ರೆ/ಇಎಸ್‌ಐ ಆಸ್ಪತ್ರೆ/ಸ್ಥಳೀಯ ಸಂಸ್ಥೆಗಳ ಆಸ್ಪತ್ರೆ ಅಥವಾ ನೋಂದಾಯಿತ ಎಂಬಿಬಿಎಸ್, ಆಯುರ್ವೇದ, ಯುನಾನಿ ಅಥವಾ ಹೋಮಿಯೋಪತಿ ವೈದ್ಯರು, ನೋಂದಾಯಿತ ಖಾಸಗಿ ಬಿ.ಡಿ.ಎಸ್ ವಿದ್ಯಾರ್ಹತೆ ಹೊಂದಿದ ದಂತ ವ್ಶೆದ್ಯರಿಂದ ಪ್ರಮಾಣ ಪತ್ರ ಇವುಗಳಲ್ಲಿ ಯಾವುದಾದರೊಂದು ದಾಖಲೆ.
ಅರ್ಜಿದಾರ ಹಾಗೂ ಆತನ / ಆಕೆಯ ಅವಲಂಭಿತರ ಆಧಾರ್‌ಕಾರ್ಡ್ನ ಸ್ವಯಂ ದೃಢೀಕೃತ ಪ್ರತಿ ಕಡ್ಡಾಯವಾಗಿ ಸಲ್ಲಿಸುವುದು
ನೋಂದಣಿ ಶುಲ್ಕ: ರೂ. 25/- ಹಾಗೂ ವಂತಿಗೆ ಶುಲ್ಕ: ಪ್ರತಿ ವರ್ಷಕ್ಕೊಮ್ಮೆ ರೂ.25/-
ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಳಿಗೆ ಸಂಬಂಧಿಸಿದ ವಿವರಗಳ ಪಟ್ಟಿ (ಈ ಕೆಳಗಿನ ಯಾವುದಾದರೂ ಕೆಲಸ ನಿರ್ವಹಿಸುತ್ತಿರಬೇಕು)
1. ನಿರ್ಮಾಣ 2. ಮಾರ್ಪಾಡು 3. ರಿಪೇರಿ 4. ನಿರ್ವಹಣೆ ಅಥವಾ ಕಟ್ಟಡ ಕೆಡವುದಕ್ಕೆ ಸಂಬಂಧಿಸಿದ ಕಾಮಗಾರಿ 5. ಕಟ್ಟಡಗಳು 6. ಬೀದಿಗಳು 7. ರಸ್ತೆಗಳು 8. ರೈಲ್ವೆಗಳು 9. ಟ್ರಾಮ್‌ವೇಗಳು 10. ಏರ್‌ಫೀಲ್ಡ್ 11. ನೀರಾವರಿ ಚರಂಡಿ 12. ಏರಿ/ಕಟ್ಟೆಕಟ್ಟುವುದು ಮತ್ತು ನೌಕಾ ಕಾಮಗಾರಿಗಳು 13. ಪ್ರವಾಹ ನಿಯಂತ್ರಣ ಕಾಮಗಾರಿಗಳು (ಮಳೆ ನೀರು, ಚರಂಡಿ ಕಾಮಗಾರಿಗಳು ಸೇರಿ) 14. ವಿದ್ಯುತ್ ಉತ್ಪಾದನೆ 15. ಪ್ರಸರಣ ಮತ್ತು ವಿತರಣೆ 16. ಜಲ ಕಾಮಗಾರಿಗಳು (ನೀರು ವಿತರಣಾ ನಾಲೆಗಳು ಸೇರಿ) 17. ತೈಲ ಮತ್ತು ಅನಿಲ ಸ್ಥಾವರಗಳು 18. ವಿದ್ಯುತ್ ಮಾರ್ಗಗಳು 19. ವೈರ್‌ಲೆಸ್ 20. ರೇಡಿಯೋ 21. ದೂರದರ್ಶನ 22. ದೂರವಾಣಿ 23. ದೂರಸಂಪರ್ಕ ಮತ್ತು ಸಮುದ್ರ ಸಂವಹನಗಳಿಗೆ ಸಂಬಂಧಿಸಿದ ನಿರ್ಮಾಣ/ನವೀಕರಣ ಮತ್ತು ದುರಸ್ತಿ 24. ಅಣೆಕಟ್ಟುಗಳು 25. ನಾಲೆಗಳು 26. ಜಲಾಶಯಗಳು 27. ಜಲ ಮೂಲಗಳು 28. ಸುರಂಗಗಳು 29. ಸೇತುವೆಗಳು 30. ವಯಾಡಕ್ಟ್ಸ್ 31. ಆಕ್ವೆಡಕ್ಟ್ಸ್ 32. ಕೊಳವೆ ಮಾರ್ಗಗಳ ನಿರ್ಮಾಣ 33. ಸ್ಥಾವರಗಳು 34. ಕೂಲಿಂಗ್ ಟವರ್‌ಗಳು ಮತ್ತು ಪ್ರಸರಣ ಸ್ಥಾವರಗಳು ಹೆಚ್ಚುವರಿ ನಿರ್ಮಾಣ ಕೆಲಸಗಳು: 35.ಕಲ್ಲು ಗಣಿಗಾರಿಕೆ ಕಾಯ್ದೆ 1952ರ ವ್ಯಾಪ್ತಿಗೆ ಒಳಪಡದ ರಸ್ತೆ ಮತ್ತು ಕಟ್ಟಡ ನಿರ್ಮಾಣದ ಕಲ್ಲು ಕೆಲಸ 36. ನಿರ್ಮಾಣದಲ್ಲಿ ಚಪ್ಪಡಿ/ಟೈಲ್‌ಗಳನ್ನು ಅಳವಡಿಸುವುದು 37. ಯುಜಿಡಿ ನಿರ್ಮಾಣ ಸೇರಿದಂತೆ ಒಳಚರಂಡಿ ಮತ್ತು ಪ್ಲಂಬಿಂಗ್ ಕೆಲಸ 38. ವ್ಶೆರಿಂಗ್, ವಿತರಣೆ ಪ್ಯಾನಲ್ ಫಿಕ್ಸಿಂಗ್ ಇತ್ಯಾದಿಗಳನ್ನು ಒಳಗೊಂಡ ವಿದ್ಯುತ್ ಕೆಲಸ 39. ಕೂಲಿಂಗ್ ಮತ್ತು ಹೀಟಿಂಗ್ ಸಿಸ್ಟಂಗಳ ಸ್ಥಾಪನೆ ಮತ್ತು ಅಳವಡಿಕೆ 40. ಲಿಫ್ಟ್, ಎಕ್ಸಲೇಟರ್ ಇತ್ಯಾದಿಗಳ ಸ್ಥಾಪನೆ 41. ಸೆಕ್ಯೂರಿಟಿ ಗೇಟಗಳ ಸ್ಥಾಪನೆ 42. ಕಬ್ಬಿಣ/ಲೋಹದ ಗ್ರಿಲ್‌ಗಳು, ಕಿಟಕಿ, ಬಾಗಿಲುಗಳ ಸ್ಥಾಪನೆ 43. ನೀರಿನ ಕೊಯ್ಲು ರಚನೆಗಳ ನಿರ್ಮಾಣ 44. ಫ್ಲೊರಿಂಗ್, ಫಾಲ್ಸ್ಸೀಲಿಂಗ್, ವಾಲ್ ಪ್ಯಾನಲಿಂಗ್ ಮುಂತಾದವುಗಳನ್ನು ಒಳಗೊಂಡ ಒಳಾಂಗಣ ವಿನ್ಯಾಸ 45.ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಅಳವಡಿಸುವ ಗ್ಲಾಸ್ ಪ್ಯಾನಲ್‌ಗಳು, ಎಸಿಪಿ ಶೀಟ್‌ಗಳು, ಸ್ಪೆöಡರ್ ಗ್ಲೇಜಿಂಗ್‌ಗಳು 46.ಪ್ರೀ-ಫ್ಯಾಬ್ರಿಕೇಟೆಡ್ ಕಾಂಕ್ರೀಟ್ ಮಾಡ್ಯೂಲ್ಸ್, ಕಾಂಕ್ರೀಟ್ ಬ್ರಿಕ್ಸ್, ಬ್ಲಾಕ್ಸ್, ಹಾಲೋಬ್ಲಾಕ್ಸ್, ಟೈಲ್ಸ್ ಮುಂತಾದವುಗಳ ಅಳವಡಿಕೆ 47.ಸಿಗ್ನೇಜ್, ರಸ್ತೆ ಪೀಠೋಪಕರಣಗಳು, ಬಸ್ ಆಶ್ರಯಗಳು/ ಸ್ಯಾಂಡ್, ಸಿಗ್ನಲಿಂಗ್ ಸಿಸ್ಟಮ್ಸ್ ಮುಂತಾದವುಗಳ ನಿರ್ಮಾಣ 48.ರೋಟರಿಗಳ ನಿರ್ಮಾಣ ಮತ್ತು ಸ್ಥಾಪನೆ, ಕಾರಂಜಿಗಳು, ಸಾರ್ವಜನಿಕ ಉದ್ಯಾನವನ ಮತ್ತು ತೋಟಗಳಲ್ಲಿ ಈಜುಕೊಳಗಳು ಇತ್ಯಾದಿಗಳ ಅಳವಡಿಕೆ 49. ನಿರ್ಮಾಣ ಉದ್ದೇಶಗಳಿಗಾಗಿ ಭೂಮಿಯ ಕೆಲಸ, ಭೂಮಿಯ ಹರಡುವಿಕೆ, ನೆಲಸಮಗೊಳಿಸುವಿಕೆ ಮತ್ತು ಭೂಮಿಯ ಕತ್ತರಿಸುವಿಕೆ ಇತ್ಯಾದಿ ಕೆಲಸಗಳು 50. ತಾತ್ಕಾಲಿಕ ಆಶ್ರಯ ತಾಣಗಳ ನಿರ್ಮಾಣ ಮತ್ತು ಅಳವಡಿಕೆ 51. ಫಿಲಂಸೆಟ್ ಗಳ ನಿರ್ಮಾಣ ಮತ್ತು ಅಳವಡಿಕೆ.
ನೋಂದಣಿ ಸದಸ್ಯತ್ವ ಮುಂದುವರಿಕೆ: ಮುಂದಿನ ಒಂದು ವರ್ಷದವರೆಗೆ ಅಸ್ಥಿತ್ವದಲ್ಲಿರುವ ನೋಂದಣಿಯನ್ನು ಮುಂದುವರೆಸುವುದಕ್ಕಾಗಿ ಅರ್ಜಿ ನಮೂನೆ-V(E) ರಲ್ಲಿ ಭರ್ತಿಕರಿಸಿ ಅಗತ್ಯ ದಾಖಲೆ ಮತ್ತು ರೂ.25/-ಗಳ ವಂತಿಗೆಯನ್ನು ಪಾವತಿಸಿ ಮುಂದುವರಿಸಿಕೊಳ್ಳುವುದು.
ನಕಲು ಗುರುತಿನ ಚೀಟಿ ಪಡೆಯುವ ಕುರಿತು: ಫಲಾನುಭವಿಯು ಒಂದು ವೇಳೆ ತನ್ನ ಗುರುತಿನ ಚೀಟಿಯನ್ನು ಕಳೆದುಕೊಂಡ ಪಕ್ಷದಲ್ಲಿ ನಕಲು ಗುರುತಿನ ಚೀಟಿ ಪಡೆಯಲು ಅರ್ಜಿ ನಮೂನೆ-V(F)ರಲ್ಲಿ ಭರ್ತಿಕರಿಸಿ ಅಗತ್ಯ ದಾಖಲೆ ಮತ್ತು ರೂ.50/-ಗಳನ್ನು ಪಾವತಿಸಿ ನೋಂದಣಾಧಿಕಾರಿಗಳ ಕಛೇರಿಗೆ ಸಲ್ಲಿಸಿ ಪಡೆಯಬಹುದು.
ಫಲಾನುಭವಿಗಳಿಗೆ ಸಿಗುವ ಸೌಲಭ್ಯಗಳು
1. ಪಿಂಚಣಿ ಸೌಲಭ್ಯ: ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗೆ ಮಾಸಿಕ ರೂ.1,೦೦೦/-
2. ದುರ್ಬಲತೆ ಪಿಂಚಣಿ: ನೋಂದಾಯಿತ ಫಲಾನುಭವಿಯು ಖಾಯಿಲೆಗಳಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ/ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಾಸಿಕ ರೂ.1,೦೦೦/- ಪಿಂಚಣಿ ಹಾಗೂ ಶೇಕಡವಾರು ದುರ್ಬಲತೆಯನ್ನಾಧರಿಸಿ ರೂ.2,೦೦,೦೦೦/-ದವರೆಗೆ ಅನುಗ್ರಹ ರಾಶಿ ಸಹಾಯಧನ.
3. ಟ್ರೈನಿಂಗ್-ಕಮ್-ಟೂಲ್‌ಕಿಟ್ ಸೌಲಭ್ಯ (ಶ್ರಮ ಸಾಮರ್ಥ್ಯ) : ರೂ. 2೦,೦೦೦/-ವರೆಗೆ
4. ವಸತಿ ಸೌಲಭ್ಯ (ಕಾರ್ಮಿಕ ಗೃಹ ಭಾಗ್ಯ): ರೂ.2,೦೦,೦೦೦/-ದವರೆಗೆ ಮುಂಗಡ ಸೌಲಭ್ಯ
5. ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್): ಮಹಿಳಾ ಫಲಾನುಭವಿಯ ಮೊದಲ ಎರಡು ಮಕ್ಕಳಿಗೆ ಹೆಣ್ಣು ಮಗುವಿನ ಜನನಕ್ಕೆ ರೂ. 3೦,೦೦೦/- ಮತ್ತು ಗಂಡು ಮಗುವಿನ ಜನನಕ್ಕೆ ರೂ.2೦,೦೦೦/-
6. ಅಂತ್ಯಕ್ರಿಯೆ ವೆಚ್ಚ : ರೂ.4,೦೦೦/- ಹಾಗೂ ಅನುಗ್ರಹ ರಾಶಿ ರೂ.5೦,೦೦೦/- ಸಹಾಯಧನ
7. ಶೈಕ್ಷಣಿಕ ಸಹಾಯಧನ (ಕಲಿಕೆ ಭಾಗ್ಯ): ಫಲಾನುಭವಿಯ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ:
i) 1, 2 ಹಾಗೂ 3ನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ ರೂ. 2,೦೦೦/-
ii) 4, 5 ಹಾಗೂ 6ನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ ರೂ. 3,೦೦೦/-
iii) 7 ಹಾಗೂ 8ನೇ ತರಗತಿ ಉತ್ತೀರ್ಣರಾದವರಿಗೆ ರೂ. 4,೦೦೦/-
iv) 9, 10 ನೇ ತರಗತಿ ಹಾಗೂ ಪ್ರಥಮ ಪಿಯುಸಿ ಉತ್ತೀರ್ಣರಾದವರಿಗೆ 6,೦೦೦/-
v) ದ್ವಿತೀಯ ಪಿ.ಯು.ಸಿ ಉತ್ತೀರ್ಣರಾದವರಿಗೆ ರೂ. 8,೦೦೦/-
vi) ಐಟಿಐ ಮತ್ತು ಡಿಪ್ಲೋಮಾ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ ರೂ. 7,೦೦೦/-
vii)ಪದವಿ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ ರೂ. 1೦,೦೦೦/-
viii)ಸ್ನಾತಕೋತ್ತರ ಪದವಿ ಸೇರ್ಪಡೆಗೆ ರೂ. 2೦,೦೦೦/- ಹಾಗೂ ಪ್ರತಿ ವರ್ಷ ರೂ.1೦,೦೦೦/-ಗಳಂತೆ (ಎರಡು ವರ್ಷಗಳಿಗೆ)
ix)ಇಂಜಿನಿಯರಿಂಗ್ ಕೋರ್ಸ್ ಗೆ ಸೇರ್ಪಡೆಗೆ ರೂ.25,೦೦೦/- ಹಾಗೂ ಪ್ರತಿ ವರ್ಷ ತೇರ್ಗಡೆಗೆ ರೂ.2೦,೦೦೦/-
x)ವೈದ್ಯಕೀಯ ಕೋರ್ಸ್ ಗೆ ಸೇರ್ಪಡೆಗೆ ರೂ.3೦,೦೦೦/- ಹಾಗೂ ಪ್ರತಿ ವರ್ಷ ತೇರ್ಗಡೆಗೆ ರೂ.25,೦೦೦/-
xi)ಪಿಹೆಚ್‌ಡಿ ಕೋರ್ಸ್ಗೆ ಪ್ರತಿ ವರ್ಷಕ್ಕೆ ರೂ.2೦,೦೦೦/- (ಗರಿಷ್ಠ ಎರಡು ವರ್ಷಗಳು) ಮತ್ತು ಪಿಹೆಚ್‌ಡಿ ಪ್ರಬಂಧ ಸ್ವೀಕಾರದ ನಂತರ ಹೆಚ್ಚುವರಿಯಾಗಿ ರೂ.2೦,೦೦೦/-
ಪ್ರತಿಭಾವಂತ ಮಕ್ಕಳಿಗಾಗಿ:
a. ಎಸ್.ಎಸ್‌ಎಲ್.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.5,೦೦೦/-
b. ಪಿಯುಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ. 75 ಅಂಕ ಪಡೆದವರಿಗೆ ರೂ.7,೦೦೦/-
c. ಪದವಿ ಅಥವಾ ತತ್ಸಮಾನ ಕೋರ್ಸ್ನಲ್ಲಿ ಶೇ. 75 ಅಂಕ ಪಡೆದವರಿಗೆ ರೂ.1೦,೦೦೦/-
d. ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಕೋರ್ಸ ನಲ್ಲಿ ಶೇ. 75 ಅಂಕ ಪಡೆದವರಿಗೆ ರೂ.15,೦೦೦/-
8. ವೈದ್ಯಕೀಯ ಸಹಾಯಧನ (ಕಾರ್ಮಿಕ ಆರೋಗ್ಯ ಭಾಗ್ಯ): ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಭಿತರಿಗೆ ರೂ.3೦೦/- ರಿಂದ ರೂ.1೦,೦೦೦/-ವರೆಗೆ
9. ಅಪಘಾತ ಪರಿಹಾರ: ಮರಣ ಹೊಂದಿದ್ದಲ್ಲಿ ರೂ.5,೦೦,೦೦೦/-, ಸಂಪೂರ್ಣ ಶಾಶ್ವತ ದುರ್ಬಲತೆಯಾದಲ್ಲಿ ರೂ.2,೦೦,೦೦೦/- ಮತ್ತು ಭಾಗಶಃ ಶಾಶ್ವತ ದುರ್ಬಲತೆಯಾದಲ್ಲಿ ರೂ.1,೦೦,೦೦೦/-
10. ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ): ಹೃದ್ರೊಗ, ಕಿಡ್ನಿ ಜೋಡಣೆ, ಕ್ಯಾನ್ಸರ್ ಶಸ್ತçಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಪಾರ್ಶ್ವವಾಯು, ಮೂಳೆ ಶಸ್ತ್ರಚಿಕಿತ್ಸೆ,, ಗರ್ಭಕೋಶ ಶಸ್ತ್ರಚಿಕಿತ್ಸೆ,, ಅಸ್ತಮ ಚಿಕಿತ್ಸೆ, ಗರ್ಭಪಾತ ಪ್ರಕರಣಗಳು, ಪಿತ್ತಕೋಶದ ತೊಂದರೆಗೆ ಸಂಬಂಧಿತ ಚಿಕಿತ್ಸೆ, ಮೂತ್ರ ಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆ, ಮೆದುಳಿನ ರಕ್ತಸ್ರಾವದ ಚಿಕಿತ್ಸೆ, ಅಲ್ಸರ್ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸೆ, ಕಿಡ್ನಿ ಶಸ್ತ್ರಚಿಕಿತ್ಸೆ, ಇ.ಎನ್.ಟಿ. ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ, ವ್ಯಾಸ್ಕ್ಯೂಲರ್ ಶಸ್ತ್ರಚಿಕಿತ್ಸೆ, ಅನ್ನನಾಳದ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಕರುಳಿನ ಶಸ್ತ್ರಚಿಕಿತ್ಸೆ, ಸ್ತನ ಸಂಬಂಧಿತ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಹರ್ನಿಯ ಶಸ್ತ್ರಚಿಕಿತ್ಸೆ, ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ, ಮೂಳೆ ಮುರಿತ/ಡಿಸ್‌ಲೊಕೇಶನ್ ಚಿಕಿತ್ಸೆ, ಸಾಮಾನ್ಯ ಶಸ್ತ್ರಚಿಕಿತ್ಸೆಗಳಿಗೆ ರೂ.2,೦೦,೦೦೦/-ವರೆಗೆ
11. ಮದುವೆ ಸಹಾಯಧನ (ಗೃಹ ಲಕ್ಷ್ಮೀ ಬಾಂಡ್): ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ ರೂ.5೦,೦೦೦/-
12. LPG ಸಂಪರ್ಕ ಸೌಲಭ್ಯ (ಕಾರ್ಮಿಕ ಅನಿಲ ಭಾಗ್ಯ): ಅನಿಲ ಸಂಪರ್ಕದೊಂದಿಗೆ ಎರಡು ಬರ್ನರ್ ಸ್ಟೌವ್
13. ಬಿಎಂಟಿಸಿ ಬಸ್ ಪಾಸ್ ಸೌಲಭ್ಯ: ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವಂತಹ / ವಾಸಸ್ಥಳದಿಂದ ಬೆಂಗಳೂರಿಗೆ ಪ್ರಯಾಣಿಸುವ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ
14. ಕೆಎಸ್‌ಆರ್‌ಟಿಸಿ ಬಸ್ ಪಾಸ್‌ನ ಸೌಲಭ್ಯ: ರಾಜ್ಯದಾದ್ಯಂತ ವಿದ್ಯಾಭ್ಯಾಸದಲ್ಲಿ ತೊಡಗಿರುವ ನೋಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳಿಗೆ
15. ತಾಯಿ ಮಗು ಸಹಾಯ ಹಸ್ತ: ಮಹಿಳಾ ಫಲಾನುಭವಿಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆಕೆಯ ಮಗುವಿನ ಶಾಲಾ ಪೂರ್ವ ಶಿಕ್ಷಣ ಮತ್ತು ಪೌಷ್ಠಿಕತೆಗಾಗಿ ಮಗುವಿಗೆ ಮೂರು ವರ್ಷಗಳು ತುಂಬುವವರೆಗೆ ವಾರ್ಷಿಕ ರೂ.6,೦೦೦/-ಗಳ ಸಹಾಯಧನ.
ಈ ಮೇಲಿನ ಸಂಪೂರ್ಣ ಮಾಹಿತಿಯ pdf ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ.
ಹೆಚ್ಚಿನ ಮಾಹಿತಿಗೆ ಕಾರ್ಮಿಕ ಇಲಾಖೆಯ ಜಾಲತಾಣಕ್ಕೆ ಬೇಟಿ ನೀಡಿ.
No comments:
Post a Comment
If You Have any Doubts, let me Comment Here