JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Friday, October 7, 2022

Village Accountant Recruitment Rules Changed

  Jnyanabhandar       Friday, October 7, 2022
Subject: Village Accountant Recruitment Rules Changed



ಈವರೆಗೆ ಗ್ರಾಮಲೆಕ್ಕಿಗರ ಹುದ್ದೆಗೆ ( Village Accountant Recruitment ) ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಅವರು ದ್ವಿತೀಯ ಪಿಯುಸಿಯಲ್ಲಿ ( Second PUC ) ಗಳಿಸಿದಂತ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು.

ಆದ್ರೇ ಇದೀಗ ಈ ವಿಧಾನಕ್ಕೆ ರಾಜ್ಯ ಸರ್ಕಾರ ( Karnataka Government ) ಬ್ರೇಕ್ ಹಾಕಲಿದೆ. ಇದರ ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಗ್ರಾಮಲೆಕ್ಕಿಗರ ನೇಮಕಕ್ಕೆ ಸಮಿತಿಯನ್ನು ರಚಿಸಿ ಆದೇಶಿಸಿದೆ.

ಈ ಕುರಿತಂತೆ ಕಂದಾಯ ಇಲಾಖೆಯ ( Revenue Department ) ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿ ಹೊರಡಿಸಿದ್ದು, ಪ್ರಸ್ತುತ ಗ್ರಾಮಲೆಕ್ಕಿಗರ ಹುದ್ದೆಗಳನ್ನು ನೇರನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳುತ್ತಿದ್ದು, ಇದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( Karnataka Examination Authority - KEA) ದಿಂದ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ( Competitive Exam ) ಮೂಲಕ ನೇಮಕ ಮಾಡಿಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.


ಕೆಇಎ ಮೂಲಕ ಗ್ರಾಮಲೆಕ್ಕಿಗರ ನೇಮಕ ( Appointment of Village Accountants ) ಮಾಡುವ ಸಂಬಂಧ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಗೆ ಅಧ್ಯಕ್ಷರನ್ನಾಗಿ ಕಂದಾಯ ಇಲಾಖೆಯ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರನ್ನು ನೇಮಿಸಲಾಗಿದೆ. ಸದಸ್ಯರನ್ನಾಗಿ ಭೂ ಮಾಪನ ಕಂದಾಯ ವ್ಯಸಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ( Bengaluru Rural District ) ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಈ ಸಮಿತಿಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಿದಲ್ಲಿ ಅದರಿಂದಾಗುವ ಪರಿಣಾಮದ ಸಾಧಕ, ಬಾಧಕಗಳ ಬಗ್ಗೆ ಕೂಲಂಕುಶವಾಗಿ ಚರ್ಚಿಸಿ 15 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ.

ಅಂದಹಾಗೇ ಈ ಸಮಿತಿಯು ಗ್ರಾಮ ಲೆಕ್ಕಿಗರ ಹುದ್ದೆಯ ನೇಮಕಾತಿಗೆ ಅಭ್ಯರ್ಥಿಗಳನ್ನು ದ್ವಿತೀಯ ಪಿಯುಸಿಯಲ್ಲಿ ತೆಗೆದುಕೊಂಡ ಶೇಕಡವಾರು ಅಂಕಗಳ ಮೇಲೆ ನೇಮಕಾತಿಯನ್ನು ತೆಗೆದುಕೊಳ್ಳುವ ಬದಲಾಗಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಅನುಸಾರ ನೇಮಕಾತಿ ಮಾಡಿಕೊಳ್ಳುವ ಅಂಶಗಳ ಮೇಲೆ ಸಾಧಕ, ಬಾಧಕಗಳ ಕುರಿತಂತೆ ಚರ್ಚಿಸಲಾಗಿದೆ.

ಗ್ರಾಮಲೆಕ್ಕಿಗರ ನೇಮಕಾತಿಗೆ ಸಂಬಂಧಿಸಿದಂತೆ ಚಾಲ್ತಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅಗತ್ಯವಿದ್ದಲ್ಲಿ ಸೂಕ್ತ ತಿದ್ದುಪಡಿ ತರುವ ಬಗ್ಗೆ ಪರೀಶಿಲಿಸಲಿದೆ. ಅಲ್ಲದೇ ಕೆಇಎಯಿಂದ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಅಭ್ಯರ್ಥಿಗಳ ಜ್ಞಾನವನ್ನು ಓರೆಗೆ ಹಚ್ಚಿ, ನಂತ್ರ ಅಭ್ಯರ್ಥಿಗಳ ಆಯ್ಕೆ ಮಾಡುವ ಬಗ್ಗೆಯೂ ಪರಿಶೀಲನೆ ನಡೆಸಲಿದೆ.


ಈ ಹಿನ್ನಲೆಯಲ್ಲಿ ಕೆಲವೇ ದಿನಗಳಲ್ಲಿ ಗ್ರಾಮಲೆಕ್ಕಿಗರ ಹುದ್ದೆಯ ನೇಮಕಾತಿಯ ವಿಧಾನದಲ್ಲಿ ಬದಲಾವಣೆಯಾಗಲಿದೆ. ನೇರ ನೇಮಕಾತಿ ಮೂಲಕ ದ್ವಿತೀಯ ಪಿಯುಸಿಯಲ್ಲಿ ಗಳಿಸಿದಂತ ಶೇಕಡಾವಾರು ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆಯ ವಿಧಾನ ಬದಲಾಗಲಿದೆ. ಇದರ ಬದಲಾಗಿ ಗ್ರಾಮಲೆಕ್ಕಿಗರ ಹುದ್ದೆಗೆ ಆಯ್ಕೆಯನ್ನು ಕೆಇಎ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಅಲ್ಲಿ ಗಳಿಸಿದಂತ ಅಂಕಗಳ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವಂತ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಶೀಘ್ರವೇ ಜಾರಿಗೆ ತರಲಿದೆ.

ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅಧಿಕೃತ ಆದೇಶ ಡೌನ್ಲೋಡ್ ಮಾಡಿಕೊಳ್ಳಿ.

Download Notification

logoblog

Thanks for reading Village Accountant Recruitment Rules Changed

Previous
« Prev Post

No comments:

Post a Comment

If You Have any Doubts, let me Comment Here