JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Monday, October 31, 2022

Kannada Rajyostava History, Importance, Celebration Full Details

  Jnyanabhandar       Monday, October 31, 2022
Subject: Kannada Rajyostava History, Importance, Celebration Full Details




(Karnataka Rajyotsava 2022 )ಕನ್ನಡ ರಾಜ್ಯೋತ್ಸವ ಕನ್ನಡಿಗರು ಹೆಮ್ಮೆಯಿಂದ ತಲೆಯೆತ್ತಿ ನೋಡುವ ದಿನ. ದಕ್ಷಿಣ ಭಾರತದ ಎಲ್ಲಾ ಕನ್ನಡ ಮಾತನಾಡುವ ಪ್ರಾಂತ್ಯಗಳನ್ನು ಒಗ್ಗೂಡಿಸಿ ಒಂದು ರಾಜ್ಯವನ್ನಾಗಿ ಘೋಷಣೆ ಮಾಡಿದ ದಿನ ನವೆಂಬರ್‌ 1. ಇದೇ ಕಾರಣಕ್ಕೆ ಈ ದಿನವನ್ನು ಕನ್ನಡಿಗರು ನಾಡಹಬ್ಬವಾಗಿ ಆಚರಿಸುತ್ತಾರೆ.

ಕರ್ನಾಟಕ ರಾಜ್ಯೋತ್ಸವದ ದಿನವನ್ನು ಸರಕಾರ ರಜಾ ದಿನವೆಂದು ಘೋಷಣೆ ಮಾಡಿದೆ. ಇಡೀ ಕರ್ನಾಟಕ ರಾಜ್ಯದಾದ್ಯಂತ ಕನ್ನಡಿಗರು ಹೆಮ್ಮೆಯಿಂದ ಆಚರಿಸುತ್ತಾರೆ . ಈಗ ನಾವು 67 ನೇ ಕರ್ನಾಟಕ ರಾಜ್ಯೋತ್ಸವ(Karnataka Rajyotsava 2022 )ದ ಸಂಭ್ರಮದಲ್ಲಿದ್ದೇವೆ. ಈ ಕುರಿತು ಕನ್ನಡ ರಾಜ್ಯೋತ್ಸವದ ಇತಿಹಾಸ , ಮಹತ್ವ , ಆಚರಣೆ , ಪ್ರಶಸ್ತಿಗಳ ಕುರಿತಾಗಿ ಕೆಲವು ಮಾಹಿತಿಗಳನ್ನು ತಿಳಿಯೋಣ .


ಕನ್ನಡ ರಾಜ್ಯೋತ್ಸವ(Karnataka Rajyotsava 2022 )ದ ಇತಿಹಾಸ :

ಕರ್ನಾಟಕ ಏಕಿಕರಣ ಚಳುವಳಿಯನ್ನು ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾಯರು 1905 ರಲ್ಲಿ ಪ್ರಾರಂಭಿಸಿದರು . ಭಾರತವು ಗಣರಾಜ್ಯವಾದ ನಂತರ ರಾಜ್ಯವಾರು ವಿಂಗಡಣೆಗಳು ಪ್ರಾರಂಭಗೊಂಡವು . ಸುಮಾರು ಇಪ್ಪತ್ತಕ್ಕೂ ಹೆಚ್ಚು ಪ್ರಾಂತ್ಯಗಳು ಹರಿದು ಹಂಚಿ ಹೋಗಿದ್ದವು . ಕನ್ನಡ ಭಾಷಿಕರೆಲ್ಲರೂ ಕನ್ನಡ ನಾಡಿಗೆ ಸೇರಬೇಕು ಎನ್ನುವ ಆಶಯ ಗಟ್ಟಿಯಾಗತೊಡಗಿತು . ನಂತರ ರಾಜ್ಯ ಪುನರ್‌ ಸಂಘಟನಾ ಕಾಯ್ದೆ ಜಾರಿಗೆ ಬಂದು ಕೊಡಗು ಕರ್ನಾಟಕದ ಭಾಗವಾಯಿತು. ಮದ್ರಾಸ್‌ , ಬಾಂಬೆ , ಹೈದ್ರಾಬಾದ್‌ ಗಳಲ್ಲಿ ಸೇರಿಕೊಂಡಿದ್ದ ಕನ್ನಡ ಮಾತನಾಡುವವರ ನೆಲ ಕರ್ನಾಟಕದೊಳಗೆ ಸೇರಿಕೊಂಡಿತು . ದಕ್ಷಿಣ ಭಾರತದಲ್ಲಿ ಹರಿದು ಹಂಚಿಹೋಗಿದ್ದ ಎಲ್ಲಾ ಪ್ರಾಂತ್ಯಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯ 1950 ನವೆಂಬರ್‌ 1 ರಲ್ಲಿ ಉದಯವಾಯಿತು . ಆ ದಿನವನ್ನೇ ನಾವಿಂದು ಕನ್ನಡ ರಾಜ್ಯೋತ್ಸವ ಎಂದು ಆಚರಿಸಲಾಗುತ್ತಿದೆ .



ಕನ್ನಡ ರಾಜ್ಯೋತ್ಸವದ ಮಹತ್ವ ;
ಕನ್ನಡ ಇತಿಹಾಸ , ಹೋರಾಟಗಳು ಹಾಗೂ ಅದರ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಹಾಗೂ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಅದೇಷ್ಟೋ ಮಹನೀಯರನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವವು ಅತಿ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ . ಅಲ್ಲದೇ ಕನ್ನಡ ನಾಡಿಗಾಗಿ , ನಾಡು ನುಡಿಗಾಗಿ ದುಡಿದ ಮಹನೀಯರನ್ನು ಗೌರವಿಸುವ ಮೂಲಕ ಜನತೆಗೆ ನಾಡಿನ ಸೇವೆಯನ್ನು ಮುಂದುವರಿಸಲು ಪ್ರೇರಣೆ ನೀಡಿದಂತಾಗುತ್ತದೆ . ಕನ್ನಡ ನಾಡು ನುಡಿಯ ಮಹತ್ವವನ್ನು ಕನ್ನಡ ಜನತೆ ಅರಿತುಕೊಂಡಾಗ ಮಾತ್ರವೇ ಕನ್ನಡಕ್ಕಾಗಿ , ರಾಜ್ಯ ಏಕೀಕರಣಕ್ಕಾಗಿ ದುಡಿದ ಮಹನೀಯರ ಶ್ರಮಕ್ಕೆ ಮತ್ತು ಕನ್ನಡ ರಾಜ್ಯೋತ್ಸವದ ಆಚರಣೆಗೆ ಒಂದು ಸಾರ್ಥಕತೆ ಸಿಗುತ್ತದೆ .

ಕನ್ನಡ ರಾಜ್ಯೋತ್ಸವದ ಆಚರಣೆ ;
ನಾಡಿನ ಸಮಸ್ತ ಜನತೆ ಯಾವುದೇ ಜಾತಿ , ಧರ್ಮ , ಪಂಥಗಳ ಭೇದ ಭಾವಗಳಿಲ್ಲದೆ ಒಗ್ಗಟ್ಟಿನಿಂದ ಆಚರಿಸುವ ಏಕೈಕ ಹಬ್ಬ ಕನ್ನಡ ರಾಜ್ಯೋತ್ಸವ . ಅರಿಶಿನ , ಕುಂಕುಮದ ಸಂಕೇತವೆಂಬಂತೆ ಹಳದಿ ಕೆಂಪು ಮಿಶ್ರಿತ ಬಾವುಟವನ್ನು ಶಾಲಾ-ಕಾಲೇಜು , ಕಂಪನಿ , ಸರ್ಕಾರಿ ಕಚೇರಿಗಳಲ್ಲಿ ಭಾನೆತ್ತರಕ್ಕೆ ಹಾರಿಸುತ್ತಾ, ನಾಡಗೀತೆಯನ್ನು ಹಾಡುವ ಮೂಲಕವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ . ಕೆಲವು ಕನ್ನಡ ಪರ ಸಂಘಟನೆಗಳು, ಸ್ವಯಂ ಸೇವಾ ಸಂಘಗಳು, ಎನ್ ಜಿ ಒಗಳು ಸಹ ಕನ್ನಡ ಮಾತೆ ಭುವನೇಶ್ವರಿಯ ಭಾವಚಿತ್ರವನ್ನಿಟ್ಟು ಮೆರವಣಿಗೆಗಳನ್ನು ನಡೆಸುತ್ತಾರೆ . ರಾಜ್ಯೋತ್ಸವದ ಸಂದರ್ಭದಲ್ಲಿ ರಕ್ತದಾನ ಶಿಬಿರಗಳು, ಕನ್ನಡ ಪರ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ . ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳ ಮೂಲಕ ಕನ್ನಡಕ್ಕಾಗಿ , ಕನ್ನಡ ನಾಡಿಗಾಗಿ ದುಡಿದವರಿಗೆ ಗೌರವವನ್ನು ಸಲ್ಲಿಸಲಾಗುತ್ತದೆ.

ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಮಹನೀಯರು ;

ನೂರಾರು ಮಹನೀಯರು , ಲಕ್ಷಾಂತರ ಪ್ರಜೆಗಳ ಹೋರಾಟದ ಫಲವಾಗಿ ಇಂದು ನಾವು ಏಕೀಕೃತ ನಾಡನ್ನು ಕಟ್ಟಿಕೊಂಡಿದ್ದೇವೆ . ಕನ್ನಡ ನಾಡು ಏಕೀಕರಣವಾಗಲು ಹಲವು ಮಹನೀಯರ ಕೊಡುಗೆ ಅಪಾರ . ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್‌ , ಕೆ. ಶಿವರಾಮ್‌ ಕಾರಂತ್‌ , ಕುವೆಂಪು , ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ , ಹುಯಿಲಗೋಳ ನಾರಾಯಣರಾವ್‌ , ಎ.ಎನ್‌ ಕೃಷ್ಣರಾವ್‌ , ಬಿ.ಎಮ್‌ ಶ್ರೀಕಂಠಯ್ಯ ಸೇರಿದಂತೆ ನೂರಾರು ಮಹನೀಯರು ಹಾಗೂ ಲಕ್ಷಾಂತರ ಪ್ರಜೆಗಳ ಹೋರಾಟದ ಫಲವೇ ಈ ಕನ್ನಡ ರಾಜ್ಯೋತ್ಸವ .

ಕನ್ನಡ ರಾಜ್ಯೋತ್ಸವ ಪ್ರಶಸ್ತಿ;

ಕರ್ನಾಟಕ ಸರ್ಕಾರದಿಂದ ಕೊಡಲಾಗುವ ಎರಡನೇ ಅತ್ಯುನ್ನತ ನಾಗರೀಕ ಪ್ರಶಸ್ತಿಯೇ ಈ ಕನ್ನಡ ರಾಜ್ಯೋತ್ಸವ ಪ್ರಶಸ್ತಿ . ಕಲೆ , ಸಾಹಿತ್ಯ, ಸಿನಿಮಾ ,ಸಂಗೀತ , ಯಕ್ಷಗಾನ, ಶಿಲ್ಪಕಲೆ ,ಚಿತ್ರಕಲೆ , ಸಮಾಜಸೇವೆ, ಪತ್ರಿಕೋದ್ಯಮ , ಕ್ರೀಡೆ , ಶಿಕ್ಷಣ , ತಂತ್ರಜ್ಞಾನ ಸೇರಿದಂತೆ ವಿವಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ .

ಈ ರಾಜ್ಯೋತ್ಸವ ಪ್ರಶಸ್ತಿಯನ್ನು1955 ರಿಂದ ನೀಡಲು ಆರಂಭಿಸಲಾಗಿದೆ.ಸಾಮಾನ್ಯವಾಗಿ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತದೆ . ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವ ಧನ , 25 ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ, ಮತ್ತು ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ . ಅಲ್ಲದೆ ಅರ್ಹ ಪ್ರಶಸ್ತಿ ಪುರಸ್ಕೃತರಿಗೆ ಸರ್ಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮ ಕೂಡ ಜಾರಿಯಲ್ಲಿದೆ . ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಕಡೆಯಿಂದ ಪ್ರಶಸ್ತಿ ಪ್ರಧಾನವಾಗುತ್ತದೆ.


logoblog

Thanks for reading Kannada Rajyostava History, Importance, Celebration Full Details

Previous
« Prev Post

No comments:

Post a Comment

If You Have any Doubts, let me Comment Here