JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Thursday, October 13, 2022

E Shram Card Download

  Jnyanabhandar       Thursday, October 13, 2022

Subject: E Shram Card Download

E Shram Card Registration and Benefits All Details Avalible Below in Kannnada Language



ಅಸಂಘಟಿತ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಆರಂಭವಿಸಿದ ಹಲವಾರು ಯೋಜನೆಗಳಲ್ಲಿ ಇ-ಶ್ರಮ ಯೋಜನೆಯೂ ಒಂದಾಗಿದೆ. ಈ ಯೋಜನೆಯಡಿ ನೋಂದಾಯಿಸಿದ ಕಾರ್ಮಿಕರಿಗೆ 2 ಲಕ್ಷ ರೂಪಾಯಿಯವರೆಗೆ ವಿಮಾ ಸೌಲಭ್ಯ ಸಿಗುತ್ತದೆ. ವಿಮೆ ಸೌಲಭ್ಯದೊಂದಿಗೆ ಇತರ ಯಾವ ಯಾವ ಸೌಲಭ್ಯಗಳು ಸಿಗುತ್ತವೆ? ಇ ಶ್ರಮ ಕಾರ್ಡ್ ಮಾಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

E Shram  ಯೋಜನೆಯಡಿ ಯಾವ ಯಾವ ಸೌಲಭ್ಯಗಳು ಸಿಗುತ್ತವೆ?

ಈ ಶ್ರಮ್ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಸಿಕೊಂಡ ಎಲ್ಲಾ ಕಾರ್ಮಿಕರಿಗೆ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಇದರೊಂದಿಗೆ ಕಾರ್ಮಿಕರು ಆಕಸ್ಮಿಕ ಸಾವು ಅಥವಾ ಪೂರ್ಣ ಅಂಗವೈಕಲ್ಯತೆಗೆ 2 ಲಕ್ಷ ರೂಪಾಯಿವರೆಗೆ ಪರಿಹಾರ ಪಡೆಯಬಹುದು. ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರೂಪಾಯಿ ಪರಿಹಾರ ಪಡೆಯಬಹುದು. ಅಸಂಘಟಿತ ಕಾರ್ಮಿಕರು ತಮ್ಮ ಹೆಸರು ನೋಂದಣಿ ಮಾಡಿಸಿಕೊಂಡಿದ್ದರೆ ಸರ್ಕಾರದ ಎಲ್ಲಾ ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳ ಸೌಲಭ್ಯಗಳನ್ನು ಡಿಬಿಟಿ ಮೂಲಕ ಪಡೆಯಬಹುದು.

ಯಾರುಯಾರು  ನೋಂದಣಿ ಮಾಡಿಸಬಹುದು?

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ಸಣ್ಣ ಮತ್ತು ಅತೀ ಸಣ್ಣ ರೈತರು, ಮೀನುಗಾರರು, ಪಶು ಸಂಗೋಪನಾಕಾರರು, ನೇಕಾರರು, ಬಡಗಿ ಕೆಲಸಗಾರರು, ಆಶಾ ಕಾರ್ಯಕರ್ತರು, ಫೋಟೋಗ್ರಾಫರ್, ತರಕಾರಿ ಮತ್ತು ಹಣ್ಣು ಮಾರಾಟಗಾರರು, ಮನೆ ಕೆಲಸಗಾರರು, ಪತ್ರಿಕೆ ಮಾರಾಟಗಾರರು, ಚಾಲಕರು, ಕೂಲಿ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಅಂಗಡಿ ವ್ಯಾಪಾರಸ್ಥರು, ಟೇಲರ್ ಗಳು, ಹೋಟೆಲ್ ಕಾರ್ಮಿಕರು, ಬೇಕರಿ ವ್ಯಾಪಾರಸ್ಥರು ನೋಂದಣಿ ಮಾಡಿಸಬಹುದು.


ಆನ್ಲೈನ್ ನಲ್ಲಿ Self Registration ಹೇಗೆ ಮಾಡಬೇಕು?

ಸಾರ್ವಜನಿಕರು ಆನ್ಲೈನ್ ನಲ್ಲಿ ನೋಂದಣಿ ಮಾಡಿಸಬೇಕಾದರೆ ಈ

https://eshram.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇ- ಶ್ರಮ ಸರ್ಕಾರದ ಯೋಜನೆ ಪೇಜ್ ಓಪನ್ ಆಗುತ್ತದೆ.  ಅಲ್ಲಿ Registration is totally free Register on EShram ಮೇಲೆ ಕ್ಲಿಕ್ ಮಾಡಬೇಕು. ಆಗ  ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Self Registration  ಕೆಳಗಡೆ ನಿಮ್ಮ ಮೊಬೈಲ್ ನಂಬರ್ ನಮೂದಿಸಿದ ನಂತರ ಕ್ಯಾಪ್ಚ್ಯಾಕೋಡ್ ನಮೂದಿಸಬೇಕು.  ನಂರ ನೀವು ಇಎಸ್ಐಸಿ, ಇಜಿಎಫ್ಓ ಸೌಲಭ್ಯಪಡೆಯುತ್ತಿದ್ದರೆ ಯಸ್ ಇಲ್ಲದಿದ್ದರೆ ನೋ ಎಂದು ಸೆಲೆಕ್ಟ್ ಮಾಡಿ ಸೆಂಡ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು.ಆಗ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ.ಓಟಿಪಿ ನಮೂದಿಸಿದ ನಂತರ ಅಲ್ಲಿ ಕೇಳಲಾದ ಅಗತ್ಯ ಮಾಹಿತಿ ಭರ್ತಿ ಮಾಡಿ ಇ ಶ್ರಮ ಕಾರ್ಡ್ ಪಡೆಯಬಹುದು.

ಒಂದು ವೇಳೆ ಆನ್ಲೈನ್ ನಲ್ಲಿ ಹೆಸರು ನೋಂದಾಯಿಸಿ ಸಮಸ್ಯೆಯಾಗುತ್ತಿದ್ದರೆ ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (ಸಿಎಸ್.ಸಿ)  ಸಾರ್ವಜನಿಕರು ಇ ಶ್ರಮ ಕಾರ್ಡ್ ಗಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಅರ್ಜಿ ನೋಂದಣಿ ಮಾಡಲು ಪ್ರತಿ ನೋಂದಣಿಗೆ 20 ರೂಪಾಯಿಯನ್ನು ಸಂಬಂಧಿಸಿದ ಸಾಮಾನ್ಯ ಸೇವಾ ಕೇಂದ್ರಗಳಿಗೆ ಕೇಂದ್ರ ಸರ್ಕಾರವೇ ಹಣ ಪಾವತಿಸುತ್ತದೆ. ಸಾರ್ವಜನಿಕರಿಗೆ ಈ ನೋಂದಣಿ ಸಂಪೂರ್ಣ ಉಚಿತವಾಗಿದೆ.


ನೋಂದಣಿ ಮಾಡಿಸುವಾಗ ಸಮಸ್ಯೆಯಾಗುತ್ತಿದ್ದರೆ 14434 ಸಹಾಯವಾಣಿಗೆ ಕರೆ ಮಾಡಿ ನೆರವು ಪಡೆಯಬಹುದು. ಕನ್ನಡ ಭಾಷೆ ಆಯ್ಕೆ ಮಾಡಿಕೊಂಡು ನೆರವು ಪಡೆಯಬಹುದು.

ಏನಿದು ಇ ಶ್ರಮ ಕಾರ್ಡ್?

ಇ ಶ್ರಮ ಯೋಜನೆಯಡಿ ನೋಂದಾಯಿಸಿದ ಕಾರ್ಮಿಕರಿಗೆ ಇ ಶ್ರಮ ಕಾರ್ಡ್ ನೀಡಲಾಗುವುದು.  ನೋಂದಾಯಿಸಿದ ಕಾರ್ಮಿಕರಿಗೆ 12 ಅಂಕಿಗಳ ವಿಶಿಷ್ಟ ಗುರುತಿನ ಇ-ಶ್ರಮ ಕಾರ್ಡ್ ನೀಡಲಾಗುವುದು. ಇದು ಜೀವಿತಾವಧಿ ವ್ಯಾಲಿಡಿಟಿ ಹೊಂದಿರುತ್ತದೆ. ಈ ಕಾರ್ಡ್ ದಿಂದಾಗಿ ಎಲ್ಲಾ ಯೋಜನೆಗಳ ಪ್ರಯೋಜನ ಪಡೆಯಬಹುದು.

ನೋಂದಣಿ ಮಾಡಿಸಲು ಯಾವ ಯಾವ ದಾಖಲೆ ಬೇಕು?

ಇ ಶ್ರಮ ಕಾರ್ಡ್ ಗಾಗಿ ನೋಂದಣಿ ಮಾಡಿಸುವವರ ಬಳಿ ಆಧಾರ್ ಕಾರ್ಡ್ ಇರಬೇಕು. 16 ರಿಂದ 59 ವಯೋಮಾನದವರಾಗಿರಬಬೇಕು.  ಮೊಬೈಲ್ ನಂಬರ್ ಇರಬೇಕು. ಬ್ಯಾಂಕ್ ಪಾಸ್ ಬುಕ್ ಇರಬೇಕು. ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಲಿಂಕ್ ಆಗಿರಬೇಕು.

logoblog

Thanks for reading E Shram Card Download

Previous
« Prev Post

No comments:

Post a Comment

If You Have any Doubts, let me Comment Here