Tumakuru District VAO Final Selection List 2024
ತುಮಕೂರು ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಅಡಳಿತ ಅಧಿಕಾರಿಗಳ ಹುದ್ದೆಗಳ ಪೈಕಿ 72 ಹುದ್ದೆಗಳಗೆ ನೇಮಕಾತಿ ಮಾಡುವ ಕುರಿತಂತೆ ಅಂತಿಮ ಆಯ್ಕೆ ಪಟ್ಟಿ ಮತ್ತು ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಪ್ರಕಟಿಸುವ ಕುರಿತು.
ಕಂದಾಯ ಇಲಾಖೆಯ ತುಮಕೂರು ಜಿಲ್ಲಾ ಘಟಕದ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಉಲ್ಲೇಖ (1)ರಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿ ಸ್ಪರ್ಧಾತ್ಮಕ ಪರೀಕ್ಷೆಯ ಮುಖಾಂತರ ಅರ್ಹರಾದ ಅಭ್ಯರ್ಥಿಗಳ ಅಂತಿಮ ಅಂಕಪಟ್ಟಿಯನ್ನು ಉಲ್ಲೇಖ (2)ರಲ್ಲಿ ಜಿಲ್ಲಾವಾರು ಪ್ರಕಟಿಸಿರುತ್ತಾರೆ.
ಉಲ್ಲೇಖ(3) ರಂತೆ ತುಮಕೂರು ಜಿಲ್ಲೆಗೆ ಅರ್ಹತೆ ಪಡೆದಿರುವ ಒಟ್ಟು 4320 ಅಭ್ಯರ್ಥಿಗಳ ಪೈಕಿ ತುಮಕೂರು ಜಿಲ್ಲಾ ಕಂದಾಯ ಘಟಕಕ್ಕೆ ಈಗಾಗಲೇ ಅನುಮೋದನೆಯಾಗಿರುವ 73 ಹುದ್ದೆಗಳಿಗೆ ಪ್ರಾಧಿಕಾರ ನೀಡಿರುವ ಮೆರಿಟ್ ಪಟ್ಟಿಯಲ್ಲಿ 1:3 ಅನುಪಾತದಂತೆ ದಾಖಲಾತಿ ಪರಿಶೀಲನೆಗೆ ಆಹ್ವಾನಿಸಿ, ದಾಖಲಾತಿ ಪರಿಶೀಲಿಸಿ 1:1 ಅನುಪಾತದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ ಆಕ್ಷೇಪಣೆಗಳಿಗೆ ಅವಕಾಶ ನೀಡಿ ನಂತರ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ ಸಿಂಧುತ್ವ ಪ್ರಮಾಣ ಪತ್ರ ಮತ್ತು ಪೊಲೀಸ್ ವರದಿ, ಪಿಯುಸಿ/12ನೇ ತರಗತಿ ಅಂಕಪಟ್ಟಿಯ ನೈಜತೆಯನ್ನು ಪರಿಶೀಲಿಸಿಕೊಂಡು ನೇಮಕಾತಿ ಆದೇಶ ನೀಡಲು ನಿರ್ದೇಶನ ನೀಡಲಾಗಿರುತ್ತದೆ.
ಆದರಂತೆ, ತುಮಕೂರು ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿಗಳ ಪೈಕಿ 72 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಅರ್ಹ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಗಾಗಿ ಆಯ್ಕೆ ಪಟ್ಟಿಯನ್ನು ಸರ್ಕಾರ ನಿಗಧಿಪಡಿಸಿದ ಮೀಸಲಾತಿ ರೋಸ್ಟರ್ ನಿಯಮದ ಪ್ರಕಾರ ಹುದ್ದೆಗಳಿಗೆ 1:3 ಅನುಪಾತದಲ್ಲಿ 219 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಬೇಕಾಗಿದ್ದು, ಪ.ಜಾತಿ ವರ್ಗದ ಅಂಗವಿಕಲ (ವಿಕಲಚೇತನ) ಮೀಸಲಾತಿಯಲ್ಲಿ 2 ಅಭ್ಯರ್ಥಿಗಳು ಲಭ್ಯವಿದ್ದು, 1 ಅಭ್ಯರ್ಥಿ ಲಭ್ಯವಿರುವುದಿಲ್ಲ ಹಾಗೂ ಪ.ಜಾತಿ ವರ್ಗದ ಮಾಜಿ ಸೈನಿಕ ಮೀಸಲಾತಿಯಲ್ಲಿ 3 ಅಭ್ಯರ್ಥಿಗಳು ಲಭ್ಯವಿರುವುದಿಲ್ಲ. ಕಾರಣ ಒಟ್ಟು 215 ಅಭ್ಯರ್ಥಿಗಳ ಪಟ್ಟಿಯನ್ನು ಉಲ್ಲೇಖ(4)ರಂತೆ ಪ್ರಕಟಿಸಲಾಗಿರುತ್ತದೆ.
ಈ ಪೈಕಿ ಪರಿಶಿಷ್ಟ ಜಾತಿ - ಮಾಜಿ ಸೈನಿಕ ಮೀಸಲಾತಿಗೆ ಮೆರಿಟ್ ಪಟ್ಟಿಯಲ್ಲಿ ಅರ್ಹ ಅಭ್ಯರ್ಥಿಗಳಿಲ್ಲದ್ದರಿಂದ ಪರಿಶಿಷ್ಟ ಜಾತಿಯ ಇತರೆ ಮೀಸಲಾತಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ ಮತ್ತು ಸಾಮಾನ್ಯ ವರ್ಗದ ತೃತೀಯ ಲಿಂಗ ಮೀಸಲಾತಿಯ ಅರ್ಹ ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಇಲ್ಲದೇ ಇರುವುದರಿಂದ ಮೆರಿಟ್ ಪಟ್ಟಿಯಲ್ಲಿನ ಉಳಿದ ಅರ್ಹ ಅಭ್ಯರ್ಥಿಗಳ ಪೈಕಿ ಒರ್ವ ಅರ್ಹ ಅಭ್ಯರ್ಥಿಯನ್ನು ತುಂಬುವ ಬಗ್ಗೆ ಕ್ರಮವಹಿಸಲಾಗುತ್ತದೆ.
ಉಲ್ಲೇಖ(5) ರಂತೆ ತುಮಕೂರು ಜಿಲ್ಲೆ ಕಂದಾಯ ಘಟಕದ ಗ್ರಾಮ ಆಡಳಿತ ಅಧಿಕಾರಿಗಳ ನೇಮಕಾತಿ ಸಂಬಂಧ ತಾತ್ಕಾಲಿಕ 1:1 ಆಯ್ಕೆ ಪಟ್ಟಿ ಮತ್ತು ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳೇನಾದರೂ ಇದ್ದಲ್ಲಿ ದಿನಾಂಕ:16.01.2025 ರಿಂದ ದಿನಾಂಕ:23.01.2025 ಸಂಜೆ 5.30 ರವರೆಗೆ ನಿಗದಿತ ನಮೂನೆಯಲ್ಲಿ ಆಕ್ಷೇಪಣೆಗಳನ್ನು ಪುಷ್ಟಿಕರಿಸುವ ದಾಖಲಾತಿಗಳೊಂದಿಗೆ ಈ ಕಚೇರಿಗೆ . ಮುದ್ಧಾಂ ಸಲ್ಲಿಸಲು ಸೂಚಿಸಲಾಗಿರುತ್ತದೆ. ತಪ್ಪಿದ್ದಲ್ಲಿ ನಿಗದಿತ ದಿನಾಂಕದೊಳಗೆ ನಿಮ್ಮ ಆಕ್ಷೇಪಣೆಗಳು ಏನು ಇರುವುದಿಲ್ಲವೆಂದು ಭಾವಿಸಿ, ಸದರಿ ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ಹೆಚ್ಚುವರಿ ಆಯ್ಕೆ ಪಟ್ಟಿಯನ್ನೇ ನಿಯಮಾನುಸಾರ ಅಂತಿಮಗೊಳಿಸಲಾಗುವುದು ಎಂದು ತಿಳಿಯಪಡಿಸಲಾಗಿರುತ್ತದೆ.
No comments:
Post a Comment
If You Have any Doubts, let me Comment Here