Village Administratative Officers Provisitional Selection List 2024
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಗಳು ಪ್ರಕಟ.
ವಿಷಯಕ್ಕೆ ಸಂಬಂಧಿಸಿದಂತೆ, ಕಂದಾಯ ಇಲಾಖೆಯಲ್ಲಿನ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಉಲ್ಲೇಖ (1)ರಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿ ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಯನ್ನು ದಿನಾಂಕ: 29.09.2024 ಮತ್ತು 26.10.2024 ಹಾಗೂ 27.10.2024 ರಂದು ನಡೆಸಿರುತ್ತಾರೆ. ಅಭ್ಯರ್ಥಿಗಳು ಗಳಿಸಿದ ತಾತ್ಕಾಲಿಕ ಅಂಕಪಟ್ಟಿಯನ್ನು ದಿನಾಂಕ: 27.11.2024 ರಂದು ಪ್ರಕಟಿಸಿ ದಿನಾಂಕ: 28.11.2024 ರ ವರೆಗೆ ಆಕ್ಷೇಪಣೆಗಳನ್ನು ಆಹ್ವಾನಿಸಿ ನಿಗದಿತ ದಿನಾಂಕದವರೆಗೆ ಅಭ್ಯರ್ಥಿಗಳಿಂದ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಶೀಲಿಸಿ ಉಲ್ಲೇಖ (2)ರಂತೆ ಅರ್ಹರಾದ ಅಭ್ಯರ್ಥಿಗಳ ಅಂತಿಮ ಅಂಕಪಟ್ಟಿಯನ್ನು ಜಿಲ್ಲಾವಾರು ಪ್ರಕಟಿಸಿದ್ದು ಇರುತ್ತದೆ.
ಉಲ್ಲೇಖ (3)ರಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜಿಲ್ಲಾವಾರು ಅರ್ಹತೆಗಳಿಸಿದ ಅಭ್ಯರ್ಥಿಗಳ ಎಲ್ಲಾ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. ಅದರಂತೆ ಉಲ್ಲೇಖ (4)ರ ಸರ್ಕಾರದ ಪತ್ರದಲ್ಲಿ ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ)ನಿಯಮಗಳು, 2021 ರಂತೆ ಧಾರವಾಡ ಜಿಲ್ಲೆಗೆ ಅರ್ಹತೆ ಪಡೆದಿರುವ ಒಟ್ಟು 227 ಅಭ್ಯರ್ಥಿಗಳ ಪೈಕಿ ಈಗಾಗಲೇ ಅನುಮೋದನೆಯಾಗಿರುವ 12 ಹುದ್ದೆಗಳಿಗೆ ಪ್ರಾಧಿಕಾರ ನೀಡಿರುವ ಮೆರಿಟ್ ಪಟ್ಟಿಯಲ್ಲಿ 1:3 ಅನುಪಾತದಂತೆ ದಾಖಲಾತಿ ಪರಿಶೀಲನೆಗೆ ಆಹ್ವಾನಿಸಿ, ದಾಖಲಾತಿ ಪರಿಶೀಲಿಸಿ 1:1 ಅನುಪಾತದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ ಆಕ್ಷೇಪಣೆಗಳಿಗೆ ಅವಕಾಶ ನೀಡಿ ನಂತರ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ ಸಿಂಧುತ್ವ ಪ್ರಮಾಣ ಪತ್ರ ಮತ್ತು ಪೊಲೀಸ್ ವರದಿ, ಪಿಯುಸಿ/12ನೇ ತರಗತಿ ಅಂಕಪಟ್ಟಿಯ ನೈಜತೆಯನ್ನು ಪರಿಶೀಲಿಸಿಕೊಂಡು ನೇಮಕಾತಿ ಆದೇಶ ನೀಡಲು ನಿರ್ದೇಶನ ನೀಡಲಾಗಿದ್ದು ಇರುತ್ತದೆ.
ಕೆಳಗಿನ ಪಟ್ಟಿಯಲ್ಲಿರುವ ಜಿಲ್ಲೆಗಳ ಆಯ್ಕೆ ಪಟ್ಟಿ ಡೌನ್ಲೋಡ್ ಮಾಡಿಕೊಳ್ಳಿ.
Download Bangalore Rural List ಬೆಂ ಗ್ರಾಮ
No comments:
Post a Comment
If You Have any Doubts, let me Comment Here