Details of Higher Education Courses for Teachers Children
*ಈ ಕೆಳಕಂಡ ವಿವರದಂತೆ ಅರ್ಜಿಗಳನ್ನು ಸಲ್ಲಿಸುವುದು.*
1. ಸೇವೆಯಲ್ಲಿರುವ ಶಿಕ್ಷಕರು ವೇತನ ಬಟವಾಡೆ ಅಧಿಕಾರಿಗಳು(ಡಿಡಿಒ)/ನಿಯಂತ್ರಣಾಧಿಕಾರಿಗಳ ಸಹಿ ಪಡೆದು ಅರ್ಜಿಗಳನ್ನು ಸಲ್ಲಿಸುವುದು.
(ನಿವೃತ್ತ ಶಿಕ್ಷಕರು ಪತ್ರಾಂಕಿತ(ಗೆಜೆಟೆಡ್) ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸುವುದು).
2. ಅರ್ಜಿಯಲ್ಲಿ ನಮೂದಾಗಿರುವ ಕೋರ್ಸುಗಳಿಗೆ ಮಾತ್ರ ಅರ್ಜಿ ಸಲ್ಲಿಸುವುದು.
3. CA, PHD ಕೋರ್ಸ್‌ಗಳಿಗೆ ಧನಸಹಾಯ ನೀಡಲಾಗುವುದಿಲ್ಲ.
4. ಶಿಕ್ಷಕರು ಕಡ್ಡಾಯವಾಗಿ ಸಹಿ ಮಾಡಿರಬೇಕು.
5. ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಉನ್ನತ ವ್ಯಾಸಂಗ ಧನಸಹಾಯಕ್ಕೆ ಅವಕಾಶ ಇರುವುದಿಲ್ಲ.
6. ನಿವೃತ್ತ ಶಿಕ್ಷಕರಿಗೆ ದೃಢೀಕೃತ ಪಿಂಚಣಿ ಪತ್ರ ಕಡ್ಡಾಯವಾಗಿರುತ್ತದೆ.
7. ಪತಿ/ಪತ್ನಿ ಇಬ್ಬರೂ ಅರ್ಜಿ ಸಲ್ಲಿಸಿದ್ದಲ್ಲಿ ಒಂದು ಅರ್ಜಿಯನ್ನು ಮಾತ್ರ ಪರಿಗಣಿಸಲಾಗುವುದು.
8. ಶಿಕ್ಷಕರ ಮಕ್ಕಳು ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರಬೇಕು.
9. ಅನುತ್ತೀರ್ಣ/ ಸಂಜೆ ಕಾಲೇಜು ವ್ಯಾಸಂಗದ/ ಖಾಸಗಿ/ ಬಾಹ್ಯ/ ಮುಕ್ತ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
10. ದಿನಾಂಕ: 31-12-2024ರ ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
11. ವ್ಯಾಸಂಗ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
12. ರಾಷ್ಟ್ರೀಯ ಬ್ಯಾಂಕುಗಳು ವಿಲೀನಗೊಂಡಿರುವುದರಿಂದ ಪ್ರಸ್ತುತ ಚಾಲ್ತಿಯಲ್ಲಿರುವ(ರಾಷ್ಟ್ರೀಕೃತ) BANK ACCOUNT NUMBER ಮತ್ತು IFSC CODE ಸಂಖ್ಯೆಯನ್ನು ಕಡ್ಡಾಯವಾಗಿ ಸಲ್ಲಿಸುವುದು.
ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಕಛೇರಿಗೆ *ONLINE ಮೂಲಕ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕ.31-12-2024*
ಅಂತಿಮ ದಿನಾಂಕದ ನಂತರ ಯಾವುದೇ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.
ವಿಶೇಷ ಸೂಚನೆ: ಶಿಕ್ಷಕರ ಕಲ್ಯಾಣ ನಿಧಿ ಕಛೇರಿಯ ಎಲ್ಲಾ ಸೌಲಭ್ಯಗಳನ್ನು ONLINE ಮೂಲಕವೇ ಒದಗಿಸಲಾಗುತ್ತಿದೆ, ಈಗಾಗಲೇ ಭೌತಿಕ ಆಜೀವ ಸದಸ್ಯತ್ವ ಕಾರ್ಡ್‌ನ್ನು ಹೊಂದಿರುವವರೂ ಸಹ ಆಜೀವ ಸದಸ್ಯತ್ವ ವಿವರಗಳನ್ನು ಆನ್‌ಲೈನ್‌ನಲ್ಲಿ ನವೀಕರಿಸಿ ಹೊಸ ಸದಸ್ಯತ್ವ ಸಂಖ್ಯೆಯನ್ನು ಪಡೆದ ನಂತರವೇ ಸದರಿ ಧನಸಹಾಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
Place: Karnataka/India
Language: Kannada/English
Department: KSTA
Published Date:23-11-2024
Subject Format :Pdf/JPEG
Subject Size: 2926kb
Pages: 05
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
How download file: click on given link start to download.
Where to click for download: after the given image, below there is a link which was mentioned as "Click to download "
How to find single page information: Click on the image, which was uploaded below the text, then magnifying that images to read, if you need to further use please download it.
☞☞☞☞☞☞
SSP Scholarship ಜಮೆ ಆಗಿದೆಯಾ ಎಂದು ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
No comments:
Post a Comment
If You Have any Doubts, let me Comment Here