KPSC SDA Additional Selection List 2020
2020ನೇ ಸಾಲಿನಲ್ಲಿ ಅಧಿಸೂಚಿಸಲಾಗಿದ್ದ 1122 ಎಸ್‌ಡಿಎ ಹುದ್ದೆಗಳ ನೇಮಕಾತಿ ಸಂಬಂಧ, ಇದೀಗ ಹೆಚ್ಚುವರಿ ಪಟ್ಟಿಯನ್ನು ಇಲಾಖಾವಾರು ಬಿಡುಗಡೆ ಮಾಡಲಾಗಿದೆ. ಚೆಕ್ ಮಾಡಲು ಲಿಂಕ್ ಹಾಗೂ ವಿಧಾನ ಇಲ್ಲಿ ನೀಡಲಾಗಿದೆ.
ದಿನಾಂಕ 29-02-2020 ಹಾಗೂ ಸೇರ್ಪಡೆ ಅಧಿಸೂಚನೆ ಸಂಖ್ಯೆ ಪಿಎಸ್‌ಸಿ/ಇ(3)4(a)2020-21, ದಿನಾಂಕ 14-05-2020 ರಲ್ಲಿ ಅಧಿಸೂಚಿಸಲಾದ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ 1122 ಕಿರಿಯ ಸಹಾಯಕರು / ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಕೆಪಿಎಸ್‌ಸಿ ದಿನಾಂಕ 09-01-2023 ರಂದು ಅಂತಿಮ ಆಯ್ಕೆಪಟ್ಟಿಯನ್ನು ಹಾಗೂ ದಿನಾಂಕ 14-03-2023 ರಂದು ಪರಿಷ್ಕೃತ ಅಂತಿಮ ಆಯ್ಕೆಪಟ್ಟಿಯನ್ನು ಮತ್ತು ದಿನಾಂಕ 05-05-2023ರಂದು ಹೆಚ್ಚುವರಿ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿತ್ತು.
ಪ್ರಸ್ತುತ ಕರ್ನಾಟಕ ನಾಗರೀಕ ಸೇವೆಗಳ (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಗಳು 1978 ಮತ್ತು ತಿದ್ದುಪಡಿ ನಿಯಮಗಳನ್ವಯ ಸದರಿ ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿಗಾಗಿ 16 ಇಲಾಖೆಗಳಿಂದ ಪ್ರಸ್ತಾವನೆ ಸ್ವೀಕೃತವಾಗಿದ್ದು, ನಿಯಮಾನುಸಾರ ಶೇಕಡ.30 ರ ವರ್ಗೀಕರಣಕ್ಕೆ ಸೀಮಿತಗೊಳಿಸಿ, ಪ್ರಸ್ತಾವನೆಗಳು ಸ್ವೀಕೃತವಾದ ಕಾಲಾನುಕ್ರಮದನುಸಾರ 79 ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಸಿದ್ಧಪಡಿಸಿ, ಅಭ್ಯರ್ಥಿಗಳ ಮಾಹಿತಿಗಾಗಿ KPSC ಇದೀಗ ಪ್ರಕಟಿಸಿದೆ.
No comments:
Post a Comment
If You Have any Doubts, let me Comment Here