JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Monday, June 10, 2024

How many Sims Being Used in Your Name

  Jnyanabhandar       Monday, June 10, 2024

How many Sims Being Used Your Name

ಈಗ ತಂತ್ರಜ್ಞಾನ ಯುಗ ಎಲ್ಲರೂ ಫ್ಯಾನ್ಸಿ ಆಗಿ ಕಾಣಲು ಬಯಸುತ್ತಾರೆ. ಏನೇ ಆದರೂ ಡಿಫ್ರೆಂಟ್ ಆಗಿರಬೇಕು ಎಂಬ ಖಯಾಲಿ.. ಜನರು ತಮ್ಮನ್ನು ಬೇರೆಯವರು ಕೆಲ ವಿಚಾರಗಳಲ್ಲಿ ಗುರುತಿಸಲಿ ಎಂದು ಹೊಸ ಹೊಸ ಮೊಬೈಲ್‌ ಚೆಂಜ್ ಮಾಡುವುದು, ಇಷ್ಟೇ ಏಕೆ ತಾವು ಬಳೆಸುವ ಮೊಬೈಲ್‌ ಸಂಖ್ಯೆಯನ್ನು ಪದೇ ಪದೇ ನಂಬರ್‌ ಚೆಂಜ್ ಮಾಡುತ್ತಿರುತ್ತಾರೆ.

ತಾವು ನೆಲದಲ್ಲಿಯೇ ತಿರುಗಾಡಿದರೂ ಸಹ ಸ್ಟಾರ್ ರೀತಿ ಪೋಸ್‌ ಹೊಡೆಯುವುದೇನು ಕಮ್ಮಿ ಇರುವುದಿಲ್ಲ.

ಈಗಂತೂ ನಿಮಗೆ ಬೇಕಾದ ಹಾಗೆ ಸಿಮ್ ನಂಬರ್‌ ಸಿಗುತ್ತದೆ. ಸಾಮಾನ್ಯವಾಗಿ ನಂಬರ್‌ಗಳು ಚೇಂಜ್‌ ಮಾಡಿದ್ದ ತಕ್ಷಣ ನಾವೆಲ್ಲಾ ಆ ಹಳೆಯ ಸಿಮ್ ನಂಬರ್‌ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಒಂದೊಮ್ಮೆ ನೀವು ಬಳಸಿದ ಸಿಮ್, ಈಗ ಬೇರೆ ವ್ಯಕ್ತಿ ಬಳಸುತ್ತಿದ್ದು, ಆತ ಏನಾದ್ರೂ ದುಷ್ಕೃತ್ಯ ಮಾಡಿದರೆ, ಪೊಲೀಸರು ನಿಮ್ಮ ಮನೆಯ ಬಾಗಿಲಿಗೆ ಬಂದಾಗಲೇ ನಿಮಗೆ ನಿಮ್ಮ ತಪ್ಪಿನ ಅರಿವು ಆಗುತ್ತದೆ.

ಆದ್ದರಿಂದ ನೀವು ಹೀಗಾದಂತೆ ಎಚ್ಚರಿಕೆ ವಹಿಸಬಹುದು. ನಿಮ್ಮ ಹೆಸರಿನಲ್ಲಿ (ಆಧಾರ್/ಓಟರ್‌ಐಡಿ) ಎಷ್ಟು ಮೊಬೈಲ್ ಸಿಮ್/ನಂಬರ್‌ ಗಳಿವೆ ಎಂದು ನೀವು ಪರಿಶೀಲಿಸಬಹುದು. ನಿಮಗೆ ಸಂಬಂಧ ಪಡದ, ಇಲ್ಲವೇ ನೀವು ಬಳಕೆ ಮಾಡದ ನಂಬರ್ ಆಕ್ಟಿವ್ ಇದ್ದರೆ ಅದನ್ನು ತಿಳಿಯಲು ಸಹ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ.

ನಿಮ್ಮ ಹೆಸರಿನಲ್ಲಿ ಇತರರು ಮೊಬೈಲ್ ನಂಬರ್ ಬಳಕೆ ಮಾಡುತ್ತಿದ್ದರೆ ಅದನ್ನು ತಿಳಿಯಲು ಕೇಂದ್ರ ಸರ್ಕಾರ (WWW.SANCHARSAATHI.COM) ಹೊಸ ವ್ಯವಸ್ಥೆ ಮೂಲಕ ಅವಕಾಶ ಕಲ್ಪಿಸಿದೆ. ಹಾಗಾದರೆ ನೀವು ಏನು ಮಾಡಬೇಕು ಎಂದು ಈ ಕೆಳಗಿನ ವಿಧಾನಗಳ ಮೂಲಕ ತಿಳಿಯಿರಿ.

ಅನುಸರಿಸಬೇಕಾದ ಕ್ರಮಗಳು



* ಮೊದಲು ನೀವು sancharsaathi.gov.in ವೆಬ್‌ ಪೋರ್ಟಲ್ ಗೆ ಭೇಟಿ ನೀಡಬೇಕು. ಸ್ವಲ್ಪ ಸ್ಕ್ರಾಲ್ ಡೌನ್ ಮಾಡಿದ ನಂತರ ಸಿಗುವ Know your mobile connection ಮೇಲೆ ಕ್ಲಿಕ್ ಮಾಡಬೇಕು.

* ನಂತರ ನಿಮ್ಮ ಹೆಸರಿನಲ್ಲಿ ಇರುವ ಮೊಬೈಲ್ ನಂಬರ್‌ಗಳನ್ನು ನಿಗದಿತ ಸ್ಥಳದಲ್ಲಿ ಹಾಕಬೇಕು. ನಂತರ ಕ್ಯಾಪ್ಚಾ ಹಾಕಿ ಬಳಿಕ ನಿಮ್ಮ ಸಂಖ್ಯೆಗೆ ಬರುವ OTP ಯನ್ನು ನಮೂದಿಸಿ ಲಾಗಿನ್ ಆಗಬೇಕು.



*

ಅಲ್ಲಿ ಕಾಣುವ ಪರದೇ ಮೇಲೆ ನಿಮ್ಮದಲ್ಲದ ಸಂಖ್ಯೆಗಳು ಅಲ್ಲಿ ನಿಮಗೆ ಕಂಡು ಬಂದಲ್ಲಿ ಸರಿಯಾಗಿ ಖಚಿತಪಡಿಸಿಕೊಂಡು ನಿಮ್ಮದಲ್ಲದ ಮೊಬೈಲ್ ಸಂಖ್ಯೆಯ ಮುಂದೆ ಮಾರ್ಕ್ ಮಾಡಬೇಕು.

* ನಂತರ ಅಲ್ಲಿ ಕಾಣುವ Not My Number ಅಥವಾ Not Required ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ರಿಪೋರ್ಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.

* ನೀವು ರಿಪೋರ್ಟ್ ಮಾಡಿದ ನಂತರ ನಿಮಗೆ ಒಂದು ಟ್ರ್ಯಾಕಿಂಗ್ ಐಡಿ ನೀಡಲಾಗುತ್ತದೆ. ಆ ಸಂಖ್ಯೆಯ ಮೂಲಕ ನೀವು ರಿಪೋರ್ಟ್ ಮಾಡಿ ಸ್ಟೇಟಸ್ ಅನ್ನು ಪರಿಶೀಲಿಸಬಹುದಾಗಿದೆ.



ಇನ್ನೂ ರಿಪೋರ್ಟ್ ಮಾಡಲಾದ ಮೊಬೈಲ್ ನಂಬರ್ ಗಳನ್ನು ರಿ-ವೇರಿಫಿಕೇಷನ್ ಮಾಡಬೇಕು. ನಂತರ ದೂರ ಸಂಪರ್ಕ ಇಲಾಖೆಯು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತದೆ.



Click Here To Check

logoblog

Thanks for reading How many Sims Being Used in Your Name

Previous
« Prev Post

No comments:

Post a Comment

If You Have any Doubts, let me Comment Here