Deputy Secretary to Joint Secretary Promotion Order
ಕರ್ನಾಟಕ ಸರ್ಕಾರದ ಸಚಿವಾಲಯದ 10 ಹುದ್ದೆಗಳಲ್ಲಿ ಕೆಲವು ಬದಲಾವಣೆಯಾಗಿದೆ. ಉಪ ಕಾರ್ಯದರ್ಶಿ ವೃಂದದ 10 ಹುದ್ದೆಗಳನ್ನು ಸರ್ಕಾರದ ಜಂಟಿ ಕಾರ್ಯದರ್ಶಿ ಹುದ್ದೆಯಾಗಿ ತಾತ್ಕಾಲಿಕವಾಗಿ ವೇತನ ಶ್ರೇಣಿ ಬದಲಾವಣೆಯೊಂದಿಗೆ ಉನ್ನತೀಕರಿಸಲಾಗುತ್ತದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಕೆ. ವಿ. ಅಶೋಕ, ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-6) ಆದೇಶ ಹೊರಡಿಸಿದ್ದಾರೆ.
ಆದೇಶ ಕರ್ನಾಟಕ ಸರ್ಕಾರ ಸಚಿವಾಲಯದ ಸರ್ಕಾರದ ಉಪ ಕಾರ್ಯದರ್ಶಿ ವೃಂದದಲ್ಲಿ 10 ಹುದ್ದೆಗಳನ್ನು ಸರ್ಕಾರದ ಜಂಟಿ ಕಾರ್ಯದರ್ಶಿ ಹುದ್ದೆಗಳನ್ನಾಗಿ ತಾತ್ಕಾಲಿಕವಾಗಿ ಉನ್ನತೀಕರಿಸುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.
ಪ್ರಸ್ತಾವನೆ, ಆದೇಶ: ದಿನಾಂಕ 26/09/2023ರ ಮನವಿಯಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಕರ್ನಾಟಕ ಸರ್ಕಾರ ಸಚಿವಾಲಯದ ಹಿರಿಯ ಶ್ರೇಣಿ ವೃಂದದ 79 ಉಪಕಾರ್ಯದರ್ಶಿ ಹುದ್ದೆಗಳಲ್ಲಿ 10 ಹುದ್ದೆಗಳನ್ನು ಜಂಟಿ ಕಾರ್ಯದರ್ಶಿ ಹುದ್ದೆಗಳನ್ನಾಗಿ ಹಾಗೂ 5 ಹುದ್ದೆಗಳನ್ನು ಅಪರ ಕಾರ್ಯದರ್ಶಿ ಹುದ್ದೆಗಳನ್ನಾಗಿ ತಾತ್ಕಾಲಿಕವಾಗಿ ಉನ್ನತೀಕರಿಸಿ, ಮುಂಬಡ್ತಿ ನೀಡುವಂತೆ ಕೋರಿರುತ್ತಾರೆ.
ಆರ್ಥಿಕ ಇಲಾಖೆಯ ಟಿಪ್ಪಣಿಯಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯ ಸೇವೆಗೆ ಸೇರಿದ ಉಪ ಕಾರ್ಯದರ್ಶಿ ವೃಂದದ (ವೇತನ ಶ್ರೇಣಿ ರೂ. 74,400- 1,09,600) 10 ಹುದ್ದೆಗಳನ್ನು ತಾತ್ಕಾಲಿಕವಾಗಿ ಜಂಟಿ ಕಾರ್ಯದರ್ಶಿ ವೃಂದಕ್ಕೆ (ವೇತನ ಶ್ರೇಣಿ ರೂ. 90,500-1,23,300) ಉನ್ನತೀಕರಿಸಲು ಹಾಗೂ ಸದರಿ ಹುದ್ದೆಗಳಿಗೆ ಒಂದು ಬಾರಿಯ ಕ್ರಮವಾಗಿ ಮುಂಬಡ್ತಿ ನೀಡಿದ ನಂತರ ಜಂಟಿ ಕಾರ್ಯದರ್ಶಿ ವೃಂದದಲ್ಲಿ ವಿವಿಧ ಕಾರಣಗಳಿಗಾಗಿ ಖಾಲಿಯಾಗುವ ಹುದ್ದೆಗಳು ತಕ್ಷಣದಿಂದಲೇ ಉಪ ಕಾರ್ಯದರ್ಶಿ ವೃಂದದಲ್ಲಿ ಪುನರ್ ಸ್ಥಾಪಿತವಾಗುತ್ತವೆ ಎಂಬ ಷರತ್ತಿನೊಂದಿಗೆ ಆರ್ಥಿಕ ಇಲಾಖೆಯು ಸಹಮತಿಸಿರುತ್ತದೆ.
ಆದ್ದರಿಂದ, ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು ಈ ಆದೇಶ ನೀಡಿದೆ. ಸರ್ಕಾರದ ಆದೇಶ ದಿನಾಂಕ 31/05/2024ರ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ಸಚಿವಾಲಯ ಸೇವೆಗೆ ಸೇರಿದ ಉಪ ಕಾರ್ಯದರ್ಶಿ ವೃಂದದ 10 ಹುದ್ದೆಗಳನ್ನು ಜಂಟಿ ಕಾರ್ಯದರ್ಶಿ ವೃಂದಕ್ಕೆ ತಾತ್ಕಾಲಿಕವಾಗಿ ಉನ್ನತೀಕರಿಸಿ ಆದೇಶಿಸಲಾಗಿದೆ.
ಸದರಿ ಹುದ್ದೆಗಳು ಒಂದು ಬಾರಿಯ ಕ್ರಮವಾಗಿ ತಾತ್ಕಲಿಕವಾಗಿ ಉನ್ನತೀಕರಿಸಲ್ಪಟ್ಟಿದ್ದು, ಸರ್ಕಾರದ ಜಂಟಿ ಕಾರ್ಯದರ್ಶಿ ವೃಂದದಲ್ಲಿ ವಿವಿಧ ಕಾರಣಗಳಿಂದಾಗಿ ಉದ್ಭವವಾಗುವ/ ಖಾಲಿಯಾಗುವ ಹುದ್ದೆಗಳು ತಕ್ಷಣದಿಂದಲೇ ಸರ್ಕಾರದ ಉಪ ಕಾರ್ಯದರ್ಶಿ ವೃಂದದಲ್ಲಿ ಪುನರ್ ಸ್ಥಾಪಿತವಾಗುತ್ತವೆ ಎಂಬ ಷರತ್ತಿಗೊಳಪಟ್ಟಿದೆ.
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ದಿನಾಂಕ 18/04/2024ರಲ್ಲಿ ನೀಡಿರುವ ಸಹಮತಿಯೊಂದಿಗೆ ಹೊರಡಿಸಲಾಗಿದೆ. ಆದೇಶವನ್ನು ಭಾರತ ಚುನಾವಣಾ ಆಯೋಗವು ದಿನಾಂಕ 30/05/2024ರಲ್ಲಿ ನೀಡಿರುವ ಸಹಮತಿಯಂತೆ ಹೊರಡಿಸಲಾಗಿದೆ.
No comments:
Post a Comment
If You Have any Doubts, let me Comment Here