JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Saturday, May 11, 2024

Important History Notes

  Jnyanabhandar       Saturday, May 11, 2024
Important History Notes

✍🏻 ಭಾರತದ ಪ್ರಮುಖ ಶಿಖರಗಳ ಸಂಕ್ಷಿಪ್ತ ಮಾಹಿತಿ ...👇👇


🔸 ಪ್ರಪಂಚದ ಅತ್ಯಂತ ಎತ್ತರವಾದ ಶಿಖರ - ಮೌಂಟ್ ಎವರೆಸ್ಟ್ 

🔸ಭಾರತದ ಅತ್ಯಂತ ಎತ್ತರವಾದ
ಕೆ 2 ( ಮೌಂಟ್ ಗಾಡ್ವಿನ್ ಶಿಖರ)

🔸 ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ
ಮುಳ್ಳಯ್ಯನ ಗಿರಿ .

🔸ನಿಲಿಗಿರಿ ಬೆಟ್ಟಗಳಲ್ಲಿ ಅತ್ಯಂತ ಎತ್ತರವಾದ ಶಿಖರ= ದೊಡ್ಡ ಬೆಟ್ಟ

🔸ಏಷ್ಯಾದ ಅತ್ಯಂತ ದೊಡ್ಡ ಏಕಶಿಲಾ ಬೆಟ್ಟ - ಮಧುಗಿರಿ ಬೆಟ್ಟ

🔸 ದಕ್ಷಿಣ ಭಾರತದ ಅತ್ಯಂತ ಎತ್ತರವಾದ ಶಿಖರ - ಆನೈಮುಡಿ .

🔸ಪೂರ್ವ ಘಟ್ಟಗಳಲ್ಲಿ ನ ಅತ್ಯಂತ ಎತ್ತರವಾದ ಶಿಖರ - ಆರ್ಮಕೊಂಡ್

🔸 ಪಶ್ಚಿಮ ಘಟ್ಟಗಳಲ್ಲಿ ನ ಅತ್ಯಂತ ಎತ್ತರವಾದ ಶಿಖರ - ಆನೈಮುಡಿ 

🔸ಸಾತ್ಪುರ ಪರ್ವತ ಶ್ರೇಣಿಗಳಲ್ಲಿನ ಅತ್ಯಂತ ಎತ್ತರವಾದ ಶಿಖರ- ದುಗ್ಧಗಾರ

🔸ವಿಂಧ್ಯ ಪರ್ವತ ಶ್ರೇಣಿಗಳಲ್ಲಿನ ಅತ್ಯಂತ ಎತ್ತರವಾದ ಶಿಖರ - ಅಮರಕಂಟಕ

🔸ಅರಾವಳಿ ಬೆಟ್ಟಗಳಲ್ಲಿನ ಅತ್ಯಂತ ಎತ್ತರವಾದ ಶಿಖರ - ಗುರು ಶಿಖರ .

🔸 ನಾಗಾ ಬೆಟ್ಟಗಳಲ್ಲಿ ಅತ್ಯಂತ ಎತ್ತರವಾದ ಶಿಖರ - ಸಾರಾಮತಿ ..

🔸ಅಂಡಮಾನ್ ಮತ್ತು ನಿಕೋಬಾರ್ ನಲ್ಲಿನ ಅತ್ಯಂತ ಎತ್ತರವಾದ ಶಿಖರ - ಸ್ಯಾಡುಲ್ ಶಿಖರ

ಷಾಹಿ ಮನೆತನಗಳು ಮತ್ತು ಸ್ಥಾಪಕರು ...

🌖ಬಿಜಾಪುರ ಆದಿಲ ಷಾಹಿ‌ - 
ಯೂಸುಫ್ ಆದಿಲ ಷಾ...

🌖ಬೀದರನ ಬರೀದ ಷಾಹಿ - 
ಖಾಸಿಂ ಬರೀದ...

🌖ಗೋಲ್ಕೊಂಡದ ಕುತುಬ ಷಾಹಿ - 
ಖುಲಿ ಕುತುಬ ಷಾ...

🌖 ಅಹಮದ ನಗರ ನಿಜಾಂ ಷಾಹಿ -
 ಮಲ್ಲಿಕ ಅಹಮದ...

🌖ಬೀರಾರನ ಇಮಾದ ಷಾಹಿ - 
ಇಮಾದ ಉಲ ಮುಲ್ಕ ( ಫತಾ - ಉಲ್ಲಾ ).


📓ಮೊಘಲ್ ಆಳ್ವಿಕೆಯಲ್ಲಿ ನಿರ್ಮಿಸಲಾದ ಸ್ಮಾರಕಗಳು

🏕"ಹುಮಾಯೂನ್ ಸಮಾಧಿ" (ದೆಹಲಿ)
ನಿರ್ಮಿಸಿದ ➛ ಅಕ್ಬರ್
🏕"ಬುಲಂದ್ ದರ್ವಾಜಾ"
(ಫತೇಪುರ್ ಸಿಕ್ರಿ)
ನಿರ್ಮಿಸಿದ ➛ ಅಕ್ಬರ್
🏕"ಶಾಲಿಮಾರ್ ಬಾಗ್" (ಶ್ರೀ ನಗರ)
ನಿರ್ಮಿಸಿದ ➛ ಜಹಾಂಗೀರ್
🏕 "ಅಕ್ಬರನ ಸಮಾಧಿ" (ಸಿಕಂದ್ರ, ಆಗ್ರಾ)
ಕಟ್ಟಿದ್ದು ➛ ಅಕ್ಬರನಿಂದ ಪ್ರಾರಂಭವಾಯಿತು ಮತ್ತು ಜಹಾಂಗೀರ್ ಅವರಿಂದ ಮುಕ್ತಾಯವಾಯಿತು
🏕"ಇತ್ಮದ್-ಉದ್-ದೌಲಾ" ಸಮಾಧಿ (ಆಗ್ರಾ)
➛ ನೂರ್ ಜಹಾನ್ 
🏕"ಜಹಾಂಗೀರ್ ಸಮಾಧಿ" (ಶಹದಾರ ಬಾಗ್, ಲಾಹೋರ್)
ನಿರ್ಮಿಸಿದ ➛ ಷಹಜಹಾನ್
🏕 "ತಾಜ್ ಮಹಲ್" (ಆಗ್ರಾ)
ನಿರ್ಮಿಸಿದ ➛ ಷಹಜಹಾನ್
🏕"ಕೆಂಪು ಕೋಟೆ" (ದೆಹಲಿ)
ನಿರ್ಮಿಸಿದ ➛ ಷಹಜಹಾನ್
🏕"ಶಾಲಿಮಾರ್ ಗಾರ್ಡನ್" (ಲಾಹೋರ್)
ನಿರ್ಮಿಸಿದ ➛ ಷಹಜಹಾನ್
🏕"ಸಲೀಂ ಚಿಸ್ತಿ" ಸಮಾಧಿ (ಫತೇಪುರ್ ಸಿಕ್ರಿ)
ನಿರ್ಮಿಸಿದ ➛ ಅಕ್ಬರ್

💥ಬಿರುದುಗಳು💥
==================================
🗯ತಲಕಾಡುಗೊಂಡ- ವಿಷ್ಣುವರ್ಧನ (ಹೊಯ್ಸಳ)

🗯ವಾತಾಪಿಗೊಂಡ- ಒಂದನೆಯ ನರಸಿಂಹವರ್ಮ (ಪಲ್ಲವ)

🗯ಗಂಗೈಕೊಂಡ - ಒಂದನೆಯ ರಾಜೇಂದ್ರ (ಚೋಳ)

🗯ಮಧುರೈಗೊಂಡ- ಒಂದನೆಯ ಪರಾಂತಕ (ಚೋಳ)

ಆಂಗ್ಲೋ ಮೈಸೂರು ಯುದ್ಧಗಳು
=============================

🌖 ಮೊದಲನೇ ಆಂಗ್ಲೋ ಮೈಸೂರು ಯುದ್ಧ(ಸಾ. ಶ 1767-1769):

☀️ಭಾಗವಹಿಸಿದವರು ಹೈದರಾಲಿ ವಿರುದ್ಧ ಸ್ಮಿತ್
➡️ಒಪ್ಪಂದ- ಮದ್ರಾಸ್ ಒಪ್ಪಂದವಾಯಿತು.
☀️ ಯುದ್ಧಕ್ಕೆ ಕಾರಣಗಳು- ಪ್ರಬಲವಾಗಿ ಬೆಳೆಯುತ್ತಿದ್ದ ಹೈದರನನ್ನು ಮಟ್ಟಹಾಕುವುದು ಬಿಟಿಷರ ಮುಖ್ಯ ಧ್ಯೇಯವಾಗಿತ್ತು.1766ರಲ್ಲಿ ಹೈದರಾಲಿ ಮಲಬಾರ್ ಅನ್ನು ವಶಪಡಿಸಿಕೊಂಡಿದ್ದು ಬ್ರಿಟಿಷರ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು.

===========================

🌖ಎರಡನೇ ಆಂಗ್ಲೋ ಮೈಸೂರು ಯುದ್ಧ (ಸಾ. ಶ 1780-1784):

☀️ಭಾಗವಹಿಸಿದವರು ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ವಿರುದ್ಧ ವಾರನ್ ಹೇಸ್ಟಿಂಗ್ಸ್
☀️ಯುದ್ಧಕ್ಕೆ ಕಾರಣಗಳು - ಮದ್ರಾಸ್ ಒಪ್ಪಂದದಂತೆ ಬ್ರಿಟಿಷರು ಹೈದರಾಲಿಯ ಸಹಾಯಕ್ಕೆ ಬರೆದಿರುವುದು.
➡️ ಒಪ್ಪಂದ- ಮಂಗಳೂರು ಒಪ್ಪಂದ

=============================

🌖ಮೂರನೇ ಆಂಗ್ಲೋ ಮೈಸೂರು ಯುದ್ಧ (ಸಾ. ಶ 1790-1792):

☀️ ಭಾಗವಹಿಸಿದವರು- ಟಿಪ್ಪು ಸುಲ್ತಾನ್ ವಿರುದ್ಧ ಲಾರ್ಡ್ ಕಾರ್ನವಾಲಿಸ್ ಮತ್ತು ಮರಾಠರು, ಹೈದರಾಬಾದಿನ ನಿಜಾಮ
☀️ ಯುದ್ಧಕ್ಕೆ ಕಾರಣಗಳು - ಬ್ರಿಟಿಷರನ್ನು ಶಾಶ್ವತವಾಗಿ ಭಾರತದಿಂದ ಹೊರದೂಡಲು ನಿರ್ಧರಿಸಿದ ಟಿಪ್ಪು ಟರ್ಕಿ, ಫ್ರಾನ್ಸ್,ಅರೇಬಿಯಾ ಆಫ್ಘಾನಿಸ್ತಾನ ಮತ್ತು ರಷ್ಯಾಗಳಿಗೆ  ರಾಯಭಾರಿಗಳನ್ನು ಕಳುಹಿಸಿದನು. ಇದು ಬ್ರಿಟಿಷರ ಕೋಪಕ್ಕೆ ಕಾರಣವಾಯಿತು.
➡️ಒಪ್ಪಂದ- ಶ್ರೀರಂಗಪಟ್ಟಣ ಒಪ್ಪಂದವಾಯಿತು.
☀️ಟಿಪ್ಪು ಈ ಯುದ್ಧದಲ್ಲಿ ಸೋತು ತನ್ನಲ್ಲಿದ್ದ ರಾಜ್ಯದ ಅರ್ಧರಾಜ್ಯವನ್ನು ಬಿಟಿಷರು ಮತ್ತು ಅವರ ಮಿತ್ರರಿಗೆ ಟಿಪ್ಪು ಒಪ್ಪಿಸಿದನು.

============================

🌖ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ (ಸಾ. ಶ 1799):

☀️ ಭಾಗವಹಿಸಿದವರು ಟಿಪ್ಪು ಸುಲ್ತಾನ್ ವಿರುದ್ದ ಲಾರ್ಡ್ ವೆಲ್ಲೆಸ್ಲಿ
☀️ಯುದ್ಧಕ್ಕೆ ಕಾರಣಗಳು - ಮೂರನೇ ಆಂಗ್ಲೋ ಮೈಸೂರು ಯುದ್ಧದ ಸೋಲು ಶ್ರೀರಂಗಪಟ್ಟಣದ ಒಪ್ಪಂದವು ಟಿಪ್ಪುವಿಗೆ ಬ್ರಿಟಿಷರ ಬಗ್ಗೆ ಸೇಡಿನ ಭಾವನೆ ಮೂಡಿಸಿತು ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಮತ್ತೊಂದು ಯುದ್ಧಕ್ಕೆ  ಸಿದ್ಧತೆ ನಡೆಸಿದನು.
☀️ ಇದರಲ್ಲಿ ಟಿಪ್ಪುವಿಗೆ ಸೋಲುಂಟಾಯಿತು
💥 ಟಿಪ್ಪುವಿನ ಸಮಾಧಿ ಇರುವ ಸ್ಥಳ - ಶ್ರೀರಂಗಪಟ್ಟಣ

🌖ಮೊದಲನೇ ಕರ್ನಾಟಿಕ್ ಯುದ್ಧ(ಸಾ. ಶ 1746-1748):

☀️ಬ್ರಿಟಿಷರ ಪರವಾಗಿ ಭಾಗವಹಿಸಿದವರು - ಬಾರ್ನೆಟ್, ಅನ್ವರುದ್ದೀನ್
☀️ ಫ್ರೆಂಚರ ಪರವಾಗಿ ಭಾಗವಹಿಸಿದವರು - ಡೂಪ್ಲೇ
☀️ ಆಸ್ಟ್ರಿಯಾದ ದೇಶದಕ್ಕಾಗಿ ಯುರೋಪಿನಲ್ಲಿ ಫ್ರಾನ್ಸ್ ಮತ್ತು ಇಂಗ್ಲೆಂಡ್ ನಡುವೆ ನಡೆದ ಯುದ್ಧ ಇದು ಭಾರತದ ಮೇಲೆ ಪ್ರಭಾವ ಬೀರಿತು.
➡️ಒಪ್ಪಂದ - ಎಕ್ಸ್ ಲಾ ಚಾಪೆಲ್
••••••••••••••••••••••••••••••••••••••••••••

🌖ಎರಡನೇ ಕರ್ನಾಟಿಕ್ ಯುದ್ಧ(ಸಾ. ಶ 1749-1754):

☀️ ಬ್ರಿಟಿಷರ ಪರವಾಗಿ ಭಾಗವಹಿಸಿದವರು - ರಾಬರ್ಟ್ ಕ್ಲೈವ್, ನಾಸಿರ್ ಜಂಗ್, ಅನ್ವರುದ್ದೀನ್, ಮಹಮ್ಮದ್ ಅಲಿ
☀️ಫ್ರೆಂಚರ ಪರವಾಗಿ ಭಾಗವಹಿಸಿದವರು - ಡೂಪ್ಲೆ, ಮುಜಾಫರ್ ಜಂಗ್, ಚಂದಾ ಸಾಹೇಬ್
☀️ಯುದ್ಧಕ್ಕೆ ಕಾರಣ - ಆರ್ಕಾಟ ನಿಜಾಮ ಮತ್ತು ಹೈದರಾಬಾದ್ ನವಾಬನ ಹುದ್ದೆಗಾಗಿ ನಡೆಯುತ್ತಿದ್ದ ಆಂತರಿಕ ದಂಗೆಗಳು
➡️ಒಪ್ಪಂದ- ಪಾಂಡಿಚೇರಿ ಒಪ್ಪಂದ
•••••••••••••••••••••••••••••••••••••••••••

🌖ಮೂರನೇ ಕರ್ನಾಟಕ ಯುದ್ಧ (ಸಾ. ಶ 1758-1763)

☀️ಬ್ರಿಟಿಷ್ ಪರವಾಗಿ ಭಾಗವಹಿಸಿದವರು - ರಾಬರ್ಟ್ ಕ್ಲೈವ್, ಸರ್ ಐರ್ ಕೂಟ್, ಮಹಮ್ಮದ್ ಆಲಿ
☀️ ಫ್ರೆಂಚರ ಪರವಾಗಿ ಭಾಗವಹಿಸಿದವರು - ಕೌಂಟ್ ಡಿಲಾಲಿ, ಬುಸ್ಸಿ  
☀️ ಯುದ್ಧಕ್ಕೆ ಕಾರಣ- ಯುರೋಪಿನಲ್ಲಾದ ಸಪ್ತವಾರ್ಷಿಕ ಯುದ್ಧ.
➡️ ಒಪ್ಪಂದ- ಪ್ಯಾರಿಸ್ ಒಪ್ಪಂದ
☀️ಇದನ್ನು ವಾಂಡಿವಾಷ್ ಕದನ ಎನ್ನುವರು.
logoblog

Thanks for reading Important History Notes

Previous
« Prev Post

No comments:

Post a Comment

If You Have any Doubts, let me Comment Here