Life insurance policies are about increasing the term supply period
7ನೇ ವೇತನ ಆಯೋಗದ ಜಾರಿ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆ ಖುಷಿ ಸುದ್ದಿಯನ್ನು ನೀಡಿದೆ. ನೌಕರರ ಜೀವ ವಿಮಾ ಪಾಲಿಸಿಗಳ ಅವಧಿ ಪೂರೈಕೆ ಅವಧಿಯನ್ನು ಹೆಚ್ಚಿಸುವ ಬಗ್ಗೆ ಆರ್ಥಿಕ ಇಲಾಖೆಗೆ ಮಾಹಿತಿ ಸಲ್ಲಿಸಿದೆ.
ರಾಜ್ಯ ಸರ್ಕಾರಿ ನೌಕರರ ಹಿತದೃಷ್ಟಿಯಿಂದ ವಿಮಾ ಸೌಲಭ್ಯವನ್ನು 45 ವರ್ಷಗಳಿಂದ 60 ವರ್ಷಗಳವರೆಗೆ ಹೆಚ್ಚಿಸುವಂತೆ ತಿಳಿಸಿದೆ. ಇದಕ್ಕೆ ಕೆಲವೊಂದು ಷರತ್ತುಗಳನ್ನು ಹಾಕಿದ್ದು, ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದೆ. ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯು ಆರ್ಥಿಕ ಇಲಾಖೆಗೆ ಕಳಿಸಿರುವ ಸುತ್ತೊಲೆಯಲ್ಲಿ ಇರುವುದು ಏನು, ವಿಮೆ ಅವಧಿ ಹೆಚ್ಚಿಸಲು ಇರುವ ಷರತ್ತುಗಳೇನು ಎಂಬುದು ಇಲ್ಲಿದೆ.
"ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ವಿಮಾ ಇಲಾಖೆಯು ಜೀವ ವಿಮೆ ಸೌಲಭ್ಯವನ್ನು ಸಾರ್ವಜನಿಕರಿಗೆ ಮತ್ತು ಸರ್ಕಾರಿ ನೌಕರರಿಗೆ 21-07-1891 ರಿಂದ ಒದಗಿಸುತ್ತಾ ಬಂದಿರುತ್ತದೆ. ತದ ನಂತರ 1959 ರಲ್ಲಿ ಸಾರ್ವಜನಿಕರಿಗೆ ನೀಡುತ್ತಿದ್ದ ವಿಮಾ ಸೌಲಭ್ಯವನ್ನು ರದ್ದುಪಡಿಸಿ ಸರ್ಕಾರಿ ನೌಕರರಿಗೆ ನೀಡುತ್ತಿದ್ದ ವಿಮಾ ಸೌಲಭ್ಯವನ್ನು ಮುಂದುವರಿಸಲಾಯಿತು. ಅಂದಿನಿಂದ ಈವರೆಗೆ ಸುಮಾರು 60 ವರ್ಷಗಳಿಂದ ಸರ್ಕಾರಿ ನೌಕರರಿಗೆ ವಿಮಾ ಸೌಲಭ್ಯವನ್ನು 55 ವರ್ಷ ವಯಸ್ಸಿನ ವರೆಗೆ ಮಾತ್ರ ನೀಡಲಾಗುತ್ತಿದೆ".
ರಾಜ್ಯ ಸರ್ಕಾರವು 1984 ರಲ್ಲಿ ಉಲ್ಲೇಖ (2) ರ ಅನ್ವಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ವರ್ಷಗಳಿಗೆ ಹೆಚ್ಚಿಸಲಾಯಿತು. 2008 ರಲ್ಲಿ ಉಲ್ಲೇಖ 3ರ ಪ್ರಕಾರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷಗಳಿಗೆ ಹೆಚ್ಚಿಸಲಾಯಿತು. ಆದರೆ ನಿವೃತ್ತಿ ವಯಸ್ಸನ್ನು ಸರ್ಕಾರ 55 ವರ್ಷಗಳಿಂದ 60 ವರ್ಷಗಳಿಗೆ ಹೆಚ್ಚಿಸಿದರೂ ಕೂಡ ಇಲಾಖೆಯು ವಿಮಾ ಸೌಲಭ್ಯವನ್ನು ಸರ್ಕಾರಿ ನೌಕರರ ವಯಸ್ಸು 55 ವರ್ಷಗಳವರೆಗೆ ಮಾತ್ರ ನೀಡಲಾಗುತ್ತಿದೆ. ಇದರಿಂದ 55 ವರ್ಷದಿಂದ 60 ವರ್ಷದ ವರೆಗೆ ಅಂದರೆ 5 ವರ್ಷಗಳ ಅವಧಿಗೆ ವಿಮಾ ಸೌಲಭ್ಯದಿಂದ ಸರ್ಕಾರಿ ನೌಕರರು ವಂಚಿತರಾಗಿದ್ದಾರೆ.
ಈ 5 ವರ್ಷಗಳ ಅವಧಿಯಲ್ಲಿ ಸರ್ಕಾರಿ ನೌಕರರು ಅಕಾಲಿಕ ಮರಣ ಹೊಂದಿದರೆ ಅವರ ಅವಲಂಬಿತ ಕುಟುಂಬಕ್ಕೆ ದೊರೆಯುತ್ತಿದ್ದ ಆರ್ಥಿಕ ಭದ್ರತೆಯಿಂದ ವಂಚಿತರಾಗುತ್ತಿದ್ದಾರೆ. ಆದಕಾರಣ ಸರ್ಕಾರಿ ನೌಕರರ ಹಿತದೃಷ್ಟಿಯಿಂದ ವಿಮಾ ಸೌಲಭ್ಯವನ್ನು 45 ವರ್ಷಗಳಿಂದ 60 ವರ್ಷಗಳವರೆಗೆ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಸೂಕ್ತ ಆದೇಶ ಹೊರಡಿಸಲು ಕೋರಲಾಗಿದೆ.
1. ಚಾಲ್ತಿಯಲ್ಲಿರುವ ಪಾಲಿಸಿಗಳ ಅವಧಿಯನ್ನು ವಿಸ್ತರಿಸುವ ಪೂರ್ವದಲ್ಲಿ ವಿಮಾದಾರರ ಲಿಖಿತ ಒಪ್ಪಿಗೆ ಪಡೆದು ವಿಸ್ತರಿಸುವುದು.
2. ಚಾಲ್ತಿಯಲ್ಲಿರುವ ಪಾಲಿಸಿಗಳಿಗೆ ಪಾವತಿಸುತ್ತಿರುವ ಪ್ರಸ್ತುತ ವಿಮಾ ಕಂತಿನ ದರದಲ್ಲೇ 60 ವರ್ಷದ ವರೆಗೂ ಪಾವತಿ ಮಾಡುವುದು. ಆದರೆ, ವಿಮೆ ಮೊತ್ತವನ್ನು ಹೆಚ್ಚಿಸಲಾಗುವುದು. ವಿಮಾ ಕಂತಿನ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
3. ಇನ್ನು ಮುಂದೆ ನೀಡುವ ಹೊಸ ಪಾಲಿಸಿಗಳನ್ನು ವಿಮಾದಾರರ 60 ವರ್ಷ ವಯಸ್ಸಿನವರೆಗೂ ನೀಡುವುದು.
4 ಹೆಚ್ಚಿಸಿದ ವಿಮಾ ಮೊತ್ತಕ್ಕೆ ಲಾಭಾಂಶವನ್ನು ಉತ್ತರಾನ್ವಯವಾಗಿ ನೀಡಲಾಗುವುದು. ಪೂರ್ವಾನ್ವಯವಾಗಿ ನೀಡಲಾಗುವುದಿಲ್ಲ.
ಈ ಎಲ್ಲಾ ಷರತ್ತುಗಳ ಜೊತೆಗೆ ವಿಮಾ ಸೌಲಭ್ಯವನ್ನು 45 ವರ್ಷಗಳಿಂದ 60 ವರ್ಷಗಳವರೆಗೆ ಹೆಚ್ಚಿಸಬೇಕು ಎಂದು ಸರ್ಕಾರಿ ಸರ್ಕಾರಿ ವಿಮಾ ಇಲಾಖೆಯು ಮನವಿ ಮಾಡಿದೆ.
No comments:
Post a Comment
If You Have any Doubts, let me Comment Here