Guidelines for Conducting Assessment Work for Class 5, 8 and 9 Students in 2023-24
2023-24 ನೇ ಸಾಲಿನಲ್ಲಿ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಕಾರ್ಯ ನಡೆಸಲು ಶಾಲಾ ಶಿಕ್ಷಣ ಇಲಾಖೆಯು ಇದೀಗ ಮಾರ್ಗಸೂಚಿ ಪ್ರಕಟಿಸಿದೆ.
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ (Summative Assessment-(SA-2) ಕಾರ್ಯವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಕೆ.ಎಸ್.ಕ್ಯು.ಎ.ಎ.ಸಿ ವತಿಯಿಂದ ದಿನಾಂಕ: 11.03.2024 ರಿಂದ 18.03.2024 ರವರೆಗೆ ನಡೆಸಲಾಗುತ್ತಿದೆ.
ಈ ಮೌಲ್ಯಾಂಕನಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕಾಗಿರುವುದು ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು/ಸಿಬ್ಬಂದಿ ವರ್ಗದವರ ಪ್ರಮುಖ ಜವಾಬ್ದಾರಿಯಾಗಿರುತ್ತದೆ.
ವ್ಯಾಪ್ತಿ:-
ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5. 8 ಮತ್ತು 9ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ನಡೆಸಲಾಗುವುದು. 5 ನೇ ತರಗತಿ ವಿದ್ಯಾರ್ಥಿಗಳಿಗೆ 4 ವಿಷಯಗಳಿಗೆ. 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ 6 ವಿಷಯಗಳಿಗೆ ವಿಷಯವಾರು ಪ್ರಶ್ನೆಪತ್ರಿಕೆಗಳನ್ನು ನೀಡುವ ಮೂಲಕ ಮೌಲ್ಯಾಂಕನ ನಡೆಸಲಾಗುವುದು.
5 ನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆ – 9.30.715
8 ನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆ - 9,35,076
9ನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆ- 9,48,313
ಒಟ್ಟು ವಿದ್ಯಾರ್ಥಿಗಳ ಸಂಖ್ಯೆ – 28,14,104
ಒಟ್ಟು ಶಾಲೆಗಳ ಸಂಖ್ಯೆ:- 69137
(ದತ್ತಾಂಶದ ಮಾಹಿತಿಯನ್ನು ಎಸ್.ಎ.ಟಿ.ಎಸ್. ನಿಂದ ಪಡೆಯಲಾಗಿರುತ್ತದೆ.)
ಮಾಧ್ಯಮ:-
ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತಮಿಳು, ತೆಲುಗು.
ವಿಷಯ
5ನೇ ತರಗತಿಗೆ:- ಪ್ರಥಮ ಭಾಷೆ, ದ್ವಿತೀಯ ಭಾಷೆ, ಗಣಿತ ಮತ್ತು ಪರಿಸರ ಅಧ್ಯಯನ.
ಪ್ರಥಮ ಭಾಷೆ:- ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತಮಿಳು, ತೆಲಗು,
ದ್ವಿತೀಯ ಭಾಷೆ:- ಕನ್ನಡ, ಇಂಗ್ಲಿಷ್ ಮತ್ತು ಇಂಗ್ಲಿಷ್ (Bilingual)
ಕೋರ್ ವಿಷಯ:- ಗಣಿತ, ಪರಿಸರ ಅಧ್ಯಯನ ಮತ್ತು ಗಣಿತ(Bilingual)
8 ಮತ್ತು 9ನೇ ತರಗತಿಗೆ:- ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ.
ಪ್ರಥಮ ಭಾಷೆ:- ಕನ್ನಡ, ಇಂಗ್ಲಿಷ್, ಇಂಗ್ಲಿಷ್ (NCERT), ಹಿಂದಿ, ಉರ್ದು, ಮರಾಠಿ, ತಮಿಳು, ತೆಲಗು, ಸಂಸ್ಕೃತ,
ದ್ವಿತೀಯ ಭಾಷೆ:- ಕನ್ನಡ ಮತ್ತು ಇಂಗ್ಲಿಷ್
ತೃತೀಯ ಭಾಷೆ:- ಕನ್ನಡ, ಇಂಗ್ಲಿಷ್, ಹಿಂದಿ, ಹಿಂದಿ(NCERT), ಉರ್ದು, ಸಂಸ್ಕೃತ, ಕೊಂಕಣಿ(ಕನ್ನಡ ಮತ್ತು ದೇವನಾಗರಿ), ತುಳು, ಪರ್ಷಿಯನ್, ಅರೇಬಿಕ್. 94 33 NSQF : Automobile, Beauty & Wellness, Information Technology, Retail, Apparel made-ups & Home furnishing, Electronics and hardware.
ಕೋರ್ ವಿಷಯ:- ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ
No comments:
Post a Comment
If You Have any Doubts, let me Comment Here