GPSTR Teachers Counseling Oder
2022-23ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಆಯ್ಕೆಯಾದ ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8 ನೇ ತರಗತಿ) ಹುದ್ದೆಗೆ ಉಪನಿರ್ದೇಶಕರ ಕಛೇರಿಯಲ್ಲಿ ತಾತ್ಕಾಲಿವಾಗಿ ಕರ್ತವ್ಯಕ್ಕೆ ಹಾಜರಾಗಿರುವ ಶಿಕ್ಷಕರಿಗೆ ಶಾಲೆಗಳಲ್ಲಿನ ಸಿ ವಲಯ ಖಾಲಿ ಹುದ್ದೆಗಳಿಗೆ ಕೌನ್ಸಿಲಿಂಗ್ ಮೂಲಕ ಸ್ಥಳ ಹಂಚಿಕೆ ಮಾಡುವ ಕುರಿತು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
2022-23 ನೇ ಸಾಲಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ ಖಾಲಿ ಹುದ್ದೆಗಳಿಗೆ ಆಯ್ಕೆಯಾದ ಅರ್ಹ ಪದವೀಧರ ಪ್ರಾಥಮಿಕ ಶಿಕ್ಷಕರು ( 6 ರಿಂದ 8 ನೇ ತರಗತಿ) ಹುದ್ದೆಗೆ ಕೌನ್ಸಿಲಿಂಗ್ ಮೂಲಕ ಸ್ಥಳ ಹಂಚಿಕೆ ಪ್ರಕ್ರಿಯೆ ಕೈಗೊಳ್ಳಲಾಗಿತ್ತು.ಕೆಲವೊಂದು ಜಿಲ್ಲೆಗಳಲ್ಲಿ ಸಿ ವಲಯದ ಖಾಲಿ ಹುದ್ದೆಗಳು ಲಭ್ಯವಿಲ್ಲದ ಪ್ರಯುಕ್ತ ಅಂತಹ ಶಿಕ್ಷಕರುಗಳಿಗೆ ಆಯಾ ವ್ಯಾಪ್ತಿಯ ಉಪನಿರ್ದೇಶಕರು(ಆಡಳಿತ) ಕಛೇರಿಯಲ್ಲಿ ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು.
ತದನಂತರ ಉಲ್ಲೇಖ 13 ರಂತೆ ಉಪನಿರ್ದೇಶಕರ ಕಛೇರಿಯನ್ನು ಆಯ್ಕೆ ಮಾಡಿಕೊಂಡಿರುವ ಶಿಕ್ಷಕರು ಸೇವೆಯನ್ನು ಶಾಲೆಗಳಲ್ಲಿ ಬಳಸಿಕೊಳ್ಳುವ ದೃಷ್ಟಿಯಿಂದ ಅಗತ್ಯತೆಗನುಸಾರ ನಿಯೋಜಿಸಿ ಕ್ರಮವಹಿಸಲು ಸಂಬಂಧಪಟ್ಟ ಜಿಲ್ಲೆಯ ಉಪನಿರ್ದೇಶಕರು (ಆಡಳಿತ) ಇವರಿಗೆ ಸೂಚಿಸಲಾಗಿತ್ತು.
ಶಾಲೆಗಳಿಗೆ ನಿಯೋಜಿಸ್ಪಟ್ಟಿರುವ ಶಿಕ್ಷಕರುಗಳಿಗೆ ವೇತನ ಮತ್ತು ಇತರ ಸೇವಾ ಸೌಲಭ್ಯಗಳನ್ನು ನೀಡುವ ಸಂಬಂಧ ಜಿಲ್ಲಾವ್ಯಾಪ್ತಿಯ ಸಿ ವಲಯದ ಶಾಲೆಗಳಲ್ಲಿನ ಲಭ್ಯ ಖಾಲಿ ಹುದ್ದೆಗಳಿಗೆ ಕೌನ್ಸಿಲಿಂಗ್ ಮೂಲಕ ಸ್ಥಳ ಆಯ್ಕೆಗೆ ದಿನಾಂಕ : 07.03-2024 ರಂದು ಪೂರ್ವಾಹ್ನ 11.30 ಗಂಟೆಗೆ ಜಿಲ್ಲಾವಾರು ನಡೆಯುವ ಸ್ಥಳ ಆಯ್ಕೆಗೆ ಆಯಾ ಉಪನಿರ್ದೇಶಕರ ಕಛೇರಿಯಿಂದ ಈ ಹಿಂದಿನ ದಿನಾಂಕಗಳಲ್ಲಿ ಹಮ್ಮಿಕೊಂಡಿದ್ದ ಕೌನ್ಸಿಲಿಂಗ್‌ನ ಪೂರ್ವ ತಯಾರಿಗೆ ಸಂಬಂಧಪಟ್ಟಂತೆ ಉಲ್ಲೇಖ 10 ರಲ್ಲಿನ ಜ್ಞಾಪನದಲ್ಲಿ ನೀಡಲಾದ ವಿಸ್ತ್ರತ ಸೂಚನೆಗಳಂತೆಯೇ ಅಗತ್ಯ ಕ್ರಮಗಳನ್ನು ಮತ್ತು ತಾಂತ್ರಿಕ ವ್ಯವಸ್ಥೆಯನ್ನು ಯಾವುದೇ ಲೋಪವಿಲ್ಲದಂತೆ ಕೈಗೊಂಡು ಯಶಸ್ವಿಯಾಗಿ ಪೂರೈಸತಕ್ಕದ್ದು.
ಉಪನಿರ್ದೇಶಕರ ಕಛೇರಿಗೆ ತಾತ್ಕಾಲಿಕವಾಗಿ ಸ್ಥಳ ಆಯ್ಕೆ ಮಾಡಿಕೊಂಡಿರುವ ಎಲ್ಲಾ ಶಿಕ್ಷಕರುಗಳು ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳತಕ್ಕದ್ದು. ಈ ವಿಷಯವನ್ನು ಉಪನಿರ್ದೇಶಕರ ಕಛೇರಿಗೆ ತಾತ್ಕಾಲಿಕವಾಗಿ ಸ್ಥಳ ಹಂಚಿಕೆ ಪಡೆದು ಕರ್ತವ್ಯಕ್ಕೆ ಹಾಜರಾಗಿರುವ ಎಲ್ಲಾ ಶಿಕ್ಷಕರುಗಳಿಗೆ ಉಪನಿರ್ದೇಶಕರು ದಿನಾಂಕ 06.03.2024 ರಂದು ಲಿಖಿತವಾಗಿ ಸೂಕ್ತ ಸೂಚನೆಯನ್ನು ಜಾರಿ ಮಾಡಿ ಸ್ವೀಕೃತಿ ಪಡೆದುಕೊಳ್ಳುವುದು.
ಉಲ್ಲೇಖ 14 ರಂತೆ ಭಾರತ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ವಿಶೇಷ ಅನುಮತಿ ಅರ್ಜಿ ಸಂಖ್ಯೆ 27984-388/2023 ಪ್ರಕರಣದಲ್ಲಿನ ಮಧ್ಯಂತರ ಆದೇಶ ದಿನಾಂಕ 3 .01.2024 & 22.01.2024 ಪ್ರಕಾರ ಈಗಾಗಲೇ ನೇಮಕಾತಿ ಆದೇಶ ಪಡೆದು ನೇಮಕಗೊಂಡಿರುವ 11494 ಅಭ್ಯರ್ಥಿಗಳಿಗೆ ತಮ್ಮ ನೇಮಕಾತಿಯು ಸದರಿ ವಿಶೇಷ ಅನುಮತಿ ಅರ್ಜಿಯಲ್ಲಿ ಅಂತಿಮ ತೀರ್ಪಿಗೆ ಒಳಪಟ್ಟಿರುವ ವಿಷಯವನ್ನು ನೇಮಕಾತಿ ಪ್ರಾಧಿಕಾರಿಗಳಾದ ಜಿಲ್ಲಾ ಉಪನಿರ್ದೇಶಕರ ಪ್ರತಿ ಅಭ್ಯರ್ಥಿಗೆ ಲಿಖಿತವಾಗಿ ತಿಳಿಸಿ ಸ್ವೀಕೃತಿ ಪಡೆದಿರುವುದನ್ನು ಪುನರ್ ಉಚ್ಚರಿಸಿದೆ.
ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತ್ತು ನೇಮಕಾತಿ ಆದೇಶಗಳನ್ನು ನೀಡದಿರುವ ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ತೀವ್ರ ಎಚ್ಚರಿಕೆ ವಹಿಸಲು ನೇಮಕಾತಿ ಪ್ರಾಧಿಕಾರಿಗಳಿಗೆ ಸೂಚಿಸಿದೆ.
ನೇಮಕಾತಿ ಪ್ರಾಧಿಕಾರಿಯವರಾದ ಆಯಾ ಉಪನಿರ್ದೇಶಕರೇ ಇಡೀ ಕೌನ್ಸಿಲಿಂಗ್ ಪ್ರಕ್ರಿಯೆಗೆ ಮತ್ತು ತತ್ಪರಿಣಾಮಗಳಿಗೆ ಪೂರ್ಣ ಜವಾಬ್ದಾರರಾಗಿದ್ದು, ಅತ್ಯಂತ ಜಾಗರುಕತೆಯಿಂದ ಮತ್ತು ಪಾರದರ್ಶಕವಾಗಿ ಗೊಂದಲಗಳಿಗೆ ಅವಕಾಶ ನೀಡದಂತೆ ಕ್ರಮವಹಿಸಲು ಮತ್ತೊಮ್ಮೆ ಕಟ್ಟುನಿಟ್ಟಾಗಿ ಸೂಚಿಸಿದೆ.
No comments:
Post a Comment
If You Have any Doubts, let me Comment Here