All Agency Banks to remain open for public on March 31, 2024 (Sunday)
ಮಾರ್ಚ್ 31ರ ಭಾನುವಾರದಂದು ಬ್ಯಾಂಕ್'ನ್ನ ತೆರೆದಿಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿರ್ಧರಿಸಿದೆ.
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಟ್ವೀಟ್ ಮೂಲಕ ಆರ್ಬಿಐ ಈ ನಿರ್ಧಾರದ ಬಗ್ಗೆ ಮಾಹಿತಿ ನೀಡಿದೆ. ಮಾರ್ಚ್ 31, 2024 ಭಾನುವಾರವಾಗಿದ್ದರೂ, ಎಲ್ಲಾ ಬ್ಯಾಂಕುಗಳು ತೆರೆದಿರುತ್ತವೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.
ಪ್ರಸಕ್ತ ಹಣಕಾಸು ವರ್ಷದ 2023-24ರ ಕೊನೆಯ ದಿನವಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಎಲ್ಲಾ ಆದಾಯ ತೆರಿಗೆ ಕಚೇರಿಗಳು ತೆರೆದಿರುತ್ತವೆ.!
ಈ ಹಿಂದೆ, ಆದಾಯ ತೆರಿಗೆ ಇಲಾಖೆ ತನ್ನ ಎಲ್ಲಾ ಕಚೇರಿಗಳನ್ನ ತೆರೆದಿಡಲು ನಿರ್ಧರಿಸಿತ್ತು. ಗುಡ್ ಫ್ರೈಡೆ ರಜೆ ಸೇರಿದಂತೆ ಶನಿವಾರ ಮತ್ತು ಭಾನುವಾರ ರಜಾದಿನಗಳನ್ನ ಇಲಾಖೆ ರದ್ದುಗೊಳಿಸಿತ್ತು.
No comments:
Post a Comment
If You Have any Doubts, let me Comment Here