Regarding revision of Charge Allowance rates currently in force in the State
ರಾಜ್ಯದ ನೌಕರರಿಗೆ ಸರ್ಕಾರವು ಸಿಹಿ ಸುದ್ದಿಯನ್ನು ನೀಡಿದೆ. ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಪ್ರಭಾರ ಭತ್ಯ ದರವನ್ನು ಪರಿಷ್ಕರಿಸುವ ಕುರಿತು ರಾಜ್ಯ ಸರ್ಕಾರವು ಆದೇಶವನ್ನು ಹೊರಡಿಸಿದೆ. ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 32 ಮತ್ತು 68 ರಡಿಯಲ್ಲಿ ಸರ್ಕಾರಿ ನೌಕರರನ್ನು ಸ್ವತಂತ್ರ ಪುಭಾರದಲ್ಲಾಗಲೀ ಅಥವಾ ತಮ್ಮ ಹುದ್ದೆಯ ಕರ್ತವ್ಯದ ಜೊತೆ ಬೇರೊಂದು ಹುದ್ದೆಯ ಹೆಚ್ಚಿನ ಪ್ರಭಾರದಲ್ಲಿರಿಸಿದಾಗ ಆ ಹುದ್ದೆಯ ವೇತನ ಶ್ರೇಣಿಯ ಕನಿಷ್ಟ ಹಂತದಲ್ಲಿ ಮೂರು ತಿಂಗಳವರೆಗೆ ಶೇಕಡ 7.5 ದರದಲ್ಲಿ, ಆ ನಂತರದ ಮೂರು ತಿಂಗಳಿಗಿಂತ ಹೆಚ್ಚಿನ ಅವಧಿಗೆ ಶೇಕಡ 15 ರ ದರದಲ್ಲಿ ಪ್ರಭಾರ ಭತ್ಯೆಯನ್ನು ನಿಗಧಿಪಡಿಸಿ ಆದೇಶಿಸಲಾಗಿತ್ತು.
ಪ್ರಸ್ತುತ, ಸರ್ಕಾರದ ಇಲಾಖೆಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು, ಸುಗಮ ಆಡಳಿತಕ್ಕಾಗಿ ಹಲವಾರು ಸಿಬ್ಬಂದಿಗಳನ್ನು ಒಂದಕ್ಕಿಂತ ಹೆಚ್ಚಿನ ಹುದ್ದೆಗಳಲ್ಲಿ ಅಧಿಕ ಪುಭಾರ ಸಮವರ್ತಿ ಪುಭಾರದಲ್ಲಿರಿಸಲಾಗಿದೆ. ಸದರಿ ಅಧಿಕಾರಿಗಳು ಹೆಚ್ಚಿನ ಕಾರ್ಯಭಾರದ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಈ ಅಧಿಕಾರಿ/ನೌಕರರುಗಳಿಗೆ ಪುಭಾರ ಭತ್ಯೆ ಮಂಜೂರು ಮಾಡಲು ಹಾಲಿ ಅನುಸರಿಸುತ್ತಿರುವ ಕಾರ್ಯವಿಧಾನದ ಜಟಿಲತೆಯಿಂದಾಗಿ ಹಲವು ಸಂದರ್ಭಗಳಲ್ಲಿ ಪ್ರಭಾರ ಭತ್ಯೆ ಪಡೆಯುವುದು ಬಹಳ ಕಷ್ಟಕರವಾಗುತ್ತಿದೆ. ಈ ಕಾರ್ಯವಿಧಾನವನ್ನು ಸರಳಗೊಳಿಸುವ ನಿಟ್ಟಿನಲ್ಲಿ ಪುಸ್ತುತ ಎರಡು ಹಂತದಲ್ಲಿ ನೀಡುತ್ತಿರುವ ಪ್ರಭಾರ ಭತ್ಯೆಯನ್ನು ವಿಲೀನಗೊಳಿಸಿ ಒಂದೇ ಹಂತದಲ್ಲಿ ನೀಡುವ ಬಗ್ಗೆ ಸ್ವೀಕೃತವಾದ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ. ಸರ್ಕಾರಿ ಆದೇಶ ಸಂಖ್ಯೆ: ಎಫ್ ಡಿ 14 (ಇ) ಎಸ್ ಆರ್ ಎಸ್ 2022, ಬೆಂಗಳೂರು, BDO:23.09.2022 ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 32 ಮತ್ತು 18 ರಡಿಯಲ್ಲಿ ಸರ್ಕಾರಿ ಅಧಿಕಾರಿ/ನೌಕರರನ್ನು ಸ್ವತಂತ್ರ ಪ್ರಭಾರದಲ್ಲಿ ಅಥವಾ ತಮ್ಮ ಹುದ್ದೆಯ ಕರ್ತವ್ಯದ ಜೊತೆ ಬೇರೊಂದು ಹುದ್ದೆಯಲ್ಲಿ ಹೆಚ್ಚಿನ ಪ್ರಭಾರದಲ್ಲಿರಿಸಿದ ಸಂದರ್ಭದಲ್ಲಿ ಅಂತಹ ಪ್ರಭಾರದಲ್ಲಿರಿಸಿದ ಅಧಿಕಾರಿಯ ಮೂಲ ವೇತನದ ಶೇಕಡ 15 (ಶೇಕಡ ಹದಿನೈದು) ರ ದರದಲ್ಲಿ ಪ್ರಭಾರ ಭತ್ಯೆಯನ್ನು ನಿಗಧಿಪಡಿಸಿ ಆದೇಶಿಸಲಾಗಿದೆ. ಪ್ರಭಾರ ಭತ್ಯೆಯನ್ನು ಮಂಜೂರು ಮಾಡುವ ಸಂದರ್ಭದಲ್ಲಿ ಈ ಕೆಳಕಂಡ ಅಂಶಗಳನ್ನು ಪರಿಗಣಿಸತಕ್ಕದ್ದು:
ಅ) ಪ್ರಭಾರ ಭತ್ಯೆಯನ್ನು ಪ್ರತಿ ಮಾಸಿಕ ವೇತನ ಬಿಲ್ಲಿನೊಂದಿಗೆ ಪಾವತಿಸತಕ್ಕದ್ದು.
ಆ) ಪ್ರಭಾರ ಭತ್ಯೆಯನ್ನು ಪುಭಾರದಲ್ಲಿರಿಸಿದ ಹುದ್ದೆಗೆ ಸಂಬಂಧಪಟ್ಟ DDO ಅಥವಾ ವರದಿ ಪ್ರಾಧಿಕಾರವು (Reporting Authority) ಯಾವುದು ಉನ್ನತವೋ ಅಂತಹ ಅಧಿಕಾರಿ ಮಂಜೂರು ಮಾಡತಕ್ಕದ್ದು.
ಇ) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ನೇಮಿಸಲಾಗುವ ಇಲಾಖಾ ಮುಖ್ಯಸ್ಥರ ಹಂತದಲ್ಲಿನ ಪುಭಾರದ ಸಂದರ್ಭದಲ್ಲಿ ಪುಭಾರ ಭತ್ಯೆಯನ್ನು ಮಂಜೂರು ಮಾಡಲು ಡ್ರಾ ಮಾಡಲು ಇಲಾಖಾ ಮುಖ್ಯಸ್ಥರು ಸಕ್ತಮರಾಗಿರುತ್ತಾರೆ.
ಈ) ಸಚಿವಾಲಯದ ಅಧಿಕಾರಿ/ಸಿಬ್ಬಂದಿಗಳಿಗೆ ಸಂದರ್ಭಾನುಸಾರ ಸಿ.ಆ.ಸು. ಇಲಾಖೆ (ಲೆಕ್ಕಪತ್ರ)/ ಐ.ಆರ್. ಎಲ್. ಎ. ಶಾಖೆಗಳಿಂದ ಮಾಸಿಕ ವೇತನದ ಬಿಲ್‌ಗಳೊಂದಿಗೆ ಪುಭಾರ ಭತ್ಯೆಯನ್ನು ಸಳದು ಪಾವತಿಸತಕ್ಕದ್ದು.
ಉ) ಪ್ರಭಾರ ಭತ್ಯೆಯ ಪರಿಷ್ಕೃತ ದರಗಳು ದಿನಾಂಕ:01.09.2022 ರಿಂದ ಜಾರಿಗೆ ಬರತಕ್ಕದ್ದು. ಪುಸ್ತುತ ಇತ್ಯರ್ಥವಾಗದಿರುವ ಪುಭಾರ ಭತ್ಯೆಯ ಕ್ಷೇಮುಗಳನ್ನು ಮೇಲಿನ ವಿಧಾನದಂತೆ
ಇತ್ಯರ್ಥಪಡಿಸತಕ್ಕದ್ದು.
ಉಳಿದಂತೆ, ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 32 ಮತ್ತು 68 ರ ಎಲ್ಲಾ ಷರತ್ತು ಮತ್ತು ಉಪಬಂಧಗಳು ಅನ್ವಯವಾಗಲಿದೆ ಅಂತ ತಿಳಿಸಿದೆ.
No comments:
Post a Comment
If You Have any Doubts, let me Comment Here