Regarding reduction of bag burden for students studying class 1 to 10.
ರಾಜ್ಯದ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಸಿಹಿಸುದ್ದಿ ನೀಡಿದ್ದು, ಮಕ್ಕಳ ಬ್ಯಾಗ್ ಹೊರೆ ಕಡಿಮೆ ಮಾಡುವ ಕುರಿತಂತೆ ಮಹತ್ವದ ಕ್ರಮಗಳನ್ನು ಕೈಗೊಂಡಿದೆ.
ಪಠ್ಯಪುಸ್ತಕಗಳಿಂದ ಮಕ್ಕಳ ಶಾಲಾ ಬ್ಯಾಗ್ ಹೆಚ್ಚಾಗಿರುವ ಕುರಿತು ನಿರ್ದೇಶಕರು, ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ, ಮಲ್ಲೇಶ್ವರಂ, ಬೆಂಗಳೂರುರವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದು.
ಆಡಳಿತ ಮಂಡಳಿಯಲ್ಲಿ ಹಾಜರಿದ ಸದರಿ ಸಮಿತಿಯ ಅಧ್ಯಕ್ಷರೊಂದಿಗೆ ಆಡಳಿತ ಮಂಡಳಿಯು ಚಿರ್ಚಿಸಿತು. ಚರ್ಚಿಸಿದ ಸಂದರ್ಭದಲ್ಲಿ ಸದರಿ ಸಮಿತಿಯ ಅಧ್ಯಕ್ಷರು ವಸ್ತುತ ಇರುವ ವರವುಸ್ತಕಗಳನ್ನು ಸಂಕಲನಾತ್ಮಕ ಮೌಲ್ಯ ಮಾಪನ 1 ಮತ್ತು 2 ಮಾದರಿಯಲ್ಲಿ ಸಿದ್ದಪಡಿಸಿದ್ದಲ್ಲಿ ಇರುವ ಅನುಕೂಲತೆಗಳ ಬಗ್ಗೆ ವರದಿಯನ್ನು ಸಲ್ಲಿಸಿರುವುದಾಗಿ ಆಡಳಿತ ಮಂಡಳಿಗೆ ವಿವರಿಸಿದರು.
ಆಡಳಿತ ಮಂಡಳಿಯು ಈ ಬಗ್ಗೆ 4 ವಿಭಾಗಗಳಲ್ಲಿನ ಆಯ್ದ ಶಾಲೆಯ ಆಯ್ಕೆ ತರಗತಿಗೆ 50 ಪ್ರತಿಗಳನ್ನು ಸರಬರಾಜು ಮಾಡಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿ ಇದರಿಂದ ಉಂಟಾಗುವ ಸಾಧಕ-ಬಾಧಕಗಳ ಬಗ್ಗೆ, ಪರಿಶೀಲಿಸಿ 15 ದಿನಗಳೊಳಗಾಗಿ ವರದಿ ನೀಡಲು ಸದರಿ ಸಮಿತಿಗೆ ಸೂಚಿಸಿತು. ಸದರಿ ಪುಸ್ತಕಗಳ ಪ್ರತಿಗಳನ್ನು ಮುದ್ರಿಸಿ ಸರಬರಾಜು ಮಾಡಲು ದರಪಟ್ಟಿ ಕರೆದು ಕ್ರಮವಹಿಸಲು ಹಾಗೂ ಇದಕ್ಕೆ ತಗಲುವ ವೆಚ್ಚವನ್ನು ಕರ್ನಾಟಕ ಪಠ್ಯಪುಸ್ತಕ ಸಂಘದಲ್ಲಿ ಲಭ್ಯವಿರುವ ನಿಧಿಯಿಂದ ಭರಿಸಲು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಪಠ್ಯಪುಸ್ತಕ ಸಂಘ(ರಿ), ಬೆಂಗಳೂರು ರವರಿಗೆ ಸೂಚಿಸಿತು ಹಾಗೂ ಸಮಿತಿಯು ಸಲ್ಲಿಸುವ ವರದಿಯ ಆಧಾರದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ, ಸೂಕ್ತ ಪ್ರಸ್ತಾವನೆ ಸಲ್ಲಿಸಿ ಆದೇಶ ಪಡೆಯಲು ಆಡಳಿತ ಮಂಡಳಿಯು ಸೂಚಿಸಿತು.
ಮೇಲೆ ಓದಲಾದ ಕ್ರಮಾಂಕ(2)ರಲ್ಲಿ ಶಾಲಾ ಬ್ಯಾಗ್ ನಲ್ಲಿ ಮಕ್ಕಳು ಕೊಂಡೊಯ್ಯುವ ಪಠ್ಯವುಸ್ತಕಗಳ ತೂಕ ಕಡಿಮ ಮಾಡುವ ಉದ್ದೇಶದಿಂದ 1 ರಿಂದ 10ನೇ ತರಗತಿಯವರೆಗಿನ ಪಠ್ಯಪುಸ್ತಕಗಳನ್ನು ರೂವಣಾತ್ಮಕ ‘ಮೌಲ್ಯಮಾಪನ ಮತ್ತು ಸಂಕಲನಾತ್ಮಕ ಮೌಲ್ಯಮಾಪನವಾರು ವಿಂಗಡಿಸುವ ಕುರಿತು ಸಾಧಕ ಬಾಧಕಗಳನ್ನು ಅಧ್ಯಯನ ಮಾಡಲು, ಮಾನ್ಯ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆರವರು ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದ್ದು ಸಮಿತಿಯು ದಿನಾಂಕ: 06.10.2023 ರಂದು ಸಭೆ ಸೇರಿ ಸರ್ಕಾರಿ ಆದೇಶದಲ್ಲಿ ಆಯಾ ತರಗತಿಗಳಿಗೆ ನಿರ್ಧರಿಸಿರುವ ಶಾಲಾ ಬ್ಯಾಗ್‌ನ ನಿರ್ದಿಷ್ಟ ಸುಮಾರು ಅರ್ಧದಷ್ಟು ತೂಕವು ಪಠ್ಯಪುಸ್ತಕಗಳಾಗಿರುವುದರಿಂದ, ಪಠ್ಯಪುಸ್ತಕಗಳ ತೂಕವನ್ನು ಕಡಿಮೆ ಮಾಡುವ ಕುರಿತು ಕೆಳಕಂಡ ಅಂಶಗಳನ್ನು ಕುರಿತು ಚರ್ಚೆ ಮಾಡಲಾಯಿತು.
ತರಗತಿವಾರು ಪಠ್ಯಪುಸ್ತಕಗಳ ತೂಕದ ಹೊರೆಯನ್ನು ಕಡಿಮೆ ಮಾಡಲು ಸಮಿತಿಯು ಈ ಕೆಳಕಂಡ ಕ್ರಮಗಳನ್ನು ಅನುಸರಿಸಬಹುದಾಗಿರುತ್ತದೆ ಎಂದು ತಿಳಿಸಿದೆ.
ಪಠ್ಯಪುಸ್ತಕ ತೂಕವನ್ನು ಅಂದಾಜು 50% ರಷ್ಟು ಕಡಿಮೆ ಮಾಡಲು ಪ್ರತಿ ಪಠ್ಯಪುಸ್ತಕವನ್ನು ಭಾಗ-1 ಮತ್ತು ಭಾಗ-2 ಗಳನ್ನಾಗಿ ವಿಂಗಡಿಸಬಹುದು.
1 ರಿಂದ 10ನೇ ತರಗತಿಗಳ ವಿಷಯವಾರು ಎಲ್ಲಾ ಪಠ್ಯಪುಸ್ತಕಗಳನ್ನು ಪರಿಶೀಲಿಸಿ, ಪ್ರತಿ ವಿಷಯವನ್ನು ಸಂಕಲನಾತ್ಮಕ ಮೌಲ್ಯಮಾಪನವಾರು ವಿಭಾಗಿಸಬಹುದು. (FAT FA2 SAI ಮತ್ತು FA3 FAT SA2) ಉದಾಹರಣೆಗೆ:-ಯಾವುದಾದರೊಂದು ಪಠ್ಯಪುಸ್ತಕದ FA1 ಮತ್ತು FA2 ನಲ್ಲಿರುವ ಎಲ್ಲಾ ಪಾಠಗಳನ್ನು ಸೇರಿಸಿ SAI ಒಂದು ಪಠ್ಯಪುಸ್ತಕವಾಗಿ ಮುದ್ರಿಸಬಹುದು. ಅದೇ ರೀತಿ FAB ಮತ್ತು FA4 ನಲ್ಲಿರುವ ಎಲ್ಲಾ ಪಾಠಗಳನ್ನು ಸೇರಿಸಿ SA2 ಒಂದು ಪಠ್ಯಪುಸ್ತಕ ಮುದ್ರಿಸಬಹುದು ಆಗ ವರ್ಷಕ್ಕೆ ಎರಡು ಪಠ್ಯ ಪುಸ್ತಕಗಳು ಆಗುತ್ತವೆ. ಮಗುವು ಪಠ್ಯವುಸ್ತಕದ ಭಾಗ-1 ನ್ನು ಮೊದಲ ಅರ್ಧ ವಾರ್ಷಿಕಕ್ಕೆ ಹಾಗೂ ಪಠ್ಯ ಪುಸ್ತಕದ ಭಾಗ-2 ನ್ನು ಎರಡನೇ ಅರ್ಧ ವಾರ್ಷಿಕಕ್ಕೆ ಬಳಕೆ ಮಾಡಬಹುದು ಎಂದು ತಿಳಿಸಿದೆ.
No comments:
Post a Comment
If You Have any Doubts, let me Comment Here