Regarding payment of qualification verification fee of candidates selected for the post of Assistant Professor (Outside Masters/Ph.D).
ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಗೊಂಡಿರುವ ಅಭ್ಯರ್ಥಿಗಳ ವಿದ್ಯಾರ್ಹತೆ (ಹೊರರಾಜ್ಯ ಸ್ನಾತಕೋತ್ತರ/ಪಿಹೆಚ್.ಡಿ) ಪರಿಶೀಲನಾ ಶುಲ್ಕ ಪಾವತಿಸುವಂತೆ ಸೂಚನೆ ನೀಡಲಾಗಿದೆ.
ಸೂಚಿತ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ-(1) ರ ಸರ್ಕಾರಿ ಅಧಿಸೂಚನೆಯನ್ವಯ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ವಿವಿಧ ವಿಷಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಗೊಂಡಿರುವ ಅಭ್ಯರ್ಥಿಗಳ ನೇಮಕಾತಿ ಅರ್ಹತೆ ಸಂಬಂಧ ಉಲ್ಲೇಖ-(2) ರ ಸರ್ಕಾರದ ಪತ್ರದಲ್ಲಿ ನೀಡಿರುವ ನಿರ್ದೇಶನದ ಮೇರೆಗೆ ಪರಿಶೀಲಿಸಲಾಗುತ್ತಿದೆ.
ಈ ಕೆಳಗಿನ ಲಿಂಕ್ ಅಲ್ಲಿ ಇರುವ ಸುತ್ತೋಲೆಯೊಂದಿಗೆ ಲಗತ್ತಿಸಿರುವ ಒಟ್ಟು 72 ಅಭ್ಯರ್ಥಿಗಳು ಹೊರರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ/ಪಿಹೆಚ್.ಡಿ ಪದವಿ ಪಡೆದಿದ್ದು, ಸದರಿ ಪದವಿಗಳ ದಾಖಲೆಗಳ ನೈಜತೆಗಾಗಿ ತಗಲುವ ಶುಲ್ಕವನ್ನು ಸಂಬಂಧಪಟ್ಟ ಅಭ್ಯರ್ಥಿಗಳು ಭರಿಸಬೇಕಾಗಿರುತ್ತದೆ. ಆದ್ದರಿಂದ, ಅಭ್ಯರ್ಥಿಗಳು ಸಂಬಂಧಪಟ್ಟ ವಿಶ್ವವಿದ್ಯಾಲಯಗಳು ನಿಗಧಿಪಡಿಸಿರುವ ನೈಜತೆಯ ಪರಿಶೀಲನಾ ಶುಲ್ಕವನ್ನು Online ಸೌಲಭ್ಯವಿರುವ ವಿಶ್ವವಿದ್ಯಾಲಯಗಳಿಗೆ Online ಮೂಲಕ ಪಾವತಿಸಿ, ಅದರ Original Receipt ಅನ್ನು ಹಾಗೂ Online ಸೌಲಭ್ಯ ಇಲ್ಲದಿರುವಂತಹ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಆ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ಡಿ.ಡಿ. ಅನ್ನು ಪಡೆದು, ಸದರಿ Original ಡಿ.ಡಿ. ಯನ್ನು ಈ ಕಛೇರಿಗೆ ದಿನಾಂಕ:05.01.2024 ರೊಳಗೆ ಸಲ್ಲಿಸತಕ್ಕದ್ದು,
ಅಭ್ಯರ್ಥಿಗಳು ಸಲ್ಲಿಸುವ ಡಿ.ಡಿ/ಚಲನ್ ಸಂಬಂಧಿಸಿದ ವಿಶ್ವವಿದ್ಯಾಲಯಗಳು ನಿಗದಿಪಡಿಸಿರುವ ಶುಲ್ಕಕ್ಕೆ ತಾಳೆಯಾದಲ್ಲಿ, ವಿಶ್ವವಿದ್ಯಾಲಯಗಳಿಂದ ನೈಜತೆ ಪ್ರಮಾಣ ಪತ್ರ ಪಡೆಯಲು ಈ ಕಛೇರಿಯಿಂದ ಕ್ರಮವಹಿಸಲಾಗುವುದು. ಸಕಾಲದಲ್ಲಿ ಶುಲ್ಕ ಪಾವತಿಸದಿರುವ/ಶುಲ್ಕ ಪಾವತಿಸಿ ದಾಖಲೆಗಳನ್ನು ಈ ಕಛೇರಿಗೆ ಒದಗಿಸದಿರುವ ಅಭ್ಯರ್ಥಿಗಳ ವಿದ್ಯಾರ್ಹತೆಯ ನೈಜತೆ ಪ್ರಮಾಣ ಪತ್ರ ಪಡೆಯುವಿಕೆಯಲ್ಲಿ ವಿಳಂಬವಾದಲ್ಲಿ ಸಂಬಂಧಪಟ್ಟ ಅಭ್ಯರ್ಥಿಗಳ ನೇರ ಹೊಣೆಗಾರರಾಗುವವರೆಂದು ಈ ಮೂಲಕ ಸೂಚಿಸಲಾಗಿದೆ.
No comments:
Post a Comment
If You Have any Doubts, let me Comment Here