JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Friday, December 22, 2023

National Mathematics Day 2023

  Jnyanabhandar       Friday, December 22, 2023

National Mathematics Day 2023

The National Mathematics Day is observed on December 22 each year to commemorate the birth anniversary of the great Indian mathematician Srinivasa Ramanujan.

Mathematics and calculations are an integral part of our lives. From learning Mathematics in school to implementing them in our regular lives, we cannot ignore the significance of this subject. There is also fun in learning Mathematics. The tricks and tips make it more interesting. Every year, National Mathematics Day is celebrated to raise awareness about the importance of learning Mathematics in order to implement it in our regular lives. The field of Mathematics has been enriched with the contributions of Mathematicians such as Aryabhata, Brahmagupta, Mahavira, Bhaskara II, Srinivasa Ramanujan and many others. On this special day, people remember and pay their respects to Srinivasa Ramanujan and laud him for his contributions to the field of Mathematics.



*ಡಿಸೆಂಬರ್ 22-ರಾಷ್ಟ್ರೀಯ ಗಣಿತ ದಿನವನ್ನು ಶ್ರೀನಿವಾಸ ರಾಮನುಜನ್ ಅವರ ಜನ್ಮದಿನದ ಸವಿನೆನಪಿಗಾಗಿ ಆಚರಿಸಲಾಗುತ್ತದೆ.*
*"ಯಾವುದೇ ಗಣಿತಶಾಸ್ತ್ರಜ್ಞನು ಯಾವುದೇ ಇತರ ಕಲೆ ಅಥವಾ ವಿಜ್ಞಾನಕ್ಕಿಂತ ಹೆಚ್ಚಾಗಿ ಗಣಿತವು ಯುವಕನ ಆಟ ಎಂಬುದನ್ನು ಮರೆಯಲು ಬಿಡಬಾರದು" ಎಂದು ಗಾಲೋಯಿಸ್ ಅವರು ಗಣಿತಶಾಸ್ತ್ರಕ್ಕೆ ಇರುವ ಮಹತ್ವ ಎಷ್ಟಿದೆ ಎಂಬುದನ್ನು ಈ ಮೇಲಿನ ಉಲ್ಲೇಖದಲ್ಲಿ ತಿಳಿಸಿದ್ದಾರೆ.*
*ಹೌದು ಓದುಗರೆ  ಗಣಿತ ಕಬ್ಬಿಣದ ಕಡಲೆ ಅಲ್ಲ. ಅದನ್ನು ಪ್ರತಿನಿತ್ಯ ಅಭ್ಯಸಿಸಿದರೆ ಅತಿ ಸುಲಭವಾಗಿ ಗಣಿತ ಕಲಿಯಬಹುದು.ಅಂತಹ ಕೆಲಸವನ್ನು ಅನೇಕ ಗಣಿತಜ್ಞರು ನಮಗೆ ನೀಡಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳ ಸಾಲಿನಲ್ಲಿ ನಿಂತು ಗಣಿತಕ್ಕೆ ತನ್ನದೇ ಸ್ವಾರಸ್ಯಕರ ಸಂಗತಿ ಮೂಲಕ ಪರಿಚಯಿಸಿದವರಲ್ಲಿ  ನಮ್ಮ  ಶ್ರೀನಿವಾಸ ರಾಮಾನುಜನ್ ಅಯ್ಯಂಗಾರ್.ಅವರು ಭಾರತ ದೇಶ ಕಂಡ ಅಪ್ರತಿಮ ಗಣಿತದ ಶ್ರೇಷ್ಠ ಪ್ರತಿಭೆ.ಹಾಗಾಗಿ ಶ್ರೀನಿವಾಸ ರಾಮನುಜನ್  ಅವರು ಗಣಿತಶಾಸ್ತ್ರಕ್ಕೆ ನೀಡಿದ ಅವರ ಕೊಡುಗೆಯನ್ನು ಗೌರವಿಸಲು,ಗಣಿತದ ಮಹತ್ವವನ್ನು ಒತ್ತಿಹೇಳಲು ಹಾಗೂ ರಾಮಾನುಜನ್ ಅವರ ಜನ್ಮದಿನದ ಸವಿನೆನಪಿಗಾಗಿ ಭಾರತದಾದ್ಯಂತ ಪ್ರತಿ ವರ್ಷ ಡಿಸೆಂಬರ್ 22  ರಂದು  "ರಾಷ್ಟ್ರೀಯ ಗಣಿತ" ದಿನವನ್ನಾಗಿ ಆಚರಿಸಲಾಗುತ್ತಿದೆ.*

_#ಉದ್ದೇಶ:_
*ಮನುಷ್ಯನ ಮಾನವೀಯತೆಯ ಬೆಳವಣಿಗೆಗೆ ಗಣಿತದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಜನರ ಮನಸ್ಸಿನಲ್ಲಿ ಗಣಿತಕ್ಕೆ ಸಂಬಂಧಿಸಿದ ಭಯವನ್ನು ತೊಡೆದುಹಾಕುವುದು ಈ ದಿನದ ಉದ್ದೇಶವಾಗಿದೆ.*

_# ಹಿನ್ನೆಲೆ:_
*ಈ ದಿನದ ಇತಿಹಾಸ ನೋಡುವುದಾದರೆ  ರಾಮಾನುಜನ್ ಅವರ 125 ನೇ ಜನ್ಮದಿನವಾದ ಡಿಸೆಂಬರ್ 22, 2012 ರಂದು ಮೊದಲ ಬಾರಿಗೆ ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಯಿತು.*

*ಅಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರತಿ ವರ್ಷ ಡಿಸೆಂಬರ್ 22 ರಂದು ರಾಷ್ಟ್ರದಾದ್ಯಂತ ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುವುದು ಎಂದು ಘೋಷಿಸಿದರು. ಗಣಿತ ಕ್ಷೇತ್ರದಲ್ಲಿ ರಾಮಾನುಜನ್ ಅವರ ಕೊಡುಗೆಗೆ ಗೌರವವಾಗಿ , 2012 ನೇ ವರ್ಷವನ್ನು "ರಾಷ್ಟ್ರೀಯ ಗಣಿತ ವರ್ಷ" ಎಂದು ಆಚರಿಸಲಾಯಿತು.*
*ರಾಮಾನುಜನ್ ಅವರ ಗಣಿತದ ಕಾರ್ಯಗಳನ್ನು ಅಂಗೀಕರಿಸಲು ಮತ್ತು ಗಣಿತದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.ದೇಶದ ಯುವ ಪೀಳಿಗೆಯಲ್ಲಿ ಗಣಿತ ಕಲಿಯುವ ಕುರಿತು ಸಕಾರಾತ್ಮಕ ಮನೋಭಾವವನ್ನು ಪ್ರೇರೇಪಿಸುವುದು.ಇದು ಇಂದಿನ ಮಕ್ಕಳಿಗೆ ಮತ್ತು ಯುವ ಪೀಳಿಗೆಗೆ ಗಣಿತವನ್ನು ಒಂದು ವಿಷಯವಾಗಿ ಮುಂದುವರಿಸಲು ಪ್ರೇರೇಪಿಸುತ್ತದೆ. ಈ ದಿನವು ಬಹಳಷ್ಟು ಜನರ ಮನಸ್ಸಿನಲ್ಲಿರುವ ಗಣಿತಕ್ಕೆ ಸಂಬಂಧಿಸಿದ ಭಯವನ್ನು ತೆಗೆದುಹಾಕುವ ಗುರಿಯನ್ನು ಹೊಂದಿದೆ.*

logoblog

Thanks for reading National Mathematics Day 2023

Previous
« Prev Post

No comments:

Post a Comment

If You Have any Doubts, let me Comment Here