JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Wednesday, December 20, 2023

Benifits Of New Pension Scheme

  Jnyanabhandar       Wednesday, December 20, 2023
Benifits Of New Pension Scheme

ಕರ್ನಾಟಕ ರಾಜ್ಯದ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನು ಪುನಃ ಜಾರಿಗೆ ತರಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಹೊಸ ಪಿಂಚಣಿ ಯೋಜನೆಯಿಂದ ಆಗುವ ಪ್ರಯೋಜನಗಳ ಕುರಿತು ಚರ್ಚೆಗಳು ನಡೆಯುತ್ತಿವೆ.


ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಕ್ತಾಯಗೊಂಡ ಚಳಿಗಾಲದ ಅಧಿವೇಶನದಲ್ಲಿಯೂ ಹೊಸ ಮತ್ತು ಹಳೆಯ ಪಿಂಚಣಿ ಯೋಜನೆ ಕುರಿತು ಚರ್ಚೆಗಳು ನಡೆದಿವೆ. ಡಾ. ವೈ. ಎ. ನಾರಾಯಣಸ್ವಾಮಿ (ಶಿಕ್ಷಕರ ಕ್ಷೇತ್ರ) ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರ ನೀಡಿದ್ದಾರೆ. ಸದಸ್ಯರು ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಹಾಗೂ ಶಿಕ್ಷಕರಿಗೆ ಹೊಸ ಪಿಂಚಣಿ (ಎನ್‌ಪಿಎಸ್) ವ್ಯವಸ್ಥೆ ಅನುಷ್ಠಾನಗೊಳಿಸಿರುವುದು ಯಾವಾಗ?. ಈ ವ್ಯವಸ್ಥೆಯಿಂದ ಸದರಿ ನೌಕರರಿಗೆ ಆಗುವ ಪ್ರಯೋಜನಗಳೇನು? ಎಂದು ಪ್ರಶ್ನಿಸಿದ್ದರು.

ಮುಖ್ಯಮಂತ್ರಿಗಳ ಉತ್ತರ; ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಗಳು ತಮ್ಮ ಉತ್ತರದಲ್ಲಿ ಸರ್ಕಾರದ ಆದೇಶ ದಿನಾಂಕ 31/03/2006ರನ್ವಯ ದಿನಾಂಕ 01/04/2006ರಂದು ಮತ್ತು ತದನಂತರ ಸರ್ಕಾರಿ ಸೇವೆಗೆ ಸೇರುವ ನೌಕರರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿರುತ್ತದೆ ಎಂದು ಹೇಳಿದ್ದಾರೆ.

ರಾಜ್ಯದ ಸ್ವಾಯತ್ತ ಸಂಸ್ಥೆಗಳು, ನಿಗಮ ಮಂಡಳಿಗಳು, ಸಂಘಗಳು, ವಿಶ್ವವಿದ್ಯಾನಿಲಯಗಳು, ರಾಜ್ಯದ ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೂ ಸಹ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ದಿನಾಂಕ 01/04/2006ರಿಂದ ಕಡ್ಡಾಯವಾಗಿ ಜಾರಿಗೆ ಬರುವಂತೆ ಸರ್ಕಾರದ ಸುತ್ತೋಲೆ ದಿನಾಂಕ 21/02/2015ರಲ್ಲಿ ವಿಸ್ತರಿಸಲಾಗಿದೆ.

ಸರ್ಕಾರದ ಆದೇಶ ದಿನಾಂಕ 18/05/2016 ಮತ್ತು ಸರ್ಕಾರದ ಆದೇಶ ದಿನಾಂಕ 29/11/2021ರನ್ವಯ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ನಿವೃತ್ತರಾದರೆ/ ಸೇವೆಯಲ್ಲಿರುವಾಗಲೇ ಮೃತರಾದರೆ/ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಅವರುಗಳ ಪ್ರಾನ್ ಖಾತೆಯಲ್ಲಿನ ಮೊತ್ತವನ್ನು ಇತ್ಯರ್ಥಪಡಿಸಲಾಗುವುದು ಎಂದು ಹೇಳಿದ್ದಾರೆ.

ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ನಿವೃತ್ತಿ ಹೊಂದಿದ ನೌಕರರ ಪ್ರಾನ್ ಖಾತೆಯಲ್ಲಿ ರೂ. 5 ಲಕ್ಷಕ್ಕಿಂತ ಕಡಿಮೆ ಮೊತ್ತವಿದ್ದರೆ ನೌಕರರಿಗೆ ಫ್ರಾನ್ ಖಾತೆಯಲ್ಲಿರುವ ಸಂಪೂರ್ಣ ಮೊತ್ತವನ್ನು ಇತ್ಯರ್ಥಪಡಿಸಲಾಗುವುದು ಹಾಗೂ ಖಾತೆಯಲ್ಲಿನ ಮೊತ್ತವು ರೂ. 5 ಲಕ್ಷಕ್ಕಿಂತ ಮೇಲ್ಮಟ್ಟಿದರೆ ಪ್ರಾನ್ ಖಾತೆಯಲ್ಲಿರುವ ಶೇ 60 ಮೊತ್ತವನ್ನು ನೌಕರರು ಹಿಂಪಡೆಯಬಹುದಾಗಿದ್ದು, ಉಳಿದ ಶೇ 40 ಮೊತ್ತವನ್ನು ಕಡ್ಡಾಯವಾಗಿ Annuity Service Provider ಯಲ್ಲಿ ಹೂಡಿಕೆ ಮಾಡಿ ಮಾಸಿಕ ಪಿಂಚಣಿ ಪಡೆಯಬೇಕಿರುತ್ತದೆ.

ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಸೇವೆಗೆ ರಾಜೀನಾಮೆ ನೀಡಿದ ನೌಕರರ ಪ್ರಾನ್ ಖಾತೆಯಲ್ಲಿ, ರೂ. 2.50 ಲಕ್ಷಕ್ಕಿಂತ ಕಡಿಮೆ ಮೊತ್ತವಿದ್ದರೆ ಫ್ರಾನ್ಸ್ ಖಾತೆಯಲ್ಲಿನ ಸಂಪೂರ್ಣ ಮೊತ್ತವನ್ನು ಇತ್ಯರ್ಥಪಡಿಸಲಾಗುವುದು. ಖಾತಯಲ್ಲಿನ ರೂ. 2.50 ಲಕ್ಷಕ್ಕಿಂತ ಮೇಲ್ಪಟ್ಟಿದ್ದರೆ ಶೇ.20% ರಷ್ಟು ಮೊತ್ತವನ್ನು ನೌಕರರು ಹಿಂಪಡೆಯಬಹುದಾಗಿದ್ದು, ಉಳಿಕೆ ಶೇ. 80% ಮೊತ್ತವನ್ನು ಕಡ್ಡಾಯವಾಗಿ Annuity Service Providerನಲ್ಲಿ ಹೂಡಿಕೆ ಮಾಡಿ ಮಾಸಿಕ ಪಿಂಚಣಿ ಪಡೆಯಬೇಕಿರುತ್ತದೆ.

ನೌಕರರು ಸೇವೆಯಲ್ಲಿರುವಾಗಲೇ ಮೃತರಾದ ಸಂದರ್ಭದಲ್ಲಿ ಪ್ರಾನ್ ಖಾತೆಯಲ್ಲಿ ರೂ. 5.00 ಲಕ್ಷಕ್ಕಿಂತ ಕಡಿಮ ಮೊತ್ತವಿದ್ದರೆ, ಮೃತರ ನಾಮನಿರ್ದೇಶಿತರಿಗೆ ಸಂಪೂರ್ಣ ಮೊತ್ತವನ್ನು ಇತ್ಯರ್ಥ ಪಡಿಸಲಾಗುವುದು, ಫ್ರಾನ್ ಖಾತೆಯಲ್ಲಿನ ಮೊತ್ತವು 5.00 ಲಕ್ಷಕ್ಕಿಂತ ಮೇಲ್ಪಟ್ಟಿದ್ದರೆ ಪ್ರಾನ್ ಖಾತೆಯಲ್ಲಿರುವ 20% ರಷ್ಟು ಮೊತ್ತವನ್ನು ಮೃತರ ನಾಮನಿರ್ದೇಶಿತರಿಗೆ ಇತ್ಯರ್ಥಪಡಿಸಲಾಗುವುದು ಹಾಗೂ 80% ರಷ್ಟು ಮೊತ್ತವು ಕಡ್ಡಾಯವಾಗಿ Anuity Service Provider ಯಲ್ಲಿ ಹೂಡಿಕೆ ಮಾಡಿ ಮಾಸಿಕ ಪಿಂಚಣಿ ಪಡೆಯಬೇಕಿರುತ್ತದೆ ಎಂದು ಉತ್ತರ ನೀಡಲಾಗಿದೆ.

ಸದಸ್ಯರು ಹಳೇ ಪಿಂಚಣಿ (ಒ.ಪಿ.ಎಸ್) ಯೋಜನೆಯಿಂದ ಸರ್ಕಾರಿ ನೌಕರರಿಗೆ ಹಾಗೂ ಶಿಕ್ಷಕರಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟವುಂಟಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ, ಬಂದಿದ್ದಲ್ಲಿ ವಿವರಗಳನ್ನು ನೀಡುವುದು ಎಂದು ಪ್ರಶ್ನಿಸಿದ್ದರು. ಇದಕ್ಕೆ ಸರ್ಕಾರ ಇಲ್ಲ ಎಂದು ಉತ್ತರ ಕೊಟ್ಟಿದೆ.

ಹೊಸ ಪಿಂಚಣಿ (ಎನ್.ಪಿ.ಎಸ್.) ಯೋಜನೆ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೆ ತರುವುದಾಗಿ ಕಳೆದ ಅಧಿವೇಶನದಲ್ಲಿ ಸರ್ಕಾರ ಭರವಸೆ ನೀಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಎಂದು ಪ್ರಶ್ನಿಸಲಾಗಿತ್ತು. ಮುಖ್ಯಮಂತ್ರಿಗಳು ಸರ್ಕಾರದ ಆದೇಶ ದಿನಾಂಕ 01/03/2023ರಲ್ಲಿ ರಾಜ್ಯದಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದು ಪಡಿಸುವ ಸಂಬಂಧ ಈಗಾಗಲೇ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಿರುವ ರಾಜ್ಯಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಕುರಿತು, ಕೈಗೊಂಡಿರುವ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಆದೇಶಿಸಿದೆ ಎಂದು ಹೇಳಿದ್ದಾರೆ.
logoblog

Thanks for reading Benifits Of New Pension Scheme

Previous
« Prev Post

No comments:

Post a Comment

If You Have any Doubts, let me Comment Here