100 ದಿನಗಳ ಓದುವ ಆಂದೋಲನ
ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದರೊಂದಿಗೆ ಭಾಷಾ ಕೌಶಲ್ಯವನ್ನು ಅಭಿವೃದ್ಧಿಗೊಳಿಸಬೇಕಿದೆ. ಹಾಗಾಗಿ ರಾಜ್ಯವ್ಯಾಪಿ ಎಲ್ಲಾ ಬಾಲವಾಟಿಕ/ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ 100 ದಿನಗಳ ಓದುವ ಆಂದೋಲನವನ್ನು ಅನುಷ್ಠಾನಗೊಳಿಸಲು 2022-23ನೇ ಸಾಲಿನ PAB Plan Document ನಲ್ಲಿ ಯೋಜಿಸಲಾಗಿದೆ. ಈ ಕಾರ್ಯಕ್ರಮಗಳನ್ನು 3 ಗುಂಪುಗಳಲ್ಲಿ ವಿದ್ಯಾರ್ಥಿಗಳಿಗೆ ಅನುಷ್ಠಾನಗೊಳಿಸಬೇಕಾಗಿದೆ.
NIPUN ಭಾರತ ಮಿಷನ್‌ನ ಆಶಯದಂತೆ FLN ಚಟುವಟಿಕೆಗಳನ್ನು ನಿರ್ವಹಿಸುವುದರ ಮೂಲಕ ಮಕ್ಕಳಲ್ಲಿ ಓದುವ, ಬರೆಯುವ ಹಾಗೂ ಅರ್ಥೈಸಿಕೊಳ್ಳುವ ಹಾಗೂ ಸಂತೋಷದಿಂದ ಭಾಷಾ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಬೇಕಾಗಿದೆ. ಈ ಉದ್ದೇಶದಿಂದ ಓದುವ ಆಂದೋಲನದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಉಲ್ಲೇಖದಲ್ಲಿ ಯೋಜಿಸಿರುವಂತೆ ಕೈಗೊಳ್ಳಬೇಕಾಗಿರುವ ಕಾರ್ಯ ಚಟುವಟಿಕೆಗಳ ವಿವರ ಮತ್ತು ವೇಳಾಪಟ್ಟಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದೆ. ಶಾಲಾ ಶಿಕ್ಷಕರು ಅದರಂತೆ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದೆ.
ಅನುಷ್ಠಾನಗೊಳಿಸಬೇಕಾದ ಗುಂಪುಗಳು/ ತರಗತಿವಾರು ಮಕ್ಕಳು (Target group)
➡ ಗುಂಪು 1: ಬಾಲವಾಟಿಕದಿಂದ 02ನೇ ತರಗತಿ
➡ ಗುಂಪು2: 03ನೇ ತರಗತಿಯಿಂದ 05ನೇ ತರಗತಿಯವರೆಗೆ
➡ ಗುಂಪು3: 06ನೇ ತರಗತಿಯಿಂದ 08ನೇ ತರಗತಿಯವರೆಗೆ
ಆಂದೋಲನದ ಅವಧಿ: 100 ದಿನಗಳು (14 ವಾರಗಳು) ದಿನಾಂಕ: 15-11-2023 ರಿಂದ 22-02-2024.
ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗಾಗಿ ರಾಜ್ಯ ಮಟ್ಟದ ನೋಡಲ್ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ಹಂತದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕಾರ್ಯಕ್ರಮದ ಅನುಷ್ಠಾನವನ್ನು ಅವಲೋಕಿಸುವರು.
ರಾಜ್ಯದ ಎಲ್ಲಾ ಸಿಟಿಇ ಪ್ರಾಂಶುಪಾಲರು ಹಾಗೂ ಅಧಿಕಾರಿವರ್ಗದವರು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಎಲ್ಲಾ ಅನುಷ್ಠಾನ ಅಧಿಕಾರಿಗಳು ಶಾಲಾ ಭೇಟಿ ಸಂದರ್ಭದಲ್ಲಿ ಈ ಕಾರ್ಯಕ್ರಮದ ಅನುಷ್ಠಾನವನ್ನು ಅವಲೋಕಿಸುವುದು.
ಉಪನಿರ್ದೇಶಕರು(ಆಡಳಿತ),ಶಾಲಾ ಶಿಕ್ಷಣ ಇಲಾಖೆ, ಇವರು ತಮ್ಮ ಕಛೇರಿಯ ಎಲ್ಲಾ ಅಧಿಕಾರಿಗಳಿಗೂ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸುವುದು. ತಮ್ಮ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಸೂಕ್ತ ಸೂಚನೆ ನೀಡಿ ಶಾಲೆಗಳಲ್ಲಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವುದು.
ಉಪನಿರ್ದೇಶಕರು(ಅಭಿವೃದ್ಧಿ), ಶಾಲಾ ಶಿಕ್ಷಣ ಇಲಾಖೆ, ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರು ಡಯಟ್ ಇವರುಗಳು ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಸಕ್ರಿಯವಾಗಿ ಪಾಲ್ಗೊಂಡು ಸೂಕ್ತ ಸೂಚನೆ ಹಾಗೂ ಮಾರ್ಗದರ್ಶನ ನೀಡುವುದು.
ಉಪನಿರ್ದೇಶಕರು(ಅಭಿವೃದ್ಧಿ) ಶಾಲಾ ಶಿಕ್ಷಣ ಇಲಾಖೆರವರು ಡಯಟ್‌ನ ಉಪನ್ಯಾಸಕರುಗಳನ್ನು ಪ್ರತಿ ತಾಲ್ಲೂಕಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವುದು. ಈ ರೀತಿ ನೇಮಿಸಲ್ಪಟ್ಟ ನೋಡಲ್ ಅಧಿಕಾರಿಗಳು ಓದುವ ಆಂದೋಲನದಲ್ಲಿ ಪ್ರತಿವಾರವು ಪಾಲ್ಗೊಂಡ ಮೂರು ಗುಂಪುಗಳ ಪ್ರಗತಿಯ ವರದಿ ಹಾಗೂ ಕಾರ್ಯಕ್ರಮಕ್ಕೆ ಸಂಬಂಧಿಸಿದ ಉತ್ತಮವಾದ ಫೋಟೋ ಮತ್ತು ವಿಡಿಯೋಗಳನ್ನು
https://docs.google.com/spreadsheets/ /1QMPcyTdQ8VM2qfU7EIkTGzuC5xAvyX- KRMnxKsF71Q/edit?usp=sharing ಈ ಗೂಗಲ್ ಟ್ರಾಕ್ಟರ್ ನಲ್ಲಿ ಅಪ್ಲೋಡ್ ಮಾಡಲು ಕ್ರಮವಹಿಸುವುದು.
ಸದರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸಲು ಅವಕಾಶ ಕಲ್ಪಿಸಲು ಸೂಚಿಸಿದ ಬಗ್ಗೆ.
Click here to Download the Order
No comments:
Post a Comment
If You Have any Doubts, let me Comment Here