KAT Decision to consider Graduate Primary School Teacher (GPT-6th to 8th Class) for the promotion of Primary School Head Teacher.
ರಾಜ್ಯಾದ್ಯಂತ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪದವೀಧರರ ಶಿಕ್ಷಕರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಜ್ಯೇಷ್ಠತೆ ಆಧಾರದಲ್ಲಿ ಭಡ್ತಿಯಾಗಲಿ, ಆರ್ಥಿಕ ಸೌಲಭ್ಯಗಳಾಗಲಿ ಇಲ್ಲದಾಗಿದ್ದು, ಅತಂತ್ರ ಸ್ಥಿತಿಗೆ ತಲುಪಿದ್ದಾರೆ.
ಪ್ರಾಥಮಿಕ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಕಡೆಗೆ ಸರಕಾರ ಗಮನಹರಿಸುತ್ತಿಲ್ಲ. ಮುಖ್ಯ ಶಿಕ್ಷಕರ ಹುದ್ದೆಗೆ ಭಡ್ತಿ ಅಥವಾ ನಿರಾಕರಣೆ ಮಾಡಿದರೂ ಶಿಕ್ಷಕರಿಗೆ ಆರ್ಥಿಕ ಸೌಲಭ್ಯವಿಲ್ಲ. ಒಂದು ಭಡ್ತಿ ಮಾತ್ರ ನೀಡುತ್ತಾರೆ. 15, 20, 25 ಮತ್ತು 30 ವರ್ಷ ಸೇವೆ ಸಲ್ಲಿಸಿದವರಿಗೆ ಸ್ವಯಂಚಾಲಿತ ವಿಶೇಷ ಭಡ್ತಿಗೆ ಅವಕಾಶ ಇದ್ದರೂ ಅದನ್ನು ಕೊಡುವುದಿಲ್ಲ. ಭಡ್ತಿ ದೊರೆತರೂ ಒಂದು ವೇಳೆ ಅವರು ಮುಖ್ಯ ಶಿಕ್ಷಕರಾಗಿ ಜವಾಬ್ದಾರಿಯನ್ನು ವಹಿಸಿಕೊಳ್ಳದಿದ್ದರೆ ಅವರಿಗೆ ಆರ್ಥಿಕ ಸೌಲಭ್ಯವಿಲ್ಲ ಎಂದು ಶಿಕ್ಷಕರು ಹೇಳುತ್ತಾರೆ.
ಮೇಲಿನ ವಿಷಯಕ್ಕೆ ಸಂಬಂಧಿಸಿದ ಹಾಗೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ (GPT-6 ರಿಂದ 8ನೇ ತರಗತಿ) ರನ್ನು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಬಡ್ತಿಗೆ ಪರಿಗಣಿಸಲು KAT ತೀರ್ಪು.
No comments:
Post a Comment
If You Have any Doubts, let me Comment Here