Additional select list Cutoff Marks for the post of First Division Assistant(RPC) 2018 is published
ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆ ದಿನಾಂಕ 11-02-2019ರಲ್ಲಿ ಅಧಿಸೂಚಿಸಲಾದ ವಿವಿಧ ನ್ಯಾಯಾಂಗ ಘಟಕಗಳಲ್ಲಿನ ಪ್ರಥಮ ದರ್ಜೆ ಸಹಾಯಕರ ಉಳಿಕೆ ಮೂಲ ವೃಂದದ 209 ಹುದ್ದೆಗಳಿಗೆ ದಿನಾಂಕ 1-12-2020ರಂದು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು ಅದರಂತೆ ಕರ್ನಾಟಕ ನಾಗರಿಕ ಸೇವೆಗಳ ಲಿಪಿಕ ಹುದ್ದೆಗಳ ನೇಮಕಾತಿ ನಿಯಮಗಳು 1978ರನ್ವಯ ಉಳಿಕೆ ಮೂಲ ವೃಂದದ ಹುದ್ದೆಗಳ ನೇಮಕಾತಿಗೆ ಶೇ.10ರಷ್ಟು ಹೆಚ್ಚುವರಿ ಪಟ್ಟಿಯನ್ನು ಸಿದ್ಧಪಡಿಸಿ ದಿನಾಂಕ 30-03-2023 ರಂದು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿತ್ತು. ಪ್ರಥಮ ಹಂತದಲ್ಲಿ ಸದರಿ ಹುದ್ದೆಗಳಿಗೆ ಒಟ್ಟು ನಾಲ್ಕು ನ್ಯಾಯಾಂಗ ಘಟಕಗಳಲ್ಲಿನ 11 ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಉಲ್ಲೇಖ 3ರಲ್ಲಿ ಪ್ರಕಟಿಸಲಾಗಿರುತ್ತದೆ.
ಮುಂದುವರೆದು 2ನೇ ಹಂತವಾಗಿ ಉಳಿಕೆ ಮೂಲ ವೃಂದದ 16 ವಿವಿಧ ನ್ಯಾಯಾಂಗ ಘಟಕಗಳಿಂದ ಹೆಚ್ಚುವರಿ ಆಯ್ಕೆ ಪಟ್ಟಿಗಾಗಿ ಪ್ರಸ್ತಾವನೆಗಳು ಸ್ವೀಕೃತವಾಗಿದ್ದು ನಿಯಮಾನುಸಾರ ಶೇಕಡ.10ರ ವರ್ಗೀಕರಣಕ್ಕೆ ಸೀಮಿತಗೊಳಿಸಿ ಪ್ರಸ್ತಾವನೆಗಳ ಕಾಲಾನುಕ್ರಮಣಿಕೆ ಅನುಸಾರ ಉಳಿಕೆ ಮೂಲ ವೃಂದದ 10 ನ್ಯಾಯಾಂಗ ಘಟಕಗಳಿಗೆ 22 ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ಅಭ್ಯರ್ಥಿಗಳ ಮಾಹಿತಿಗಾಗಿ ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಲಾಗಿರುತ್ತದೆ. ಅದರಂತೆ ಹೆಚ್ಚುವರಿ ಆಯ್ಕೆ ಪಟ್ಟಿಯ ಕಟ್ ಆಫ್ ಅಂಕಗಳನ್ನೂ ಸಹ ಪ್ರಕಟಿಸಲಾಗಿರುತ್ತದೆ.
No comments:
Post a Comment
If You Have any Doubts, let me Comment Here