Heading: About inclusion of child's name in birth certificate
ರಾಜ್ಯ ಸರ್ಕಾರವೂ ಕರ್ನಾಟಕದ ಪೌರಾಡಳಿತ ನಿರ್ದೇಶನಾಲಯವೂ ಜನನ ಪ್ರಮಾಣ ಪತ್ರದಲ್ಲಿ ಮಗುವಿನ ಹೆಸರು ಸೇರ್ಪಡೆ ಮಾಡುವ ಕುರಿತು ಹೊಸ ಆದೇಶವನ್ನು ಹೊರಡಿಸಿದೆ. ಜನನ ಪ್ರಮಾಣ ಪತ್ರದಲ್ಲಿ ಮಗುವಿನ ಹೆಸರು ನೋಂದಣಿಗೆ ಮಾಡಿಸಲು ಇದು ಜನರಿಗೆ ಸಹಾಯಕವಾಗಲಿದೆ.
ಮುಖ್ಯ ಯೋಜನಾಧಿಕಾರಿಗಳು, ಪೌರಾಡಳಿತ ನಿರ್ದೇಶನಾಲಯ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಆದೇಶದ ವಿವರ ಉಲ್ಲೇಖಿತ ಪತ್ರದನ್ವಯ ದಿನಾಂಕ 01/01/2000 ಕ್ಕಿಂತ ಮುಂಚೆ ಹಾಗೂ ನಂತರ ನೋಂದಾಯಿಸಿರುವ ಜನನ ಘಟನೆಗಳಿಗೆ, ಪ್ರಮಾಣ ಪತ್ರದಲ್ಲಿ ಹೆಸರು ಸೇರಿಸಲು ಸರ್ಕಾರದ ಅಧಿಸೂಚನೆಯಂತೆ ಇನ್ನೂ 5 ವರ್ಷಗಳು ಅಂದರೆ 07/02/2026 ರವರೆಗೆ ಅವಧಿಯನ್ನು ವಿಸ್ತರಿಸಿದ್ದು. ಅದರಂತೆ ಅಗತ್ಯ ಕ್ರಮವಹಿಸಲು ಕೋರಿದೆ ಎಂದು ಆದೇಶ ತಿಳಿಸಿದೆ.
No comments:
Post a Comment
If You Have any Doubts, let me Comment Here