JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Tuesday, October 10, 2023

A circular to create awareness among students of all schools in the state about the ill effects of viewing mobile phones

  Jnyanabhandar       Tuesday, October 10, 2023
A circular to create awareness among students of all schools in the state about the ill effects of viewing mobile phones 

ಶಾಲಾ ಮಕ್ಕಳಲ್ಲಿ ದೃಷ್ಟಿ ದೋಷ ಸಮಸ್ಯೆ ಹೆಚ್ಚಾಗುತ್ತಿದೆ. ಕಾರಣ ಏನೆಂಬುದು ತಿಳಿದುಬಂದಿಲ್ಲ. ಮಹಾಮಾರಿ ಕೊರೊನಾ ಕಾಲದಲ್ಲಿ ಅಂಟಿಕೊಂಡ ಮೊಬೈಲ್ ಗೀಳು ಇದಕ್ಕೆ ಕಾರಣೀಭೂತವಾಗಿರಬಹುದಾ?ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚು ದೃಷ್ಟಿದೋಷ (visual impairment) ಕಂಡುಬರುತ್ತಿದೆ.  ಹಲವು ಮಕ್ಕಳನ್ನು ಪರೀಕ್ಷೆ ಮಾಡಿದಾಗ ನನಗೆ ಶಾಲಾ ಬೊರ್ಡ್ ನಲ್ಲಿ ಬರೆದಿರೋದ ಕಾಣಲ್ಲ… ನನಗೆ ಜಾಸ್ತಿ ಬೆಳಕಿಗೆ ಬಂದ್ರೆ ಕಣ್ಣು ಉರಿಯುತ್ತೆ.. ಸ್ವಲ್ಪವೇ ಕಾಲ ಓದಿದರೂ ತಲೆ ನೋವು ಸ್ಟಾರ್ಟ್ ಆಗುತ್ತೆ… ಮೂರು ವರ್ಷದಿಂದ ನಂಗೆ ಈ ಸಮಸ್ಯೆ ಇದೆ.. ಪಕ್ಕದಲ್ಲಿರುವವರು ಬರೆದಿರುವುದನ್ನು ನೋಡಿ ನಾನು ಬರೆದುಕೊಳ್ಳಬೇಕು, ದೂರದಿಂದ ಅಕ್ಷರ ಕಾಣಲ್ಲ.. ಎಸ್ ಹೀಗೆ ವಿದ್ಯಾರ್ಥಿಗಳು (school students) ಹೇಳ್ತಾ ಇರೋದು ಕೇಳಿದ್ರೆ ನಿಜಕ್ಕೂ ಅಚ್ಚರಿ ಜೊತೆಗೆ ಆತಂಕವೂ ಆಗುತ್ತೆ… ಇದು ಕೇವಲ ಯಾವುದೋ ಒಂದು ತರಗತಿಯ ಮಕ್ಕಳ ಸಮಸ್ಯೆಯಲ್ಲ.. ರಾಷ್ಟ್ರೀಯ ಅಂಧತ್ವ ನಿವಾರಣೆ ಕಾರ್ಯಕ್ರಮದ ಅಡಿಯಲ್ಲಿ ಶಾಲಾ ಮಕ್ಕಳನ್ನ ತಪಾಸಣೆ ಮಾಡಿದಾಗ ಈ ಕಳವಳಕಾರಿ ಸಂಗತಿ ಬಹಿರಂಗವಾಗಿದೆ.

ಸರ್ಕಾರದ ನಿಯಮನುಸಾರ ಹಾವೇರಿ ಜಿಲ್ಲೆಯ 1796 ಸರ್ಕಾರಿ ಶಾಲೆಯಲ್ಲಿ ತಪಾಸಣೆ ಮಾಡಲಾಗಿದೆ. ಅದರಲ್ಲಿ 8,500 ವಿದ್ಯಾರ್ಥಿಗಳಿಗೆ ದೃಷ್ಟಿದೋಷ ಇರುವುದು ಪತ್ತೆಯಾಗಿದೆ. 2022-23 ರ ಸಾಲಿನಲ್ಲಿ 4,367 ಮಕ್ಕಳು ಹಾಗೂ 2023-24ನೇ ಸಾಲಿನಲ್ಲಿ 4,114 ಮಕ್ಕಳಲ್ಲಿ ದೋಷವಿರುವುರು ಪತ್ತೆಯಾಗಿದೆ. ಅಂದರೆ ಕೇವಲ ಒಂದೇ ವರ್ಷದಲ್ಲಿ ಸುಮಾರು 4 ಸಾವಿರ ವಿದ್ಯಾರ್ಥಿಗಳಲ್ಲಿ ದೃಷ್ಟಿದೋಷ ಜಾಸ್ತಿ ಆಗಿದೆ.

ಕೊರೋನಾ (Corona) ಅವಧಿಯಲ್ಲಿ ಶುರುವಾದ ಆನ್‌ಲೈನ್‌ ತರಗತಿಗಾಗಿ ಮೊಬೈಲ್ ಫೋನ್, ಕಂಪ್ಯೂಟರ್ ಸೇರಿದಂತೆ ಅತಿಯಾದ ಡಿಜಿಟಲ್ ಉಪಕರಣಗಳ ಬಳಕೆಯು ಮಕ್ಕಳ ಕಣ್ಣಿಗೆ ಮಾರಕವಾಗಿದೆ. ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚಾಗಿ ಅವರಲ್ಲಿ ದೃಷ್ಟಿದೋಷ ಕಾಣಿಸಿಕೊಂಡಿದೆ ಎನ್ನಲಾಗಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ವಿಟಮಿನ್ ಕೊರತೆ, ಪೌಷ್ಟಿಕಾಂಶವುಳ್ಳ ಆಹಾರ, ತರಕಾರಿಯನ್ನ ಮಕ್ಕಳು ಹೆಚ್ಚಾಗಿ ಸೇವಿಸದೆ ಇರುವುದು ಕಾರಣ ಎನ್ನಲಾಗಿದೆ. ಆದ್ರೆ , ಮೊಬೈಲ್ ಪೋನ್ ನಿಂದ ದೂರ ಮಾಡೋದರ ಜೊತೆಗೆ ವಿಟಮಿನ್ ಯುಕ್ತ ಆಹಾರ ನೀಡುವುದರ ಮೂಲಕ ಪೋಷಕರು ಮಕ್ಕಳ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿದೆ.
logoblog

Thanks for reading A circular to create awareness among students of all schools in the state about the ill effects of viewing mobile phones

Previous
« Prev Post

No comments:

Post a Comment

If You Have any Doubts, let me Comment Here