ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ವಿಧೇಯಕವನ್ನು ಆಗಸ್ಟ್ 3ರಂದು ಮಂಡಿಸಿದ್ದು, ಸೋಮವಾರ ಅಂಗೀಕಾರ ದೊರೆತಿದೆ. ಹಾಗಾದರೆ, ಏನಿದು ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣಾ ವಿಧೇಯಕ? ಕಾಯ್ದೆ ಜಾರಿಯಾದರೆ ಜನರಿಗೆ ಏನು ಉಪಯೋಗ? ಇದರ ನಿಬಂಧನೆಗಳೇನು ಎಂಬುದರ ಸಂಕ್ಷಿಪ್ತ (ವಿಸ್ತಾರ Explainer) ಮಾಹಿತಿ ಇಲ್ಲಿದೆ.
ದೇಶದ ನಾಗರಿಕರ ಡಿಜಿಟಲ್ ಮಾಹಿತಿ ಸಂಗ್ರಹ, ಬಳಕೆದಾರರ ಹಕ್ಕುಗಳು, ಕರ್ತವ್ಯಗಳು, ಡೇಟಾ ಸಂಗ್ರಹಣೆಯ ವಿಶ್ವಾಸಾರ್ಹತೆ, ಅಪರಾಧಗಳು ನಡೆದಾಗ ಬೇರೆ ದೇಶಗಳಿಗೆ ಡಿಜಿಟಲ್ ಡೇಟಾ ಟ್ರಾನ್ಸ್‌ಫರ್, ಬೇರೆ ದೇಶಗಳಿಂದ ಡೇಟಾ ಪಡೆಯುವುದು, ಕಂಪನಿಗಳು ಡೇಟಾ ಸಂರಕ್ಷಣೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು, ನಿಯಮ ಉಲ್ಲಂಘಿಸಿದರೆ ವಿಧಿಸುವ ದಂಡ ಸೇರಿ ನೂತನ ವಿಧೇಯಕವು ಹತ್ತಾರು ಅಂಶಗಳನ್ನು ಹೊಂದಿದೆ. ಹಾಗಾಗಿ, ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಬಿಲ್ ಮಹತ್ವ ಪಡೆದಿದೆ.
ವಿಧೇಯಕದ ನಿಬಂಧನೆಗಳೇನು?
- ಜನರ ವೈಯಕ್ತಿಕ ಮಾಹಿತಿ ರಕ್ಷಣೆಯಲ್ಲಿ ವಿಫಲವಾದರೆ ಕನಿಷ್ಠ 50 ಕೋಟಿ ರೂ.ನಿಂದ 250 ಕೋಟಿ ರೂ.ವರೆಗೆ ದಂಡ ವಿಧಿಸಲಾಗುತ್ತದೆ.
- ಯಾವುದೇ ಕಂಪನಿಯು ಗ್ರಾಹಕರ ವೈಯಕ್ತಿಕ ಮಾಹಿತಿ ಸಂಗ್ರಹಿಸಿದರೆ, ಥರ್ಡ್ ಪಾರ್ಟಿ ಸ್ಟೋರೇಜ್ ಇದ್ದರೂ ರಕ್ಷಣೆ ಕಡ್ಡಾಯ.
- ದತ್ತಾಂಶ ಸೋರಿಕೆಯಾದರೆ, ನಿಯಮ ಉಲ್ಲಂಘನೆಯಾದರೆ ಆ ಕಂಪನಿಯು ಗ್ರಾಹಕರು ಹಾಗೂ ಡೇಟಾ ರಕ್ಷಣೆ ಮಂಡಳಿ (Data Protection Board)ಗೆ ಮಾಹಿತಿ ನೀಡಬೇಕು.
- ಮಕ್ಕಳು ಹಾಗೂ ವಿಶೇಷ ಚೇತನರ ವೈಯಕ್ತಿಕ ಮಾಹಿತಿ ಸಂಗ್ರಹಿಸುವಾಗ ಅವರ ಪೋಷಕರ ಅನುಮತಿ ಪಡೆಯುವುದು ಕಡ್ಡಾಯ.
- ಬೇರೆ ದೇಶಗಳಿಗೆ ಮಾಹಿತಿ ನೀಡುವ ನಿಯಂತ್ರಣವು ಕೇಂದ್ರ ಸರ್ಕಾರದ ಬಳಿಯೇ ಇರಲಿದೆ.
2018ರಲ್ಲಿ ನ್ಯಾಯಮೂರ್ತಿ ಬಿ ಎನ್ ಶ್ರೀಕೃಷ್ಣ ನೇತೃತ್ವದ ಪರಿಣತ ಸಮಿತಿ ಈ ಮಸೂದೆಯನ್ನು ರೂಪಿಸಿತ್ತು. ಕೇಂದ್ರ ಸರ್ಕಾರವು 2019 ರಲ್ಲಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು. ಅದನ್ನು ಅದೇ ವರ್ಷ ಡಿಸೆಂಬರ್‌ನಲ್ಲಿ ಜಂಟಿ ಸಂಸದೀಯ ಸಮಿತಿಯ ಮುಂದಿಡಲಾಯಿತು. ಸಮಿತಿಯ ವರದಿಗೆ ತಿದ್ದುಪಡಿ ಸೂಚಿಸಿದ ನಂತರ ಡಿಸೆಂಬರ್ 2021 ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಕೊನೆಗೆ ಮೊದಲ ವಿಧೇಯಕವನ್ನು ಹಿಂಪಡೆಯಲಾಗಿತ್ತು.
No comments:
Post a Comment
If You Have any Doubts, let me Comment Here