International Friendship Day is observed on July 30, though there are several places where it is celebrated on August 7. The day is a celebration of human relations that go beyond familial ties and heredity. Enjoy this amazing day with these selected messages and quotes and share them with your friends.
The International Day of Friendship was proclaimed in 2011 by the UN General Assembly with the idea that friendship between peoples, countries, cultures and individuals can inspire peace efforts and build bridges between communities.
International Friendship Day is observed on July 30. As the name suggests, the day celebrates friendship, the bond of love and trust that exists between two human beings who are otherwise not connected through lineage and heredity. Friendship day is observed on several days in several countries. At many places, people observe it on August 7 as well. If you are someone who is looking forward to a day when you can express your gratitude to your friend or friends, this is the right day for you.
History Of International Friendship Day
The resolution places emphasis on involving young people, as future leaders, in community activities that include different cultures and promote international understanding and respect for diversity.
To mark the International Day of Friendship the UN encourages governments, international organizations and civil society groups to hold events, activities and initiatives that contribute to the efforts of the international community towards promoting a dialogue among civilizations, solidarity, mutual understanding and reconciliation.
The International Day of Friendship is an initiative that follows on the proposal made by UNESCO defining the Culture of Peace as a set of values, attitudes and behaviours that reject violence and endeavour to prevent conflicts by addressing their root causes with a view to solving problems. It was then adopted by the UN General Assembly in 1997.
Actions to Promote a Culture of Peace
1.foster a culture of peace through education;
promote sustainable economic and social development;
promote respect for all human rights;
ensure equality between women and men;
foster democratic participation;
advance understanding, tolerance and solidarity;
support participatory communication and the free flow of information and knowledge;
promote international peace and security.
How To Celebrate International Day Of Friendship
There are no set rules on how to celebrate International Friendship Day. The beauty of all friendships, whether tried and tested or new and burgeoning, is that each one is unique from the last. Consider some of these ways to celebrate International Day of Friendship:
1.Do Nice Things for People
Reach out to friends and do something that is going to put a smile on their face. This could be anything from enjoying a coffee together to simply sending a text message to someone that you have not spoken to in a while. Spend the day doing nice things for people, putting a smile on their faces.
Make a New Friend
Another way to celebrate the International Day of Friendship is to make new friends! There are so many different ways that you can make new connections today. Thanks to the Internet, it is easier than ever before to connect with like-minded people. Join forums or websites where you can chat with new people or go to a local community event and make an effort to speak to new people.
Attend a Cultural Event for International Day of Friendship
Consider attending a community cultural celebration in honor of International Friendship Day. If there is a community center that you have been meaning to check in your local area but have not had the chance to do so, now is a perfect time! Check the schedule to find out about any events that are being hosted here. You can meet some new people and learn about different lifestyles and cultures that you may not have heard much about before.
Host an Event for Friends
Or, why not invite your friends around and cook a nice meal for them? There is nothing better than enjoying good food and a drink with friends, right? Going out of your way to cook a nice meal for the people close to you is something that your friends are assured to appreciate. If your friends don’t live nearby, why not send them a greeting card, thanking them for their friendship and letting them know that you are thinking about them?
Celebrate International Day of Friendship at School
Students can write essays about what friendships mean to them, and why they consider their friends to be their best. Similarly, art, poetry, and other avenues are all ways to get kids thinking about what friendship is.
So, today more than any other day is the chance to let all of those besties, whether near or far, know how much they are cared for and appreciated. It’s the chance to reach out to old friends, new friends, and even those you see every day of the week, and do something that celebrates what friendship means.
*ಸರ್ವರಿಗೂ ಸ್ನೇಹಿತರ ದಿನದ ಶುಭಾಶಯಗಳು*
ಆತ್ಮೀಯರೇ,
ಇಂದು ಅಂತಾರಾಷ್ಟ್ರೀಯ ಸ್ನೇಹಿತರ ದಿನ
ಅಪರಿಚಿತರು ಪರಿಚಿತರಾಗಿ ಪರಸ್ಪರ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಒಂದು ಸುಂದರ ಬಂಧವೇ ಸ್ನೇಹ. ಸ್ನೇಹಕ್ಕೆ ಯಾವುದೇ ವಯಸ್ಸಿನ, ಜಾತಿಯ, ಲಿಂಗದ, ಧರ್ಮದ ಮಿತಿಯಿಲ್ಲ. ಪರಸ್ಪರ ಅಕ್ಕರೆಯನ್ನು ತೋರುತ್ತಾ ಕೈಲಾದ ನಿಸ್ವಾರ್ಥ ಸಹಾಯ ಮಾಡುವ ಬಂಧ. ಸ್ನೇಹವನ್ನು ಅಂತರ್ವ್ಯಕ್ತೀಯ ಬಂಧದ ರೂಪ ಎಂದು ಸಹ ಹೇಳಬಹುದು. ರಕ್ತ ಸಂಬಂಧವಲ್ಲದೆ ಇದ್ದರೂ ರಕ್ತ ಸಂಬಂಧಕ್ಕೂ ಮೀರಿದ ರೀತಿಯಲ್ಲಿರುತ್ತದೆ ಸ್ನೇಹ. ಕಷ್ಟಕಾಲದಲ್ಲಿ ಯಾರೂ ಬರದೇ ಹೋದರೂ ಸ್ನೇಹಿತ ಎನಿಸಿಕೊಂಡವರು ಬಂದೇ ಬರುತ್ತಾರೆ.
ಜೀವನದಲ್ಲಿ ಯಾರು ಇಲ್ಲದೆ ಇದ್ದರೂ ಇರಬಹುದು, ಆದರೆ ಒಬ್ಬ ಉತ್ತಮ ಸ್ನೇಹಿತ / ಸ್ನೇಹಿತೆ ಇಲ್ಲದೆ ಬದುಕಲು ಸಾಧ್ಯವಿಲ್ಲ. ನಮ್ಮ ಕಷ್ಟ - ಸುಖ, ನೋವು - ನಲಿವುಗಳನ್ನು, ನಮ್ಮ ಎದೆಯಾಂತರಾಳದ ಭಾವನೆಗಳನ್ನು, ನಮ್ಮ ಮನಸ್ಸಿನ ತೊಯ್ದಾಟವನ್ನು ಹಂಚಿಕೊಳ್ಳಲು ಸ್ನೇಹಿತರು ಬೇಕು. ಒಂದರ್ಥದಲ್ಲಿ ನಮ್ಮ ಮನಸಿಗೆ ಅತ್ಯಂತ ಹತ್ತಿರದ ಒಳ್ಳೆಯ ಸ್ನೇಹಿತ / ಸ್ನೇಹಿತೆ ಇಲ್ಲದಿದ್ದಲ್ಲಿ ನಮ್ಮ ಬದುಕು ಭಾಗಶಃ ಶೂನ್ಯ. ಏಕೆಂದರೆ ಜೀವನದ ಎಲ್ಲ ಬಂಧಗಳಿಗಿಂತ, ಎಲ್ಲ ಸಂಬಂಧಗಳಿಗಿಂತ *ಸ್ನೇಹಬಂದ* ಅತ್ಯಂತ ಪ್ರಿಯವಾದ ಪ್ರಮುಖವಾದ ಹಾಗೂ ಗಟ್ಟಿಯಾದ ಬಂಧ. ನಮ್ಮ ಸುಖ - ದುಃಖ ಗಳನ್ನು ಅತ್ಯಾಪ್ತ ಸ್ನೇಹಿತರಲ್ಲಿ ಹಂಚಿಕೊಂಡಾಗ ನಮ್ಮ ಮನಸಿಗಾಗುವ ನೆಮ್ಮದಿ - ನಿರಾಳತೆಯ ಭಾವವನ್ನು ಬೇರೆ ಯಾರೂ ಕೊಡಲು ಸಾಧ್ಯವಿಲ್ಲ. ಇಂತಹ ಅಮೂಲ್ಯವಾದ ಸ್ನೆಹಬಂಧವನ್ನು ಯಾವುದೋ ಕ್ಷುಲ್ಲಕ ಕಾರಣಗಳಿಗಾಗಿ ಬೇರೆ ಮಾಡುವುದು / ಮಾಡಿಕೊಳ್ಳುವುದು ದಡ್ಡತನ.
ಸ್ನೇಹ ಸ್ಥಳದಿಂದ ಸ್ಥಳಕ್ಕೆ ಹಲವು ರೂಪಗಳಲ್ಲಿ ಬದಲಾಗಬಹುದು. ಸ್ನೇಹ, ಕೆಲವು ಗುಣಲಕ್ಷಣಗಳನ್ನು ಹೊಂದಿದೆ. ಅಂತಹ ಗುಣಲಕ್ಷಣಗಳನ್ನು ಪ್ರೀತಿ, ಸಹಾನುಭೂತಿ, ಅನುಭೂತಿ, ಪ್ರಾಮಾಣಿಕತೆ, ಪರೋಪಕಾರ ಬುದ್ಧಿ, ಪರಸ್ಪರ ಸಾಮರಸ್ಯ, ಪರಸ್ಪರರ ಕಂಪನಿ, ಸಂತೋಷಕ್ಕಾಗಿ, ನಂಬಿಕೆ ಮತ್ತು ತನ್ನನ್ನೇ ಎಂದು ಒಬ್ಬರ ಭಾವನೆಗಳನ್ನು ವ್ಯಕ್ತಪಡಿಸಲು, ಮತ್ತು ಸ್ನೇಹಿತರ ತೀರ್ಪು, ಭಯವಿಲ್ಲದೇ ತಪ್ಪುಗಳನ್ನು ತಿದ್ದುವ ಸಾಮರ್ಥ್ಯ ಸ್ನೇಹಕ್ಕೆ ಇದೆ.
ಸ್ನೇಹ ಎಂಬುದು ಬಾಂಧವ್ಯ ಅಥವಾ ಹೊಂದಾಣಿಕೆಯ ಪ್ರಜ್ಞೆಯನ್ನು ರೂಪಿಸಿ ಜೀವನದ ಉದ್ದೇಶಕ್ಕೊಂದು ಅರ್ಥಕೊಡುವ ಸಾಧನ. ಪ್ರತಿಕೂಲ ಸನ್ನಿವೇಶಗಳು ಹಾಗೂ ಮಾನಸಿಕ ಆಘಾತಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಸ್ನೇಹಕ್ಕೆ ಮಹತ್ವದ ಸ್ಥಾನವಿದೆ. ಇದು ಆತ್ಮವಿಶ್ವಾಸವನ್ನು ಗಳಿಸಿ ಗಟ್ಟಿಮಾಡಿಕೊಳ್ಳುವುದಕ್ಕೂ ಸಹಕಾರಿ, ಜೀವನದ ಆನಂದವನ್ನು ವರ್ಧಿಸುವ ಮಂತ್ರದಂಡ. ಸಮಸ್ಯೆಗಳು ತಲೆದೋರಿದಾಗ ಅದನ್ನು ಹಂಚಿಕೊಳ್ಳುವುದು ಮತ್ತು ಸಲಹೆ ಕೇಳುವುದು ಸ್ನೇಹಿತರ ಬಳಿಯೇ ಸರಾಗವೇ ಹೊರತು, ಮಿಕ್ಕವರ ಬಳಿ ಅಷ್ಟಾಗಿ ಅಲ್ಲ ಎಂಬುದು ಅನುಭವಜನ್ಯ ಮಾತು. ಸ್ನೇಹಿತರು ಯಾವಾಗಲೂ ಅತೀವ ಪ್ರಭಾವ ಬೀರುವಂಥವರಾಗಿರುವುದರಿಂದ, ವ್ಯಕ್ತಿಯೋರ್ವನ ಜೀವನ ಕೌಶಲಗಳ ಸುಧಾರಣೆಯಲ್ಲಿ ಸ್ನೇಹದ ಕೊಡುಗೆ ಹೆಚ್ಚೇ ಎನ್ನಬೇಕು. ಜಾತಿ-ಮತ, ಭಾಷೆ-ಬಣ್ಣ, ಸಾಮಾಜಿಕ ಸ್ಥಾನಮಾನ, ಶ್ರೀಮಂತಿಕೆ, ಸಾಧನೆಗಳು- ಈ ಯಾವುದೇ ಸಂಗತಿಗಳಿಗೂ ಮಿಗಿಲಾದದ್ದು ಸ್ನೇಹ.
ವ್ಯಕ್ತಿಯೊಬ್ಬ ಮೌನವಾಗಿದ್ದಾಗಲೂ ಅವನ ಅಳಲು-ಸಂಕಟವನ್ನು ಕೇಳಿಸಿಕೊಳ್ಳಬಲ್ಲಾತನೇ ನಿಜವಾದ ಸ್ನೇಹಿತ. ತನ್ನ ಆತ್ಮೀಯ ಸ್ನೇಹಿತ ಅಥವಾ ಸ್ನೇಹಿತೆಗಾಗಿ ಸಾಕಷ್ಟು ಸಹಾಯ, ಸಾಹಸ ಹಾಗೂ ಸತ್ಸಂಗತಿಗಳನ್ನು ಒಳಗೊಂಡಂತಹ ಸ್ನೇಹದ ಕಥೆಯನ್ನು ಪುರಾಣ ಇತಿಹಾಸಗಳಲ್ಲಿಯೂ ಕಾಣಬಹುದು. ಪ್ರಸ್ತುತ ಜೀವನದಲ್ಲೂ ಉದ್ಯೋಗ, ಸಾಮಾಜಿಕ ಕೆಲಸ, ವಿದ್ಯಾಭ್ಯಾಸ ಹೀಗೆ ಹತ್ತು ಹಲವು ಕ್ಷೇತ್ರದಲ್ಲಿ ಜನರು ಪರಸ್ಪರ ಸ್ನೇಹ-ಸಹಕಾರಗಳ ಮೂಲಕ ಕೆಲಸ ನಿರ್ವಹಿಸುವುದನ್ನು ಕಾಣಬಹುದು. ಕೆಲವರು ಆತ್ಮೀಯರಾಗಿ ಮಾನಸಿಕ ಸ್ಥೈರ್ಯವನ್ನು ತುಂಬುವರು.
ನಿಜ, ಅಗತ್ಯ ಇರುವಾಗ ಸಹಾಯಕ್ಕೆ ಬರುವವನೇ ನಿಜವಾದ ಸ್ನೇಹಿತ. ಅಂತಹ ಸ್ನೇಹಿತರನ್ನು ನಾವು ನಮ್ಮ ಜೀವನದಲ್ಲಿ ಪಡೆದುಕೊಂಡಿದ್ದೇವೆ ಎಂದರೆ ಅದು ನಮ್ಮ ಅದೃಷ್ಟ ಹಾಗೂ ಪುಣ್ಯ ಎನಿಸಿಕೊಳ್ಳುತ್ತದೆ. ಅಂತಹ ಸುಂದರ ಸಂಬಂಧಗಳನ್ನು ನೆನೆದುಕೊಳ್ಳಲು ಹಾಗೂ ಪ್ರೋತ್ಸಾಹಿಸುವ ಉದ್ದೇಶದಿಂದ ಸ್ನೇಹಿತರ ದಿನಾಚರಣೆಯನ್ನು ಆಚರಿಸುತ್ತೇವೆ.
ಸ್ನೇಹಿತನು ಜೀವನದಲ್ಲಿ ಅಮೂಲ್ಯವಾದ ಪಾತ್ರವನ್ನು ವಹಿಸುತ್ತಾನೆ. ಅಂತಹ ಒಂದು ಸುಂದರ ಬಂಧಕ್ಕೆ ಸ್ನೇಹದಿನ ಎಂಬ ವಿಶೇಷ ಆಚರಣೆಯನ್ನು ಹೊಂದಬೇಕು ಎನ್ನುವ ಉದ್ದೇಶದಿಂದ ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್, 1935 ರಲ್ಲಿ ಆಗಸ್ಟ್ ಮೊದಲ ಭಾನುವಾರವನ್ನು ರಾಷ್ಟ್ರೀಯ ಸ್ನೇಹ ದಿನವೆಂದು ಘೋಷಿಸಿತು.
ಅಂದಿನಿಂದ ಸ್ನೇಹ ದಿನವು ವಾರ್ಷಿಕ ಕಾರ್ಯಕ್ರಮವಾಯಿತು. ಸ್ನೇಹ ದಿನವನ್ನು ಆಚರಿಸುವ ಯಶಸ್ಸು ಮತ್ತು ಜನಪ್ರಿಯತೆಯನ್ನು ನೋಡಿದ ನಂತರ ಹಲವಾರು ಇತರ ದೇಶಗಳು ಸಹ ಆಚರಿಸಲು ಪ್ರಾರಂಭಿಸಿದವು. ನಂತರದ ದಿನಗಳಲ್ಲಿ ಸ್ನೇಹ ದಿನವು ಜನಪ್ರಿಯವಾಯಿತು. 1997 ರಲ್ಲಿ ವಿಶ್ವಸಂಸ್ಥೆಯು ವಿನ್ನಿ-ದಿ ಪೂಹ್ ಅವರನ್ನು ವಿಶ್ವದ ಸ್ನೇಹಕ್ಕಾಗಿ ರಾಯಭಾರಿಯಾಗಿ ಹೆಸರಿಸಿದೆ ಎಂದು ಘೋಷಿಸಿತು.
2011 ರಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿದ ನಿರ್ಣಯದ ಪ್ರಕಾರ ಜನಾಂಗ, ಬಣ್ಣ, ಲಿಂಗ, ಧರ್ಮ ಇತ್ಯಾದಿಗಳನ್ನು ಲೆಕ್ಕಿಸದೆ ವಿವಿಧ ದೇಶಗಳ ಜನರ ಸ್ನೇಹಕ್ಕಾಗಿ ಬಲವಾದ ಸಂಬಂಧವನ್ನು ರೂಪಿಸುವ ಉದ್ದೇಶದಿಂದ ಜುಲೈ 30 ಅನ್ನು ಅಂತರರಾಷ್ಟ್ರೀಯ ಸ್ನೇಹ ದಿನವಾಗಿ ಆಚರಿಸಲು ನಿರ್ಧರಿಸಿತು.
ಸ್ನೇಹಿತರ ದಿನವನ್ನು ಮೊದಲು ಆರಂಭಿಸಿದವರು ಜಾಯ್ಸ್ ಹಾಲ್. 1919 ರಲ್ಲಿ ಹಾಲ್ ಮಾರ್ಕ್ ಕಾರ್ಡ್ ಗಳನ್ನು ಸ್ಥಾಪಿಸಿದ ಈತ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಜನರು ಸ್ನೇಹಿತರ ದಿನವಾಗಿ ಆಚರಿಸಬೇಕೆಂದು ಬಯಸಿ ಇದನ್ನು ಆರಂಭಿಸಿದ.
1958 ರ ಜುಲೈ 20 ರಂದು ಡಾ. ಅರ್ಟೆಮಿಯೊ ಬ್ರಾಚೊ ಎಂಬವರು ವಿಶ್ವ ಮಟ್ಟದಲ್ಲಿ ಸ್ನೇಹಿತರ ದಿನವನ್ನು ಆಚರಿಸಬೇಕೆಂಬ ಪ್ರಸ್ತಾಪವನ್ನಿಟ್ಟರು. ಪರಾಗ್ವೆಯ ಅಸುನಸಿಯೊನ್ ನಿಂದ 200 ಕಿ.ಮೀ. ಉತ್ತರದಲ್ಲಿರುವ ಪರಾಗ್ವೆ ನದಿಯ ನಗರವಾದ ಪುರ್ಟೊ ಪಿನಾಸ್ಕೋದಲ್ಲಿ ತನ್ನ ಸ್ನೇಹಿತರೊಂದಿಗೆ ರಾತ್ರಿಯೂಟವನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಬ್ರಾಚೋ ಅವರು ಈ ಪ್ರಸ್ತಾವವನ್ನಿಟ್ಟಿದ್ದರು.
2011 ಎಪ್ರಿಲ್ 27 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜುಲೈ 30 ನ್ನು ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಅಚರಿಸಬೇಕೆಂಬ ನಿರ್ಣಯ ಕೈಗೊಳ್ಳಲಾಯಿತು.
ದಕ್ಷಿಣ ಅಮೆರಿಕಾದ ದಕ್ಷಿಣಭಾಗದ ಕೆಲವೊಂದು ರಾಷ್ಟ್ರಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಪರಾಗ್ವೆಯಲ್ಲಿ ಇದನ್ನು ಆಚರಿಸಲಾಗುತ್ತದೆ. 1958 ರಲ್ಲಿ ಜುಲೈ 30 ನ್ನು ವಿಶ್ವ ಸ್ನೇಹಿತರ ದಿನವನ್ನಾಗಿ ಆಚರಿಸಲು ಪರಾಗ್ವೆ ಪ್ರಸ್ತಾವ ಮಾಡಿತ್ತು. ಸಾಂಪ್ರದಾಯಿಕವಾಗಿ ಆಗಸ್ಟ್‌ನ ಮೊದಲ ಭಾನುವಾರವನ್ನು ಸ್ನೇಹಿತರ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಕೆಲವೊಂದು ರಾಷ್ಟ್ರಗಳಲ್ಲಿ ಸ್ನೇಹಿತರ ದಿನ ಆಚರಣೆಗೆ ಯಾವುದೇ ನಿಗದಿತ ದಿನವಿಲ್ಲ.
No comments:
Post a Comment
If You Have any Doubts, let me Comment Here