JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Wednesday, October 5, 2022

Area Wise Pension Scheme Data

  Jnyanabhandar       Wednesday, October 5, 2022
Subject: Check your name in pension, widow pay, disabled pay list on Your mobile




ವೃದ್ಯಾಪ್ಯ ವೇತನ, ವಿಧವ ವೇತನ, ಅಂಗವಿಕಲ ವೇತನ ಸೇರಿದಂತೆ ಇನ್ನಿತರ ಯೋಜನೆಗಳಡಿ ಪಿಂಚಣಿ ಪಡೆಯುವವರ ಹೆಸರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

 ಈ ಮೇಲಿನ ಲಿಂಕ್  ಮೇಲೆ ಕ್ಲಿಕ್ ಮಾಡಬೇಕು. ಆಗ ಸಾರ್ವಜನಿಕ ಮಾಹಿತಿ ವ್ಯವಸ್ಥೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಪ್ರದೇಶವಾರು ಪಿಂಚಣಿ ಮಾಹಿತಿ ಕೆಳಗಡೆ ಗ್ರಾಮೀಣ ಮತ್ತು ನಗರ ಪ್ರದೇಶ ಇವರೆಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನೀವು ಗ್ರಾಮೀಣ ಪ್ರದೇಶದವರಾಗಿದ್ದರೆ ಗ್ರಾಮೀಣ, ನಗರ ಪ್ರದೇಶದವರಾಗಿದ್ದರೆ ನಗರ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ನೀವು ಗ್ರಾಮೀಣ ಪ್ರದೇಶದವರಾಗಿದರೆ ಗ್ರಾಮೀಣ ಆಯ್ಕೆ ಮಾಡಿಕೊಳ್ಳಬೇಕು. ನಂತರ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ತಾಲೂಕು ಆಯ್ಕೆಮಾಡಿಕೊಂಡು ಹೋಬಳಿ ಸಹ ಆಯ್ಕೆ ಮಾಡಿಕೊಳ್ಳಬೇಕು.  ನಂತರ ಗ್ರಾಮ ಆಯ್ಕೆ ಮಾಡಿಕೊಂಡನಂತರ ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು. ಆಗ ಆ ಗ್ರಾಮದಲ್ಲಿ  ಪಿಂಚಣಿ ಸೌಲಭ್ಯ ಪಡೆಯುವರ ಹೆಸರು ಕಾಣುತ್ತದೆ. ಸೌಲಭ್ಯ ಪಡೆಯುವರ ಹೆಸರು ಕಾಣುತ್ತದೆ.  ಪಿಂಚಣಿ ಐಡಿ, ಹೆಸರು, ತಂದೆ, ಪತಿ ಹೆಸರು, ನಿಮಗೆ ಯಾವ ಯೋಜನೆಯಡಿ ಪಿಂಚಣಿ ಸಿಗುತ್ತದೆ. ಎಷ್ಟು ಹಣ ಸಿಗುತ್ತದೆ?  ಪಿಂಚಣಿಯಾವ ವರ್ಶದಿಂದ ಪಡೆಯುತ್ತಿದ್ದಾರೆ?  ನಿಮ್ಮ ಪಿಂಚಣಿ ಖಾತೆ ಆ್ಯಕ್ಟಿವ್ ಇದೆಯೋ ಇಲ್ಲವೋ ಎಂಬುದನ್ನು ಸಹ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಸಾರ್ವಜನಿಕರು ಇಂದು ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಪಿಂಚಣಿ ಪಡೆಯುತ್ತಿರುತ್ತಾರೆ. ಆದರೆ ಅವರ ಪಿಂಚಣಿ ಖಾತೆ ಆ್ಯಕ್ಟಿವ್ ಇದೆಯೋ ಇಲ್ಲವೋ ಅಥವಾ ಪಿಂಚಣಿ ಸರಿಯಾಗಿ ಬರುತ್ತಿದೆಯೋ ಇಲ್ಲವೋ ಎಂಬ ಮಾಹಿತಿ ಗೊತ್ತಿರುವುದಿಲ್ಲ. ಪಿಂಚಣಿ ಖಾತೆಯಲ್ಲಿ ಹೆಸರು, ಹುಟ್ಟಿದ ದಿನಾಂಕ, ಪಿಂಚಣಿ ಯಾವ ದಿನಾಂಕದಂದು ಮಾಡಲಾಗಿದೆ ಹಾಗೂ ಅವರಿಗೆ ಪಿಂಚಣಿ ಹಣ ಎಷ್ಟು ಜಮೆಯಾಗುತ್ತದೆ ಎಂಬ ಮಾಹಿತಿ ಗೊತ್ತಿರುವುದಿಲ್ಲ. ಅಂತಹ ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.



ಒಂದು  ವೇಳೆ ಪಿಂಚಣಿ ಪಟ್ಟಿಯಲ್ಲಿ ಹೆಸರಿದ್ದರೂ ಒಂದು ವೇಳೆ ರದ್ದುಗೊಂಡಿದ್ದರೆ ಯಾವ ಕಾರಣಕ್ಕಾಗಿ ಹೆಸರು ರದ್ದಾಗಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಇದಕ್ಕಾಗಿ ಸಾರ್ವಜನಿಕರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಅತೀ ಸುಲಭವಾಗಿ ಪಿಂಚಣಿಯ ಮಾಹಿತಿಯನ್ನು ಪಡೆಯಬಹುದು.


ಮಾಹಿತಿಯ ಕೊರತೆಯಿಂದ ಸರ್ಕಾರದ ಪಿಂಚಣಿ ಯೋಜನೆಗಳು ಸಾರ್ವಜನಿಕರಿಗೆ ತಲುಪುತಿಲ್ಲ

ಸಾರ್ವಜನಿಕರು ಸಂಧ್ಯಾ ಕಾಲದಲ್ಲಿ ನೆಮ್ಮದಿಯ ಜೀವನ ಸಾಗಿಸಲು ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಮಾಹಿತಿಕೊರೆಯಿಂದಾಗಿ ಎಲ್ಲರಿಗೂ ತಲುಪುತಿಲ್ಲ.  ಹಿರಿಯ ನಾಗರಿಕರಿಗಾಗಿ ಗುರುತಿನ ಚೀಟಿ ರಿಯಾಯಿತಿ ದರದ ಬಸ್ ಪಾಸ್, ವೃದ್ಯಾಪ್ಯ ವೇತನ, ಸಂಧ್ಯಾಸುರಕ್ಷಾ, ಇಂದಿರಾಗಾಂಧಿ ನ್ಯಾಶನಲ್ ಓಲ್ಡ್ ಏಜ್ ಪೆನಶನ್, ವಿಧವೆಯರಿಗೆ ವಿಧವಾ ವೇತನ, ಅಂಗವಿಕಲರಿಗೂ ಸರ್ಕಾರದ ವತಿಯಂದ ಅಂಗವಿಕಲ ವೇತನ ಸೇರಿದಂತೆ  ಹಲವಾರು ಯೋಜನೆಗಳಿವೆ.  ಈ ಯೋಜನೆಗಳು ಸೌಲಭ್ಯ ಪ್ರತಿಯೊಬ್ಬರಿಗೂ ಸಿಗಬೇಕಿದೆ. ಯಾರು ವಿಧವಾ ವೇತನ, ವೃದ್ಯಾಪ್ಯ ವೇತನ ಪಡೆಯುತ್ತಿಲ್ಲವೋ ಅವರು ಹತ್ತಿರದ ಸಿಎಸ್.ಸಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಬಹುದು.



Language: Kannada

Place: Karnataka

Department: DPAR

Subject Format :Pdf/JPEG


Subject Size:9545kb

Pages :02


Scanned Copy : Yes

Editable Text : NO

Password Protected : NO

Download Link : Yes

Copy Text : NO

Print Enable : Yes

Quality : High

Subject Size Reduced:No

Password : NO

Cost : Free

For Personal Use only

logoblog

Thanks for reading Area Wise Pension Scheme Data

Previous
« Prev Post

No comments:

Post a Comment

If You Have any Doubts, let me Comment Here